ಕಳೆದ ಕೆಲವು ವರ್ಷಗಳ ಹಿಂದೆ ದೂರವಾಣಿ ಮತ್ತು ಇಂಟರ್ನೆಟ್ ನಲ್ಲಿ ಅಚ್ಚರಿಯಂತೆ ಉಚಿತ ಸೇವೆ ನೀಡುವ ಮೂಲಕ ಸಂಚಲನ ಸೃಷ್ಠಿಸಿದ್ದ ರಿಲೈನ್ಸ್ ಜಿಯೋ ತಮ್ಮ ನೆಟ್ವರ್ಕ್ ಅನ್ನು ಅತ್ಯಂತ ಬಲಿಷ್ಠ ಮಾಡಿಕೊಂಡಿತ್ತು. ನಂತರದ ದಿನಗಳಲ್ಲಿ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತಿದ್ದ ಜಿಯೋ ಉಚಿತ ಕರೆ ಮತ್ತು sms ಸೇವೆ ಒದಗಿಸುತ್ತಿತ್ತು. ಇದೀಗ ದೇಶದ ಅತಿದೊಡ್ಡ ಖಾಸಗಿ ಟೆಲಿಕಾಂ ಸೇವಾ ಕಂಪೆನಿ ಜಿಯೋ ಇದೇ ಮೊದಲ ಬಾರಿಗೆ ತನ್ನಿಂದ ಬೇರೆ ನೆಟ್‌ವರ್ಕ್ ಮೊಬೈಲ್‌ಗೆ ಹೊರಹೋಗುವ ಧ್ವನಿಕರೆ (ವಾಯ್ಸ್‌ಕಾಲ್)ಗಳ ಮೇಲೆ ಪ್ರತಿನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದೆ.

ಗುರುವಾರದಿಂದಲೇ ಇದು ಜಾರಿಯಾಗಲಿದೆ. ಈವರೆಗೂ ಜಿಯೋ ಇದನ್ನು ಉಚಿತ ಸೇವೆಯಾಗಿ ನೀಡುತ್ತಿತ್ತು. ಇದೀಗ ಶುಲ್ಕ ವಿಧಿಸುತ್ತಿದೆ. ಆದರೆ ಇದಕ್ಕೆ ಬದಲಾಗಿ ಹೆಚ್ಚುವರಿ ಡೇಟಾಪ್ಯಾಕ್‌ಅನ್ನು ಗ್ರಾಹಕರಿಗೆ ಒದಗಿಸುವುದಾಗಿ ಹೇಳಿದೆ. ವಿಶೇಷವೆಂದರೆ ಜಿಯೋದಿಂದ ಜಿಯೋಗೆ ಮಾಡುವ ಧ್ವನಿಕರೆಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಅಲ್ಲದೆ ಟಾಪ್‌ಅಪ್ ವೋಚರ್ ಸೌಲಭ್ಯ ಪರಿಚಯಿಸುತಿದ್ದು ೧೦ ರೂಗೆ ೧೨೪ ನಿಮಿಷ, ೨೦ ರೂಗೆ ೨೪೯ ನಿಮಿಷ ಕಾಲ ಧ್ವನಿಕರೆಗೆ ಅವಕಾಶ ಕಲ್ಪಿಸಲಾಗಿದೆ. ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು  ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿದಿಸಿದರೂ ಸಹ ಜಿಯೋ ಕಂಪನಿಯ ಬೊಕ್ಕಸಕ್ಕೆ ಕೋಟ್ಯಂತರ ರು ಆದಾಯ ಬರಲಿದೆ .

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here