ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ರಾಜಕೀಯ ನಡೆ ಈಗ ಸ್ಥಗಿತವಾಗಿದೆ. ಕಳೆದ ಐದಾರಯ ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿರುವ ಜನಾರ್ದನ ರೆಡ್ಡಿ ಅವರಿಗೆ ಇದೀಗ ಮತ್ತೆ ರಾಜಕೀಯದ ಮೇಲೆ ಆಶಕ್ತಿ ಹೆಚ್ಚಾಗಿದೆ. ಇದೀಗ ಜನಾರ್ದನ ರೆಡ್ಡಿ ಅವರು ಮತ್ತೆ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡುವ ಮಾತುಗಳನ್ನು ಆಡಿದ್ದಾರೆ‌ ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಮಾತನಾಡಿದ್ದು, ಕಷ್ಟದ ದಿನಗಳಿಂದ ಹೊರಬಂದ ನಂತರ 3 ವರ್ಷಗಳಿಂದ ಬೆನಕಟ್ಟಿಗೆ ಬರಲಾಗಲಿಲ್ಲ. ವೇಮನ್‌ರಿಗೆ ಮತ್ತು ಬೆನಕಟ್ಟಿ ಗ್ರಾಮಸ್ಥರಿಗೆ ಗೌರವ ಸಲ್ಲಿಸಲು 9 ಕಿಮೀ ಪಾದಯಾತ್ರೆಗೆ ಮುಂದಾದೆ. ಪಾದಯಾತ್ರೆ ಮಾಡಿದ್ದು ರಾಜಕೀಯ ಉದ್ದೇಶಕ್ಕಲ್ಲ. ವೇಮನ, ಬೆನಕಟ್ಟಿ ಗ್ರಾಮಸ್ಥರಿಗೆ ಗೌರವ ಸಲ್ಲಿಸೋಕೆ ಎಂದಿದ್ದಾರೆ.

ರಾಜಕೀಯ ಜೀವನಕ್ಕೆ ಬರುವ ಬಗ್ಗೆ ಮಾತನಾಡಿದ ರೆಡ್ಡಿ, ನಾನು ರಾಜಕೀಯಕ್ಕೆ ಬರೋಕ್ಕೆ ಒಂದು ವರ್ಷವಷ್ಟೇ ಸಾಕು. ಮುಂದೆ ಮತ್ತೆ ರಾಜಕೀಯಕ್ಕೂ ಬಂದೇ ಬರುತ್ತೇನೆ. ಇಡೀ ದೇಶವೇ ನೋಡುವಂತೆ ಕರ್ನಾಟಕದ ಒಬ್ಬ ಒಳ್ಳೆಯ ರಾಜಕಾರಣಿಯಾಗಿ ಬೆಳೆಯುತ್ತೇನೆ. ಕರ್ನಾಟಕದಲ್ಲಷ್ಟೇ ಅಲ್ಲ ದೇಶದಲ್ಲಿಯೂ ರೆಡ್ಡಿ ಸಮಾಜ ಸಂಘಟನೆ ಮಾಡ್ತೇನೆ ಎಂದು ಹೇಳಿದರು.

ಅಲ್ಲದೇ, 2008ರಲ್ಲಿ ಯಡಿಯೂರಪ್ಪ ಸರ್ಕಾರ ರಚನೆ ಮಾಡುವಾಗಲೂ ಒಬ್ಬ ರೆಡ್ಡಿಯಾಗಿ ಕೆಲಸ ಮಾಡಿದ್ದೇನೆ. ವೇಮನ್ ಮೇಲೆ ಆಣೆ ಮಾಡ್ತೇನೆ. ನನ್ನ ಜೀವನ ಎರಡು ಭಾಗವಾಗಿ ನೋಡ್ತೀನಿ. ಮಂತ್ರಿ, ಅಧಿಕಾರ, ಹೆಲಿಕಾಪ್ಟರ್ ಮೊದಲ ಹಂತದ ಜೀವನ. ರೆಡ್ಡಿ ಸಮಾಜ ಜನರೊಂದಿಗಿನ ಜೀವನ ಎರಡನೇ ಹಂತದ ಜೀವನ ಆಗಿದೆ ಎಂದು ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here