ಕನ್ನಡ ಕಿರುತೆರೆ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚಲನ ಹುಟ್ಟಿಸಿದ ಧಾರಾವಾಹಿ ಎಂದರೆ ಅದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ. ಜೊತೆ ಜೊತೆಯಲಿ ಧಾರಾವಾಹಿ ಆರಂಭವಾದ ಕೆಲವೇ ದಿನಗಳಲ್ಲಿ ಅತಿಹೆಚ್ಚಿನ ಟಿಆರ್ಪಿ ಪಡೆಯುವ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ದಾಖಲೆ ಬರೆಯಿತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುವ ಪ್ರತಿಯೊಬ್ಬರೂ ಸಹ ಕರ್ನಾಟಕದ ಮನೆಮಾತಾಗಿ ಬಿಟ್ಟರು. ಅದರಲ್ಲೂ ಜೊತೆ ಜೊತೆಯಲ್ಲಿ ದಾರವಾಹಿ ನಾಯಕರಾದ ಅನಿರುಧ್ ಮತ್ತು ನಾಯಕಿ ಮೇಘ ಶೆಟ್ಟಿಯವರಿಗೆ ಅತಿದೊಡ್ಡ ಅಭಿಮಾನಿ ಬಳಗವೇ ಇರುವುದು ಜೊತೆ ಜೊತೆಯಲಿ ದಾರವಾಹಿಯ ಜನಪ್ರಿಯತೆಗೆ ಸಾಕ್ಷಿ ಎನ್ನಬಹುದು.

ಇದೀಗ ದೇಶಾದ್ಯಂತ ಲಾಕ್ಡೌನ್ ಇರುವ ಸಂದರ್ಭದಲ್ಲಿ ಬೆಳ್ಳಿತೆರೆ ಮತ್ತು ಕಿರುತೆರೆಯ ಚಿತ್ರೀಕರಣ ಸ್ಥಗಿತಗೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ ಜೊತೆ ಜೊತೆಯಲ್ಲಿ ದಾರವಾಹಿ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಜೊತೆ ಜೊತೆಯಲಿ ದಾರವಾಹಿಯ ನಾಯಕಿ ಮೇಘ ಶೆಟ್ಟಿಯವರು ಲಾಕ್ ಡೌನ್ ಇಂದ ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಮೇಘ ಶೆಟ್ಟಿ ಅವರು ಹಲವಾರು ಕುಟುಂಬಗಳಿಗೆ ತಮ್ಮಿಂದಾಗುವ ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ತಮ್ಮ ಮಾನವೀಯತೆ ತೋರಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾದ ಮೇಘ ಶೆಟ್ಟಿಯವರಿಗೆ ಕರ್ನಾಟಕ ರಾಜ್ಯದಲ್ಲಿ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. ತಾವು ಸಹಾಯ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಮೇಘ ಶೆಟ್ಟಿಯವರು ಮಾದರಿಯಾಗಿದ್ದಾರೆ. ಈ ಮೂಲಕ ಮೇಘ ಶೆಟ್ಟಿಯವರು ನಿಮ್ಮಿಂದಾಗುವ ಸಹಾಯವನ್ನು ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here