ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆದಾಗಿನಿಂದಲೂ , ಸಚಿವ ಸ್ಥಾನ ಸಿಗದ ಶಾಸಕರು ಒಂದಲ್ಲ ಒಂದು ರೀತಿ ತಮ್ಮ ಅತೃಪ್ತಿ,ಅಸಮಾಧಾನವನ್ನು ಹೊರಗೆ ಹಾಕುತ್ತಲೇ ಇದ್ದಾರೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಚಿವೆಯಾದ ನಟಿ ಜಯಮಾಲ ಹಾಗೂ ಕಾಂಗ್ರೆಸ್ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾತಿನ ಜಗಳ ಎಲ್ಲರ ಚಿತ್ತ ಸೆಳೆದಿದೆ.

ಸಂಪುಟ ವಿಸ್ತರಣೆಯ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ಜಯಮಾಲ ಅವರಿಗೆ ಯಾವ ರೀತಿ ಆ ಸ್ಥಾನ ಸಿಕ್ಕಿತೆಂಬ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಕುರಿತಾಗಿ ಜಯಮಾಲ ಅವರು ಪಕ್ಷಕ್ಕೆ ತಾನು ದುಡಿದಿದ್ದೇನೆ, ತನ್ನ ಸೇವೆಯನ್ನು ಪರಿಗಣಿಸಿ , ತನ್ನ ಸೇವೆಯನ್ನು ಗುರಿತಿಸಿ ತನಗೆ ಸ್ಥಾನ ನೀಡಿದ್ದಾರೆ ಎಂದು ಉತ್ತರಿಸಿದ್ದರು.

ಇದಕ್ಕೆ ಉತ್ತರವಾಗಿ ಜಯಮಾಲ ಅವರ ಯಾವ ಸೇವೆಯನ್ನು ಗುರುತಿಸಲಾಯಿತೆಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕೊಟ್ಟಿದ್ದಕ್ಕೆ, ಪ್ರತ್ಯುತ್ತರವಾಗಿ ಜಯಮಾಲ ಅವರು ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ, ಹೆಣ್ಣು ಮಕ್ಕಳು ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಲಕ್ಷ್ಮಿ ಯವರ ರೀತಿಯಲ್ಲಿ ತನಗೆ ಮಾತನಾಡಲು ಬರುವುದಿಲ್ಲ, ಅಂತಹ ವಿಷಯಕ್ಕೆ ಉತ್ತರಿಸದಿರುವುದೇ ನನ್ನ ಡಿಗ್ನಿಟಿ ಎಂದಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾನು ಸೇವೆ ಎಂದರೆ ದೇವರ ಸೇವೆ, ಪಕ್ಷದ ಸೇವೆ ಎಂದು ಹೇಳಿದ್ದು, ಅದನ್ನು ಜಯಮಾಲ ಅವರು ಯಾವ ರೀತಿಯಲ್ಲಿ ಅರ್ಥ ಮಾಡಿಕೊಂಡರೋ ನನಗೆ ತಿಳಿದಿಲ್ಲ. ನಮ್ಮ ಕಡೆ ಸೇವೆ ಎಂದರೆ ದೇವರ ಸೇವೆ , ನಾನು ಆ ಅರ್ಥದಲ್ಲೇ ಹೇಳಿದ್ದು, ಇದನ್ನು ಬೇರೆ ರೀತಿಯಲ್ಲಿ ಜಯಮಾಲ ಅವರು ಅರ್ಥ ಮಾಡಿಕೊಂಡರೆ ನನ್ನ ತಪ್ಪಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here