ವಿಮಾನದಲ್ಲಿ ಪ್ರಯಾಣ ಮಾಡುವುದು ಕೆಲವರಿಗೆ ಒಂದು ರೋಮಾಂಚಕ ಅನುಭವ. ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನದ ಸಿಬ್ಬಂದಿ ವರ್ಗ ಎಚ್ಚರ ತಪ್ಪಿದರೆ ಏನೆಲ್ಲಾ ಅನಾಹುತಗಳು ಸಂಭವಿಸುಬಿಡುತ್ತವೆ ಗೊತ್ತೇ..ಜೆಟ್ ಏರ್ಲೈನ್ಸ್ ನಲ್ಲಿ‌ ಈಗ ಮತ್ತೊಂದು ತೊಂದರೆಯಿಂದ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.ವಿಮಾನದ ಸಿಬ್ಬಂದಿ ಗಳು ಮಾಡಿದ ಈ ಘಟನೆಯಿಂದಾಗಿ ಜೆಟ್ ಏರ್‌ವೇಸ್ ಪ್ರಯಾಣಿಕರು ತೊಂದರೆಗೆ ಸಿಲುಕಿದರು.
ಕ್ಯಾಬಿನ್ ಒತ್ತಡ ಸಮಸ್ಯೆಯಿಂದಾಗಿ ಹಲವಾರು ಪ್ರಯಾಣಿಕರ ಮೂಗು ಮತ್ತು ಕಿವಿಗಳಲ್ಲಿ ರಕ್ತಸ್ರಾವವಾದ ಆತಂಕಕಾರಿ ಘಟನೆ ಜೆಟ್ ಏರ್‍ವೇಸ್ ವಿಮಾನದೊಂದರಲ್ಲಿ ಸಂಭವಿಸಿದೆ.

ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಜೆಟ್ ಏರ್‍ವೇಸ್ ಸಂಸ್ಥೆ ಈಗಾಗಲೇ ವಿವಾದಕ್ಕೆ ಸಿಲುಕಿರುವಾಗಲೇ ಈ ಘಟನೆ ಮತ್ತೊಂದು ಕಳಂಕವಾಗಿದೆ.
ಕ್ಯಾಬಿನ್‌ ಒತ್ತಡವನ್ನು ಸಿಬಂದಿಗಳು ನಿಯಂತ್ರಿಸದೆ ಇದ್ದ ಕಾರಣ , ಪ್ರಯಾಣಿಕರು ಏನಾಗುತ್ತಿದೆ ಎಂದು ತೋಚದೆ ಕಂಗಾಲಾಗಿದ್ದಾರೆ. 30 ಕ್ಕೂ ಹೆಚ್ಚು ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ. ಒತ್ತಡ ತಾಳಲಾರದೆ ಕೆಲ ಪ್ರಯಾಣಿಕರಿಗೆ ತಲೆ ನೋವು ಕಾಣಿಸಿಕೊಂಡಿದೆ. ಕೆಲವರ ಮೂಗು ಮತ್ತು ಕಿವಿಗಳಿಂದ ರಕ್ತಸ್ರಾವವೂ ಆಗಿದೆ ಈ ವರದಿಯಾಗಿದೆ.

ಮುಂಬಯಿಂದ ಜೈಪುರಕ್ಕೆ ಹಾರಾಟ ಆರಂಭಿಸಿದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಒಟ್ಟು 166 ಮಂದಿ ಪ್ರಯಾಣಿಕರಿದ್ದರು.
ಈ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಇವರಲ್ಲಿ 30 ಮಂದಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಕೆಲವರಿಗೆ ಮೂಗಿನಲ್ಲಿ, ಮತ್ತಿತ್ತರ ಪ್ರಮಾಣಿಕರಿಗೆ ಕಿವಿಯಲ್ಲಿ ರಕ್ತ ಸೋರಿತು. ಇನ್ನೂ ಕೆಲವರಿಗೆ ತಲೆನೋವು ಕಾಣಿಸಿಕೊಂಡಿತು ಎಂದು ಅವರು ಹೇಳಿದ್ದಾರೆ.  ಜೈಪುರಕ್ಕೆ ತೆರಳುತ್ತಿದ್ದ ಈ ವಿಮಾನವನ್ನು ತಕ್ಷಣ ಮುಂಬೈಗೆ ವಾಪಸ್ ತಂದು ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ವಿಮಾನನಿಲ್ದಾಣ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here