ಜೊತೆ ಜೊತೆಯಲಿ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿ, ಜನ ಮನ್ನಣೆ ಪಡೆದು ಮುನ್ನುಗ್ಗುತ್ತಿರುವ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಕಥಾಹಂದರವನ್ನು ಹೊಂದಿರುವ ಧಾರಾವಾಹಿ. ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ, ಟಿ.ಆರ್.ಪಿ.ಯಲ್ಲಿ ಹೊಸ ದಾಖಲೆ ಬರೆದಿರುವ ಈ ಧಾರಾವಾಹಿಯ ಪ್ರತಿ ವಿಷಯವೂ ಕೂಡಾ ಈಗ ಜನರ ಗಮನವನ್ನು ಸೆಳೆಯುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯ ನಟ, ನಟಿ ಹೀಗೆ ಎಲ್ಲ ವಿಷಯಗಳನ್ನು ತಿಳಿಯ ಬಯಸಿದ್ದಾರೆ ವೀಕ್ಷಕರು. ಆರಂಭದಿಂದಲೂ ಧಾರಾವಾಹಿ ಅಪಾರ ಜನಾದರಣೆಯನ್ನು ಪಡೆದಿದೆ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಮುಖ ಆಕರ್ಷಣೆಯಂತೆ ಕಂಡಿದ್ದಾರೆ ನಟ‌ ಅನಿರುದ್ ಅವರು. ಅವನ ಪ್ರಬುದ್ಧ ನಟನೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಮೊದಲ ಬಾರಿಗೆ ಕಿರುತೆರೆಗೆ ಪ್ರವೇಶ ಮಾಡಿರುವ ಅನಿರುದ್ ಅವರು ಜೊತೆ ಜೊತೆಯಲಿ ಧಾರಾವಾಹಿಯ ಪ್ರಮುಖ ಪಾತ್ರವಾದ ಆರ್ಯವರ್ಧನ್ ಪಾತ್ರದಲ್ಲಿ ನಟಿಸಿದ್ದು, ಅವರ ಜೊತೆಯಾಗಿ ನಟಿಯಾಗಿ ಕಿರುತೆರೆಗೆ ಪರಿಚಯವಾಗಿದ್ದಾರೆ ಮೇಘಾ ಶೆಟ್ಟಿ ಅವರು. ಮೊದಲ ಧಾರಾವಾಹಿಯ ಮೂಲಕವೇ ಮೇಘಾ ಅವರು ಮನಸ್ಸಲ್ಲಿ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಷ್ಟೆಲ್ಲಾ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅನಿರುದ್ ಅವರು ಈ ಧಾರಾವಾಹಿಯ ನಟನೆಗೆ ದಿನವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದೆಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ. ಈ ಧಾರಾವಾಹಿಯ ನಟನೆಗೆ ಅನಿರುದ್ ಅವರು ಒಂದು ದಿನಕ್ಕೆ 35,000 ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ ಎನ್ನುತ್ತವೆ ಧಾರಾವಾಹಿ ಮೂಲಗಳು. ಅದೇ ಸಂದರ್ಭದಲ್ಲಿ ಹೊಸದಾಗಿ ನಟನೆಗೆ ಕಾಲಿಟ್ಟಿರುವ ಮೇಘಾ ಶೆಟ್ಟಿಯವರು ದಿನವೊಂದಕ್ಕೆ 8,000 ಸಂಭಾವನೆ ಪಡೆಯುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here