ಎಲ್ಲಾ ಪಕ್ಷಗಳು ಈಗ ಸ್ಟಾರ್ ನಾಯಕರ ಮೊರೆ ಹೋಗಿವೆ.ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ದಕ್ಷಿಣ ಭಾರತದ ಪ್ರಸಿದ್ಧ ನಾಯಕರಾದ ಪವನ್ ಕಲ್ಯಾಣ್ ಮತ್ತು ಸುದೀಪ್ ಅವರನ್ನು ಪ್ರಚಾರಕ್ಕೆ ಇಳಿಸುತ್ತಿದೆ.ಹೌದುಜೆಡಿಎಸ್ ಪರ ಪ್ರಚಾರ ಮಾಡಲು ಪ್ರಖ್ಯಾತ ಕಲಾವಿದರು ಆಗಮಿಸಲಿದ್ದಾರೆ .

ಇದಕ್ಕಾಗಿ ಚುನಾವಣಾ ಆಯೋಗದಿಂದ ಜೆಡಿಎಸ್ ತನ್ನ ಸ್ಟಾರ್ ಪ್ರಚಾರಕರ ಪ್ರಚಾರಕ್ಕೆ ಅನುಮತಿ ಪಡೆದಿದ್ದು ಈ ಪ್ರಚಾರದ ಅನುಮತಿ ಪತ್ರದಲ್ಲಿ ಖ್ಯಾತ ತಾರೆಯರು ಜೆಡಿಎಸ್ ಪರ ಭಾಗವಹಿಸುವುದು ಪಕ್ಕಾ ಆಗಿದೆ‌.ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರೆ.

ಅಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಸಹ ಜೆಡಿಎಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಪರ ಪ್ರಚಾರ ನಡೆಸಲು ಒಪ್ಪಿಗೆ ನೀಡಿರುವ ಸುದೀಪ್ ಈಗ ಜೆಡಿಎಸ್ ಗೂ ಪ್ರಚಾರ ಮಾಡುವ ಮೂಲಕ ಮೂರೂ ಪಕ್ಷಗಳ ಪರ ಪ್ರಚಾರ ಮಾಡಿದಂತಗಾಲಿದೆ.

ಪವನ್ ಕಲ್ಯಾಣ್ ಮತ್ತು ಸುದೀಪ್ ಜೊತೆಗೆ ಅಮೂಲ್ಯ ಮತ್ತು ಪೂಜಾಗಾಂಧಿ   ಸಹ ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರೆ.ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಎಲ್ಲಾ ಪಕ್ಷಗಳ ಚುನಾವಣ ರಂಗು ಈಗ ರಂಗಿನ ಲೋಕದ ಕಲಾವಿದರಿಂದ ರಂಗೇರುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here