ವಿಶ್ವದಾದ್ಯಂತ ಮಹಾಮಾರಿ ಕೊರೋನ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳಲ್ಲಿ ಕೊರೊನ  ವೈರಸ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಹಲವಾರು ಭಾರತೀಯರು ವಿದೇಶದಲ್ಲಿ ಸಿಲುಕಿದ್ದಾರೆ. ಕೆಲವೆಡೆ ವಿಮಾನ ಸಂಚಾರ ಸ್ಥಗಿತಗೊಳಿಸುವುದರಿಂದ ಭಾರತೀಯರು ಸ್ವದೇಶಕ್ಕೆ ಮರಳಲಾರದ ವಿಮಾನನಿಲ್ದಾಣಗಳಲ್ಲಿ ಇರುವ ಬಗ್ಗೆ  ವರದಿಗಳು ಆಗುತ್ತಿದೆ. ವಿಧಾನ ಪರಿಷತ್‌ನ ಸದಸ್ಯೆ ಜಯಮಾಲಾ ಅವರ ಪುತ್ರಿ ಲಂಡನ್‌ ವಿಮಾನ ನಿಲ್ದಾಣದಲ್ಲಿ ಮತ್ತು ಡಾ.ವೈ.ಎ.ನಾರಾಯಣಸ್ವಾಮಿ ಅವರ ಪುತ್ರ ಪ್ಯಾರಿಸ್‌ನಲ್ಲಿ ಕೊರೊನಾ ವೈರಸ್‌ ಹಿನ್ನಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಆರ್‌.ಬಿ.ತಿಮ್ಮಾಪೂರ ಅವರ ಪುತ್ರಿ ಬುಧವಾರವಷ್ಟೇ ಲಂಡನ್‌ನಿಂದ ನಗರಕ್ಕೆ ಹಿಂದಿರುಗಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣಗಳನ್ನೇ ಮುಚ್ಚಿಬಿಟ್ಟರೆ ಹೇಗೆ ? ಎಂದು ಎಂಬ ಪ್ರಶ್ನೆ ಪರಿಷತ್‌ನಲ್ಲಿ ಚರ್ಚೆಯಾಯಿತು.ಈ ಮಾಹಿತಿಯು ಪರಿಷತ್‌ನಲ್ಲಿ ಕೊರೊನಾ ಸೋಂಕು ಕುರಿತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಹೇಳಿಕೆ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು ಮತ್ತು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚಬೇಕು ಎಂಬ ಸಲಹೆಯನ್ನು ಐವನ್‌ ಡಿಸೋಜ ನೀಡಿದಾಗ ಜಯಮಾಲಾ ಅವರು ತಮ್ಮ ಪುತ್ರಿ ಲಂಡನ್‌ನಲ್ಲಿ ಸಿಕ್ಕಿಬಿದ್ದಿರುವುದನ್ನು ತಿಳಿಸಿ, ವಿಮಾನ ನಿಲ್ದಾಣ ಬಂದ್ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.ಆ ಸಂದರ್ಭದಲ್ಲಿ ಇತರ ಇಬ್ಬರೂ ತಮ್ಮ ಮಕ್ಕಳು ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು  ಆದಷ್ಟು ಬೇಗ ನಮ್ಮ ದೇಶದ ಮಕ್ಕಳನ್ನು ವಾಪಾಸ್ ಕರೆಸಿ ಎಂದು ಕೇಳಿಕೊಂಡರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here