ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮ ದಿನ ಇದೇ ಮಾರ್ಚ್ 17. ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ಇದೊಂದು ದೊಡ್ಡ ಸಂಭ್ರಮ ಎಂದರೂ ಕೂಡಾ ಹೌದು. ಪ್ರತಿ ವರ್ಷ ಕೂಡಾ ಅಭಿಮಾನಿಗಳು ಪುನೀತ್ ಅವರ ಜನ್ಮದ ದಿನದ ಅಂಗವಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಕೂಡಾ ಮಾಡುತ್ತಾರೆ. ಇನ್ನು ಈ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನ ಬರಲಿದ್ದು, ಅಭಿಮಾನಿಗಳು ಈಗಾಗಲೇ ಅವರಿಗೆ ಮುಂಗಡವಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ ಹಾಗೂ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ‌

ಇದರ ನಡುವೆ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ ಅವರು ಕೂಡಾ‌ ಪುನೀತ್ ರಾಜ್‍ಕುಮಾರ್ ಅವರಿಗೆ ಅಡ್ವಾನ್ಸ್ ಆಗಿ ಜನ್ಮದಿನದ ಶುಭಾಶಯನ್ನು ಕೋರುತ್ತಾ ಟ್ವೀಟ್ ಒಂದನ್ನು ಮಾಡಿದ್ದಾರೆ. ಜಗ್ಗೇಶ್ ಅವರು ತಮ್ಮ ಟ್ವೀಟ್ ನಲ್ಲಿ, “ನನ್ನ ನಲ್ಮೆಯ ತಮ್ಮ…ನನ್ನ ಆಯುಷ್ಯ ರಾಯರು ಈತನಿಗೆ ಕೊಟ್ಟು ಅಪ್ಪನ ಹೆಸರು ಮುಂದುವರಿಸುವ ರಾಜಕುಮಾರ ಆಗಲಿ…ಯಾವ ದೇವರ ವರವೋ ನಾನು ಪುನೀತ್ ,
ಡಿವಿ ಗುಂಡಪ್ಪ, ಕಲ್ಪನ ಚಾವ್ಲ ಮಾರ್ಚ್ 17 ರಂದು ಹುಟ್ಟಿದವರು..ಈ ಬಾರಿಯು ನನ್ನ ಹುಟ್ಟುಹಬ್ಬ ಮಂತ್ರಾಲಯ ರಾಯರ ಬೃಂದಾವನದ ಮುಂದೆಯೇ…ಧನ್ಯವಾದಗಳು ಎಂದು ಹೇಳಿದ್ದಾರೆ.

ಇನ್ನು ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಣೆ ಮಾಡುತ್ತಿಲ್ಲ. ಈಗಾಗಲೇ ಸರ್ಕಾರ ಕೂಡಾ ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳು ಬೇಡ ಎಂದು ನಿರ್ಬಂಧವನ್ನು ಹೇರಿದೆ. ಆದರೆ ಪುನೀತ್ ಅವರು ಸರ್ಕಾರದ ನಿರ್ಣಯಕ್ಕಿಂತ ಮೊದಲೇ, ಸಾಮಾಜಿಕ ಕಳಕಳಿಯಿಂದ ಈ ಬಾರಿ ತಮ್ಮ ಹುಟ್ಟು ಹಬ್ಬದ ಆಚರಣೆ ಬೇಡವೆಂದು ತಿಳಿಸಿರುವುದನ್ನು ನಾವು ಗಮನಿಸಬಹುದು. ‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here