ನಟ ಕೋಮಲ್ ಅವರ ಮೇಲೆ ಇಂದು ನಡೆದ ಹಲ್ಲೆಯ ವಿಚಾರದಲ್ಲಿ ಅವರ ಅಣ್ಣ ನಟ ಹಾಗೂ ರಾಜಕಾರಣಿಯಾದ ಜಗ್ಗೇಶ್ ಅವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾತನಾಡುತ್ತಾ ಇದು ಯಾರು ಮಾಡಿರುವುದು ಅಂತ ನನಗೆ ಗೊತ್ತಾಗುತ್ತೆ ಎನ್ನುತ್ತಾ ಕೋಮಲ್ ತನ್ನ ಮಗೂನಾ ಟ್ಯೂಷನ್ ಗೆ ಬಿಡೋಕೆ ಹೋಗುವಾಗ ಬೈಕ್ ಸವಾರರು ಸೈಡ್ ಬಿಡಲಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ ಮಾಡಿ ನಂತರ ಕೋಮಲ್ ನ ಮೂರು ನಾಲ್ಕು ಜನ ಲಾಕ್ ಮಾಡಿಕೊಂಡು ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಇಂತಹವರು ಅಂದರೆ ಕುಡಿದು, ಡ್ರಗ್ಸ್ ತಗೊಂಡು, ಹುಡುಗಿಯರನ್ನು ಹಿಂದೆ ಹಾಕ್ಕೊಂಡು ಶೋ ಆಫ್ ಮಾಡೋ ದೊಡ್ಡ ಗ್ಯಾಂಗೇ ಇದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಲ್ಲಿ ಇಂತವರ ಸಂಖ್ಯೆ ಜಾಸ್ತಿಯಾಗ್ತಾ ಇದೆ ಇವರನ್ನೆಲ್ಲಾ ನಿಯಂತ್ರಣ ಮಾಡಬೇಕು ಎಂದು ಹೇಳುತ್ತಾ, ಬಿಲ್ಡಪ್ ಕೊಡೋದಕ್ಕೆ ಅವರು ಕೋಮಲ್ ನನ್ನು ಎಳೆದಾಡಿದ್ದಾರೆ. ಮುಖಕ್ಕೆ ಪಂಚ್ ಮಾಡಿ ರಕ್ತ ಬರೋ ಹಾಗೆ ಮಾಡಿದ್ದಾರೆ ಎಂದು ಹಲ್ಲೆ ಮಾಡಿದ ಯುವಕರ ಕುರಿತಾಗಿ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಮ್ಮ ಕಾನೂನು ವ್ಯವಸ್ಥೆ ಬಹಳ ಸದೃಢವಾಗಿದ್ದು, ಪೋಲಿಸ್ ವ್ಯವಸ್ಥೆ ಕೂಡಾ ಸಶಕ್ತವಾಗಿದೆ. ಇಂತಹವರನ್ನು ಸುಮ್ಮನೆ ಬಿಡದೆ ಮಟ್ಟ ಹಾಕೋ ಅಗತ್ಯ ಇದೆ ಎಂದು ಪೋಲಿಸ್ ಇಲಾಖೆಯವರಿಗೆ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ನಂತರ ಅವರು ಮಾತನಾಡುತ್ತಾ ಇದು ಹೊರಗಿನವರೋ, ಸಿನಿಮಾ ಇಂಡಸ್ಟ್ರಿ ಅವರೋ ಮಾಡಿಸಿರುವುದು ಅಂತ ನನಗೆ ಗೊತ್ತಾಗುತ್ತೆ. ಹಾಗೇನಾದ್ರೂ ಇಂಡಸ್ಟ್ರಿ ಅವರೇ ಆದರೆ ನಾನು ಸುಮ್ಮನೆ ಬಿಡಲ್ಲ ಅಂತ ಅವರು ಹೇಳಿದ್ದಾರೆ. ನಾನು ಮೂವತ್ತು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇನೆ ಎಲ್ಲಾ ನೋಡಿದ್ದೇನೆ. ನನಗ್ಯಾಕೋ ಇದು ಬೇರೆ ತರಾನೇ ಸ್ಮೆಲ್ ಬರ್ತಿದೆ ಎಂದು ಅನುಮಾನದ ಮಾತನ್ನು ಅವರು ಆಡುವ ಮೂಲಕ ವಿಷಯದ ಬಗ್ಗೆ ಹೆಚ್ಚೇನು ಹೇಳಲಿಲ್ಲ‌. ಕೋಮಲ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here