ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಮೈಸೂರು ಎಕ್ಸ್‌ಪ್ರೆಸ್ ಜಾವಗಲ್​ ಶ್ರೀನಾಥ್ ಅವರ ತಂದೆ ಚಂದ್ರಶೇಖರ್(85) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ವಯೋಸಹಜ ಸಹಜ ಸಮಸ್ಯೆ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರು, ಮೈಸೂರಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ಲಭ್ಯವಾಗಿದೆ.ಚಂದ್ರಶೇಖರ್‌ ಅವರ ಔರ್ಧ್ವದೈಹಿಕ ಕ್ರಿಯೆಯನ್ನು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿಸಲಾಯಿತು.ಈ ವೇಳೆ ಶ್ರೀನಾಥ್​​ ಗೆಳೆಯರಾದ ರಾಹುಲ್​ ದ್ರಾವಿಡ್​​, ಅನಿಲ್​ ಕುಂಬ್ಳೆ ಉಪಸ್ಥಿತರಿದ್ದರು.
ಕ್ರಿಕೆಟರ್​​ ಜಾವಗಲ್​ ಶ್ರೀನಾಥ್​​ ಅವರ ತಂದೆ ಬೆಳಗಿನ ಜಾವ ಮೈಸೂರಿನಲ್ಲಿ ವಿಧಿವಶರಾಗಿದ್ದರು.

ತಂದೆಯ ನಿಧನದ ನೋವಿನಲ್ಲಿದ್ದ ಶ್ರೀನಾಥ್​ ಅವರಿಗೆ ಸಾಂತ್ವನ ಹೇಳಲು ರಾಹುಲ್​ ದ್ರಾವಿಡ್​​ ಮತ್ತು ಅನಿಲ್​ ಕುಂಬ್ಳೆ ಬಂದಿದ್ದರು. ಶ್ರೀನಾಥ್​ ಜೊತೆಗೆ ಸ್ನೇಹವನ್ನು ಕ್ರಿಕೆಟ್​ ಆಟದಲ್ಲಿ ಅಷ್ಟೇ ತೋರಿಸದೇ, ಸ್ನೇಹಿತನ ನೋವಿನಲ್ಲಿ ಬಂದು ಸಾಂತ್ವನ ಹೇಳುವ ಮೂಲಗ ತಮ್ಮ ಗಾಢ ಸ್ನೇಹವನ್ನು ಮೆರೆದಿದ್ದಾರೆ. ಯಾವುದೇ ಪ್ರಚಾರವಿಲ್ಲದೇ ಅತ್ಯಂತ ಸಾಮಾನ್ಯರಂತೆ ಬಂದು, ಸಾಮಾನ್ಯರಂತೆ ಬೆಂಗಳೂರಿಗೆ ಮರಳಿದ್ದಾರೆ.

ಅನಿಲ್ ಕುಂಬ್ಳೆ , ವೆಂಕಟೇಶ್ ಪ್ರಸಾದ್ ಮತ್ತು ಜಾವಗಲ್ ಶ್ರೀನಾಥ್ ಅವರು ಒಂದು ಕಾಲದ ಅತ್ಯಂತ ಗೆಳೆಯರಾಗಿದ್ದರು‌ . ಈಗಲೂ ಸಹ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ನಿವೃತ್ತರಾಗಿದ್ದರೂ ಸಹ ಸ್ನೇಹ ಭಾಂಧವ್ಯ ಹಾಗೇ ಉಳಿಸಿಕೊಂಡಿದ್ದಾರೆ. ಇಂದು ಜಾವಗಲ್ ಶ್ರೀನಾಥ್ ಅವರು ತಂದೆಯನ್ನು ಕಳೆದುಕೊಂಡು ನೋವಿನಲ್ಲಿ ಇದ್ದಾಗ ಸಹಜವಾಗಿ ಎಲ್ಲರೂ ಗೆಳೆಯನಿಗೆ ಸಾಂತ್ವಾನ‌ ಹೇಳಿದ್ದಾರೆ‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here