ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ತಲೈವಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಜಯಲಲಿತಾ ಅವರ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕಂಗನಾ ರಾಣಾವತ್ ನಟಿಸುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈಗಾಗಲೇ ತಲೈವಿ ಸಿನಿಮಾದ ಮೊದಲ ಲುಕ್ ಕೂಡಾ ಬಿಡುಗಡೆಯಾಗಿ ಸಾಕಷ್ಟು ಸುದ್ದಿ ಮಾಡಿ, ಕಂಗನಾ ಅವರ ಲುಕ್ ಟ್ರೋಲ್ ಕೂಡಾ ಆಗಿತ್ತು. ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ತಲೈವಿ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.

ಈಗ ಈ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರ ಬಂದಿದೆ‌. ಅದೇನೆಂದರೆ ದಕ್ಷಿಣದ ಖ್ಯಾತ ನಟ ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಲಿದ್ದಾರೆ ಎಂದು. ಹೌದು ವಿಜಯ್ ದೇವರಕೊಂಡ ತಲೈವಿ ಸಿನಿಮಾದ ಒಂದು ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ವಿಜಯ್ ದೇವರಕೊಂಡ ನಿರ್ವಹಿಸುತ್ತಿರುವುದು ತೆಲುಗಿನ ಖ್ಯಾತ ನಟ, ಸಾಂಸಾರಿಕ ಚಿತ್ರಗಳಿಂದಲೇ ಹೆಸರಾಗಿ, ಮಹಿಳೆಯರ ವಿಶೇಷ ಮೆಚ್ಚುಗೆ ಗಳಿಸಿದ್ದ ನಟ ಶೋಭನ್ ಬಾಬು ಅವರ ಪಾತ್ರ.

ಜಯಲಲಿತಾ ಹಾಗೂ ಶೋಭನ್ ಬಾಬು ಅವರ ಬಗ್ಗೆ ಆ ಕಾಲದಲ್ಲಿ ಕೆಲವು ಸುದ್ದಿಗಳು ಹರಡಿದ್ದವು. ಅವರಿಬ್ಬರ ನಡುವಿನ ಸಂಬಂಧವನ್ನು ಕುರಿತಾಗಿ ಹಲವು ವಿಶ್ಲೇಷಣೆಗಳನ್ನು ಕೂಡಾ ಮಾಡಲಾಗಿತ್ತು. ಆ ಎಲ್ಲಾ ವಿಚಾರಗಳ ಕುರಿತಾದ ಒಂದು ಟಿಪ್ಪಣಿ ಈ ಪಾತ್ರದ ಮೂಲಕ ಸಿಗಬಹುದೇನೋ? ಕಾದು ನೋಡಬೇಕಿದೆ. ಇನ್ನು ಇದೇ ಸಿನಿಮಾದಲ್ಲಿ ತಮಿಳುನಾಡಿನ ನಟ ಹಾಗೂ ರಾಜಕಾರಣಿ ಎಂ.ಜಿ.ರಾಮಚಂದ್ರನ್ ಅವರ ಪಾತ್ರದಲ್ಲಿ ನಟಿಸುತ್ತಿರುವುದು ಅರವಿಂದ ಸ್ವಾಮಿ ಎನ್ನುವುದು ಕೂಡಾ ವಿಶೇಷ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here