ನಿರ್ಭಯಾ ಹಂತಕರಿಗೆ ಕೊನೆಗೂ ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆ ತಡವಾಗಿಯಾದರೂ ದೊರೆತಿದೆ. ಸತತ ಏಳು ವರ್ಷಗಳಿಂದ ಕಾನೂನನ್ನು ಬಳಸಿಕೊಂಡು ತಮ್ಮ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಎಷ್ಟೆಲ್ಲಾ ಸಾಧ್ಯವೋ ಅಷ್ಟೂ ಪ್ರಯತ್ನಿಸಿದ ಪಾಪಿಗಳ ಅಂತ್ಯವಾದ ಈ ದಿನ ಶುಭ ಶುಕ್ರವಾರವೇ ಸರಿ‌. ಹೆಣ್ಣಿನ ಮೇಲೆ ದೌರ್ಜನ್ಯ ಮೆರೆತು, ವಿಕೃತಿ ಯನ್ನು ತೋರಿ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕಿರಾತಕರು ಇಂದು ನರಕವನ್ನು ತಲುಪಿದ್ದು, ಮಗಳಿಗಾದ ಅನ್ಯಾಯವನ್ನು ಎದುರಿಸಿ ಹೋರಾಡಿದ ನಿರ್ಭಯಾ ತಾಯಿಗೆ ಕಡೆಗೂ ಸಮಾಧಾನದ ನಿಟ್ಟುಸಿರು ಬಿಡಲು ನ್ಯಾಯಾ ವ್ಯವಸ್ಥೆ ಅವಕಾಶವನ್ನು ಕಲ್ಪಿಸಿದೆ. ಭಾರತೀಯರಿಗೆ ನ್ಯಾಯದ ಮೇಲೊಂದು ನಂಬಿಕೆಯನ್ನು ಹುಟ್ಟಿಸಿದೆ.

ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಹ್ಯಾಂಗ್ ಮನ್ ಪವನ್ ಅವರಿಗೆ ಈ ಹಿಂದೆ ನವರಸ ನಾಯಕ ಜಗ್ಗೇಶ್ ಅವರು ಒಂದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಜಗ್ಗೇಶ್ ಅವರು ತಾವು ಹೇಳಿದ ಮಾತಿನಂತೆ, ಅತ್ಯಾಚಾರಿಗಳನ್ನು ಗಲ್ಲಿಗೆ ಏರಿಸಿದ ಹ್ಯಾಂಗ್ ಮನ್ ಪವನ್ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನು ಚೆಕ್ ರೂಪದಲ್ಲಿ ನೀಡುವ ಮೂಲಕ ತಾವು ಕೊಟ್ಟ ಮಾತನ್ನು ಪೂರೈಸಿದ್ದಾರೆ. ಅಲ್ಲದೆ ಈ ಕುರಿತಾಗಿ ಜಗ್ಗೇಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಕೂಡಾ.

ಅವರು ತಮ್ಮ ಟ್ವೀಟ್ ನಲ್ಲಿ “ಕೊಟ್ಟ ಮಾತಿನಂತೆ 1 ಲಕ್ಷ ರೂ ನಿರ್ಭಯ ಹಂತಕರ ಹ್ಯಾಂಗ್ ಮೆನ್ ಗೆ
ನನ್ನ ಧೇಣಿಗೆ.. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ! ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲಾ! ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲಾ!
ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ! ಸುದ್ಧಿಕೇಳಲು ನಿದ್ರೆಮಾಡದೆ ಕಾದೆ!ಹರಿಓಂ. ಶುಭ ದಿನ” ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here