ನವರಸನಾಯಕ ಜಗ್ಗೇಶ್ ಅವರು ಆಗಾಗ ತಮ್ಮ ಹಳೆಯ ನೆನಪಿನ ಬುತ್ತಿಗಳನ್ನು ಕನ್ನಡ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಜಗ್ಗೇಶ್ ಅವರು ಹಂಚಿಕೊಂಡ ಒಂದು ಅಪರೂಪದ ಸ್ಟೋರಿಯ ಯಥಾವತ್ ರೂಪ ಇಲ್ಲಿದೆ ನೋಡಿ. “1979ಯಲ್ಲಿ ನಟ ಆಗುವ ಕನಸು ಹೊತ್ತು..ಅಂದಿನ ಪ್ರಜಾಮತ ವಾರಪತ್ರಿಕೆಯಲ್ಲಿ ರಾಜಣ್ಣನ ವಿಳಾಸ ಹರಿದು ಜೋಬಲ್ಲಿ ಇಟ್ಟು..ಅಮ್ಮನ ಪರ್ಸ್ನಲ್ಲಿ 800ರೂ ಕದ್ದು ಮದರಾಸಿಗೆ ರೈಲಿನಲ್ಲಿ ಹೋಗಿ..23B ಬಸ್ಸು ಹತ್ತಿ ಟ್ರಸ್ಟ್ ಪುರಂ ಹೋಗಿ..
ಅಣ್ಣನ ಮನೆ ಹುಡುಕುವ ಮುನ್ನ ಮರುಗನ ಆಲಯಕ್ಕೆ ಹೋಗಿ ನಮಸ್ಕರಿಸಿ..ಅಣ್ಣನ ಈ ಮನೆಮುಂದೆ ನಿಂತೆ!ಸುಮಾರು ಹೊತ್ತು ಕಾದರು ಯಾರು ಕಾಣಲಿಲ್ಲಾ!ಈಗ ಚಿತ್ರದಲ್ಲಿ ಇರುವ ಗೇಟಿನ ಮುಂದೆ ಅಣ್ಣನ ನೋಡಲೆಬೇಕು ಎಂದು ಹಟಮುನಿಯಂತೆ ನಿಂತೆ..ಇದ್ದಕ್ಕಿದ್ದಂತೆ ಮಿಂಚು ಮೋಡದಂತೆ ನನ್ನ ಇಷ್ಟದ ದೇವರು ಬಂದುಬಿಟ್ಟರು!

ಆದರೆ ಪರದೆ ಮೇಲೆ ನೋಡಿದಂತೆ ಅಲ್ಲಾ ಬದಲಾಗಿ ಟವಲ್ ಸುತ್ತಿ ಸಾಮಾನ್ಯನಂತೆ ತುಳಸಿಕಟ್ಟೆಗೆ ನಮಸ್ಕಾರ ಮಾಡುತ್ತಿದ್ದರು!
ಆನಂದ ತಡೆಯಲಾಗಲಿಲ್ಲಾ!ಅವರನ್ನೆ ಮೂಕವಿಸ್ಮಿತನಾಗಿ ನೋಡುತ್ತ ನಿಂತುಬಿಟ್ಟೆ!
ತಡೆಯಲಾಗದೆ ಜೋರಾಗಿ ಅಣ್ಣ ಅಂತ ಕೊಗಿದೆ!
ಅವರು ನನ್ನ ನೋಡುತ್ತ ಒಳಹೋದರು!ನಂತರ ಬಂದದ್ದು ಒಬ್ಬ ಎತ್ತರದ ವ್ಯಕ್ತಿ!ಬಂದ ಕಾರಣ ಕೇಳಿದ!ನಟನಾಗಲು ಬಂದೆ ಎಂದು ಹೇಳಿದೆ!ಅದಕ್ಕೆ ಅವನು ಯಾವ ಊರು ಅಂದ?ತುರುವೇಕೆರೆ ಪಕ್ಕ ಮಾಯಸಂದ್ರ ಅಂದೆ!ಅದಕ್ಕೆ ಅವನು ಮಗು ನಾನು ತಿಪಟೂರು ನೀನು ಮನೆಬಿಟ್ಟು ಬಂದದ್ದು ತಪ್ಪು!ಈಗ ಅಣ್ಣ ಚಿತ್ರೀಕರಣಕ್ಕೆ ತಡವಾಗಿದೆ ಅವರು ಹೊರಡ ಬೇಕು ನಿಲ್ಲಬೇಡ ಹೊರಡು ಎಂದು ಗದರಿದ..ನಾನು ನಟನಾದ ಮೇಲೆ ಅವನ ಗುರುತಿಸಿದೆ ಅವನೆ ತಿಪಟೂರು ಸಿದ್ದರಾಮಯ್ಯ!

 


ಇದ ಅವನಿಗೆ 1993ರಲ್ಲಿ #ಇಂದ್ರನ ಗೆದ್ದ ನರೇಂದ್ರ ಚಿತ್ರೀಕರಣದಲ್ಲಿ ನೆನೆಸಿದಾಗ ಕೈಹಿಡಿದು ಜೋರಾಗಿ ನಕ್ಕುಬಿಟ್ಟ!ಕಕ್ಕಾಬಿಕ್ಕಿಯಾಗಿ ಎಲ್ಲಿಂದ ಎಲ್ಲಿಗೆ ಜಗ್ಗೇಶ್ ಎಂದು ಚಪ್ಪಾಳೆತಟ್ಟಿದ!ಅಂದು ತಪ್ಪಿದ ಅವಕಾಶ ಮುಂದೆ ರಾಯರು ರಾಜಣ್ಣ ಜೊತೆ 18ವರ್ಷ ಕಳೆಯುವ ಯೋಗ ನೀಡಿದರು ಧನ್ಯೋಸ್ಮಿ…
ನನ್ನ ದೇವರ ಆ ಮನೆ ಮುಂದೆ ನಟನಾಗಿ ಮತ್ತೆ ನಾನು ಹೋಗಿ ನಿಂತ ಕ್ಷಣ!ಕಲಾದೇವರು ಪೂಜಿಸಿದ ದೇವರಮನೆ!ಅವರು ಕೂತು ವಿಶ್ರಮಿಸಿದ ವರಾಂಡ!ಅವರ ಅಡುಗೆ ಮನೆ!


ನೋಡಿ ಆನಂದಿಸಿ!ನೂರಾರು ಕನ್ನಡ ಚಿತ್ರಗಳ ನಟಿಸಲು ಪ್ರೇರೇಪಿಸಿದ ಆ ಮನೆ ನನಗೆ ರಾಯರ ಮಂತ್ರಾಲಯದಂತೆ ಭಾಸವಾಯಿತು!
ರಾಜಣ್ಣನ ಎಲ್ಲಾ ಮಕ್ಕಳು ಹುಟ್ಟಿ ಆಡಿ ನಲಿದ ನಂದಗೋಕುಲ..ಇನ್ನೊಂದು ಚಿತ್ರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರಾಜಣ್ಣ ಕೂರುತ್ತಿದ್ದ ಆಸನ!ಅಣ್ಣ ಮೇಲೆ ಕೂತಾಗ ಅವರ ಪಾದದ ಬಳಿ ನಾನು ಕೂತಂತ ಜಾಗ!ಕಳೆದ ಶ್ರೇಷ್ಟ ಸಮಯ ನೆನೆಯಲು ಅತೀವ ಆನಂದ ಮನಸ್ಸಿಗೆ!ಜಗ್ಗೇಶ್ ಬದುಕಿನ ಮರೆಯಲಾಗದ ಆ ದಿನಗಳು…ಅಮರ ಹಳೆ ನೆನಪು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here