ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಫುಲ್ ನಟಿಯಾಗಿ ಯಶಸ್ಸಿನ್ನು ಪಡೆದವರು ನಟಿ ರಮ್ಯಾ, ಅದರ ಜೊತೆಗೆ ರಾಜಕಾರಣದಲ್ಲಿಯೂ ಸಹಾ ಸಕ್ರಿಯವಾಗಿ ತೊಡಗಿಕೊಂಡ ಆಕೆ ಅಲ್ಲೂ ಕೂಡಾ ಹೆಸರನ್ನು ಮಾಡಿದರು‌. ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಮೇಲೆ ಅವರು ಚಿತ್ರರಂಗದಿಂದ ದೂರ ಸರಿದು, ತಮ್ಮ ಬಹುತೇಕ ಸಮಯವನ್ನು ರಾಜಕೀಯಕ್ಕೆ ಮೀಸಲಿಟ್ಟಿದ್ದರು. ಲೋಕಸಭಾ ಚುನಾವಣೆಯ ನಂತರ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವಂತೆ ಕಾಣುತ್ತಿದ್ದು, ರಮ್ಯಾ ಇದ್ದಕ್ಕಿದ್ದಂತೆ ರಾಜಕೀಯದಿಂದ ಅಂತರ ಕಾಯ್ದು ಕೊಂಡಾಗ ಅವರು ಎಲ್ಲಿ ಹೋದರೆಂದು ಎಲ್ಲರು ಪ್ರಶ್ನೆ ಮಾಡುವಾಗಲೇ ಅದಕ್ಕೆ ಉತ್ತರ ದೊರೆತಿದೆ.

ನಟಿ, ರಾಜಕಾರಣಿ ರಮ್ಯಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಅವರು ಸಪ್ತಪದಿ ತುಳಿಯಲು ಸಿದ್ಧತೆ ನಡೆಸಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. ಕಳೆದ 2 ವರ್ಷಗಳಿಂದ ಎಲ್ಲಿಯೂ ಮದುವೆ ಬಗ್ಗೆ ಪ್ರಸ್ತಾಪಿಸಿದ ಅವರು ಇದೀಗ ಸದ್ದಿಲ್ಲದೆ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆನ್ನಲಾಗಿದೆ. ಮೂವತ್ತೇಳು ವಯಸ್ಸಿನ ರಮ್ಯಾ ಅವರು ತಮ್ಮ ಬಹು ಕಾಲದ ಗೆಳೆಯನೊಂದಿಗೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಅದಕ್ಕೆ ಅವರು ಇತ್ತೀಚಿಗೆ ರಾಜಕಾರಣದಲ್ಲಿ ಅಷ್ಟಾಗಿ ಎಲ್ಲೂ ಕಾಣುತ್ತಿಲ್ಲ.‌

ಕೆಲ ವರ್ಷಗಳ ಹಿಂದೆ ಸುದ್ದಿಯಾಗಿದ್ದಂತೆ ರಮ್ಯಾ ಅವರು ತಮ್ಮ ಬಹುಕಾಲದ ಗೆಳೆಯ ರಫೆಲ್ ಜತೆಗೆ ವಿವಾಹ ಮಾಡಿಕೊಳ್ಳುತ್ತಿದ್ದು, ಅವರ ಮದುವೆ ದುಬೈನಲ್ಲಿ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಏಳೆಂಟು ವರ್ಷಗಳ ಹಿಂದೆ ರಮ್ಯ ಮತ್ತು ಅವರ ಗೆಳೆಯ ಒಟ್ಟಾಗಿ ಕಾಣಿಸಿಕೊಂಡು, ಅದು ಸುದ್ದಿಯಾಗಿತ್ತು. ಈಗ ರಮ್ಯಾ ಅವರು ಸದ್ಯದಲ್ಲೇ ಪೋರ್ಚುಗಲ್ ದೇಶದ ರಫೆಲ್ ಜತೆಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  ಇನ್ನು ರಮ್ಯಾ ಮದುವೆ ವಿಚಾರ ವೈರಲ್ ಆಗುತ್ತಿದ್ದಂತೆ ನವರಸನಾಯಕ ಜಗ್ಗೇಶ್ ಟ್ವಿಟ್ಟರ್ನಲ್ಲಿ ಶುಭವಾಗಲಿ ಎಂದು ಹಾರೈಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here