ನವರಸ ನಾಯಕ ಜಗ್ಗೇಶ್ ಅವರು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿರುತ್ತಾರೆ.‌ ಅಲ್ಲದೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಕ್ರಿಯವಾಗಿರುವ ಮೂಲಕ ತಮ್ಮ ಆಲೋಚನೆ, ಆಚರಣೆಗಳ‌ ಕುರಿತಾಗಿ ವಿಷಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ಸಮಾಜ ಮುಖಿಯಾದ ಹಲವು ವಿಚಾರಗಳನ್ನು ಕೂಡಾ ಚರ್ಚೆ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಕೂಡಾ ಮಾಡುತ್ತಾ ಇರುತ್ತಾರೆ. ಅಲ್ಲದೇ ಯಾರಿಗಾದರೂ ಕಷ್ಟ ಎನ್ನುವುದು ತಿಳಿದಾಗ ತನ್ನಿಂದಾಗುವ ಸಹಾಯವನ್ನು ಮಾಡುವುದೇ ಅಲ್ಲದೇ ಅದರ ಬಗ್ಗೆ ಇತರರಿಗೂ ತಿಳಿಸಿ ಸಹಾಯ ಒದಗುವಂತೆ ಮಾಡುತ್ತಾರೆ.

ಜಗ್ಗೇಶ್ ಅವರು ಸರಿಗಮಪ ಹಾಡಿನ ರಿಯಾಲಿಟಿ ಶೋ ಗೆ ಬಂದ ಅಂಧರಾದ ಸಹೋದರಿಯ ರಿಗೆ ಇರುವುದಕ್ಕೊಂದು ಅಚ್ಚುಕಟ್ಟಾದ ಮನೆಯನ್ನು ಕಟ್ಟಿಸಿಕೊಟ್ಟಿದ್ದರು, ಅಲ್ಲದೇ ಕೆಲವು ತಿಂಗಳ ಹಿಂದೆಯಷ್ಟೇ ನಟನೊಬ್ಬರಿಗೆ ಆರೋಗ್ಯ ಸಮಸ್ಯೆ ಆದಾಗ ಅವರ ನೆರವಿಗೆ ಧಾವಿಸಿದ್ದ ಜಗ್ಗೇಶ್ ಅವರು ಅದನ್ನು ಟ್ವಿಟರ್ ಮೂಲಕ ಹಂಚಿಕೊಂಡು ಆ ನಟನಿಗೆ ಸಹಾಯ ದೊರಕುವಂತೆ ಕೂಡಾ ಮಾಡಿದ್ದರು. ಈಗ ಜಗ್ಗೇಶ್ ಅವರು ಅಂತಹುದೇ ಒಂದು ಮಾನವೀಯ ಕಾರ್ಯವನ್ನು ಮಾಡಿದ್ದು ಅದರ ಬಗ್ಗೆ ಅವರ ಅಭಿಮಾನಿಗಳು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರ ಅಭಿಮಾನಿಗಳು ತಮ್ಮ ಅಧಿಕೃತ ಖಾತೆಯ ಮೂಲಕ ಟ್ವೀಟ್ ಮಾಡಿ, ‘ಸಂಕಷ್ಟ ಸಮಯದಲ್ಲೂ ಸಮಾಜದ ಒಳಿತಿಗಾಗಿ ಸದಾ ಹಾತೊರೆಯುವ ಮನಸ್ಸು ನಮ್ಮ ಜಗ್ಗಣ್ಣನವರದ್ದು.. ಇಂದು ನೇಕಾರರಿಗೆ ಸಹಾಯ ಆಗುವ ನಿಟ್ಟಿನಲ್ಲಿ 50,000/- ರೂ ಗಳಷ್ಟು ಸೀರೆಯನ್ನು ಖರೀದಿಸಿ ಉತ್ತರ ಕರ್ನಾಟಕದ ಅಕ್ಕ ತಂಗಿಯರಿಗೆ ಉಡುಗೊರೆಯಾಗಿ ನೀಡಿದ್ದಾರೆ.. ಹೀಗೆ ಜನಸೇವೆ ಮಾಡುವ ಹೆಚ್ಚಿನ ಶಕ್ತಿ ರಾಯರು ನೀಡಲಿ..!!ನೀವು ನಮ್ಮ ಹೆಮ್ಮೆ ಅಣ್ಣ’ ಎಂದು ಟ್ವೀಟ್ ಮಾಡಿ ಜಗ್ಗೇಶ್ ಅವರು ಮಾಡಿರುವ ಉತ್ತಮವಾದ ಕಾರ್ಯದ ಬಗ್ಗೆ ತಿಳಿಸಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here