ನವರಸ ನಾಯಕ ಜಗ್ಗೇಶ್ ಅವರು ಸಿನಿಮಾ ನಟ, ಅಪ್ಪಟ ಕಲಾವಿದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ಅವರೊಬ್ಬ ಟಿವಿ ಶೋಗಳ ಜಡ್ಜ್ ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ಇದರ ಹೊರತಾಗಿ ಅಂದರೆ ಅವರು ಸಿನಿಮಾಗಳು, ಟಿವಿ ಶೋ ಗಳ ಹೊರತಾಗಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿರುವುದು, ಜನರ ಮೆಚ್ಚುಗೆ ಪಡೆಯುತ್ತಿರುವುದು ಮಾತ್ರ ತಾನು ಮಾಡುತ್ತಿರುವ ಮಾನವೀಯ ಕಾರ್ಯಗಳಿಂದ. ಅವರು ಮಾಡುವ ಪರೋಪಕಾರದ ಕಾರ್ಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಿಳಿದು, ಮತ್ತಷ್ಟು ಜನಕ್ಕೆ ಅಂತಹ ಕಾರ್ಯ ಮಾಡಲು ಸ್ಪೂರ್ತಿಯಾಗುವುದು ಎಂದರೆ‌ ತಪ್ಪಾಗಲಾರದು.

 

ಜಗ್ಗೇಶ್ ಅವರ ಉಡುಪಿಯ ಅಭಿಮಾನಿಗಳು ಟ್ವಿಟರ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್ ಮೂಲಕ ಹೇಗೆ ಜಗ್ಗೇಶ್ ಅವರು ಒಬ್ಬ ವಿಶೇಷ ಚೇತನರಿಗೆ ನೆರವು ನೀಡಿದ್ದಾರೆ ಎಂಬುದನ್ನು ತಿಳಿಸಲಾಗಿದೆ. ಆ ಪೋಸ್ಟ್ ನಲ್ಲಿ ” 8 ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಹೋಗುವಾಗ ಪರಿಚಯವಾದ ಆಂಧ್ರ ಪ್ರದೇಶದ ಈ ದೇವರ ಮಗನಿಗೆ ನವರಸ ನಾಯಕ ವ್ಹೀಲ್ ಚೇರ್ ತೆಗೆದುಕೊಳ್ಳಲು 10 ಸಾವಿರ ರೂಪಾಯಿ ಕೊಟ್ಟು ..ಮುಂದಿನ ಬಾರಿ ಮಂತ್ರಾಲಯಕ್ಕೆ ಬರುವಾಗ ಅವರ ಜೀವನೋಪಾಯಕ್ಕೆ ಒಂದು ಅಂಗಡಿಯನ್ನು ತೆರೆದು ಕೊಡುವುದಾಗಿ ಹೇಳಿದ್ದಾರೆ.” ಎಂದು ವಿವರಸಿದ್ದಾರೆ

ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಅವರು
“ಪರೋಪಕಾರಮಿದಂಪುಣ್ಯಂ..ಶ್ರೀಕೃಷ್ಣ 38 ವರ್ಷದ ಹಿಂದೆ ನಾನು ಕೈಕಾಲು ಇದ್ದು ಚಿತ್ರರಂಗದಲ್ಲಿ ಕೆಲಸಬೇಡುತ್ತಿದ್ದ ಭಿಕ್ಷುಕ.! ಆಗ ಅನೇಕ ಮಹನೀಯರು ನನಗೆ ಸಹಾಯಮಾಡಿ ಬೆಳಸಿ! ಜಗ್ಗೇಶ್ ಮುಂದೆ ನೀನು ಬೆಳೆದಾಗ ಕಷ್ಟಕ್ಕಾಗುವ ಬಂಧುವಾಗು ಎಂದು ಹರಸಿದ್ದರು!ಈ ಪುಣ್ಯ ನನ್ನ ಬೆಳಸಿದ ಚಿತ್ರರಂಗದ ಮಹನೀಯರಿಗೆ ಅರ್ಪಣೆ.. ಧನ್ಯವಾದಗಳು ಸಹೋದರರೆ..” ಎಂದು ಹೇಳುವ ಮೂಲಕ ತಾನು ಮಾಡುವ ಸಹಾಯಗಳ ಹಿಂದಿನ ಕಾರಣವನ್ನು ಬಹಳ ಸರಳವಾಗಿ ಹಾಗೂ ಆ ಮೂಲಕ ನಾವು ಬೆಳೆದಾಗ ಇತರರನ್ನು ಬೆಳೆಸುವ ಯತ್ನ ಮಾಡಬೇಕೆಂದು ಬಹಳ ಮಾರ್ಮಿಕವಾಗಿ ತಿಳಿಸಿ ಕೊಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here