ತಾಯಿಯೊಬ್ಬಳು ಸ್ತನ್ಯ ಪಾನ ಮಾಡಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಇಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ವಿಶೇಷ ಎನ್ನುವುದಾದರೆ,ನಿಜವಾಗಿಯೂ ಅದರಲ್ಲೊಂದು ವಿಶೇಷ ಮಾತ್ರವಲ್ಲದೆ, ಆ ಫೋಟೋ ಒಂದು ಭಾವನಾತ್ಮಕ ಕಥೆಯನ್ನು ಕೂಡಾ ಹೇಳುತ್ತಿದೆ. ತಾಯಿಯೋರ್ವಳು ಇಲ್ಲಿ ಹಾಲು ಕುಡಿಸುತ್ತಿರುವುದು ತನ್ನ ಮಗುವಿಗೆ ಅಲ್ಲ, ಬದಲಾಗಿ ಸಾಕಿರುವ ಒಂದು ಜಿಂಕೆ ಮರಿಗೆ. ಆಕೆ ಒಂದು ಸಾಕು ಜಿಂಕೆ ಮರಿಗೆ ಸ್ತನ್ಯ ಪಾನ ಮಾಡಿಸುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ.

ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಹಾಕಿದ್ದು, ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಜಿಂಕೆ ಮರಿಗೆ ಸ್ತನ್ಯ ಪಾನ ಮಾಡಿಸುತ್ತಿದ್ದು, ಬಿಷ್ಣೋಯಿ ಸಮುದಾಯದ ಜನರು ತಾವು ಸಾಕಿರುವ ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರಿಗೆ ಪ್ರಾಣಿಗಳು ಮಕ್ಕಳಿಗಿಂತ ಕಡಿಮೆಯೇನಿಲ್ಲ ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ. ಈ ಫೋಟೋ ಒಂದು ಸಾವಿರಕ್ಕಿಂತ ಅಧಿಕ ಶೇರ್ ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ಲೈಕ್ ಗಳನ್ನು ಪಡೆದಿದೆ, ಜನರ ಮೆಚ್ಚುಗೆ ಪಡೆದಿದೆ.

ತಾಯಿಯಾದವಳು ಜಿಂಕೆ ಮರಿಗೆ ತೋರಿರುವ ಪ್ರೀತಿ ನೋಡಿ ಹಲವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. Suddimane ಹಳ್ಳಿ ಜನರು ತಾವು ಸಾಕಿರುವ ಪ್ರಾಣಿಗಳನ್ನು ಬಹಳ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ ಎಂದು ಹೇಳಿದರೆ, ಮತ್ತೆ ಕೆಲವರು ಆಕೆಯನ್ನು ಹೊಗಳಿದ್ದಾರೆ. ಈ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುವುದು ಹಿಂದಿನಿಂದಲೂ ಆಚರಣೆಯಲ್ಲಿ ಇದೆ ಎಂದು ಕೆಲವರು ಟ್ವೀಟ್ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಿಜಕ್ಕೂ ಇದೊಂದು ವಿಶೇಷವಾದ ಫೋಟೋ ಎಂದರೆ ಅದು ತಪ್ಪಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here