ಕನ್ನಡ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಬರೆಯುತ್ತಾ, ಜನರ ಮನಸ್ಸನ್ನು ಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ, ಜೀ ಕನ್ನಡ ಚಾನಲ್ ನಲ್ಲಿ ಎರಡು ವಾರದ ಹಿಂದೆ ಆರಂಭವಾಗಿ, ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ಅನಿರುದ್ದ್ ಅವರು ಮೊದಲ ಬಾರಿಗೆ ಕಿರುತೆರೆಯಲ್ಲಿ ನಟನೆ ಆರಂಭಿಸಿ, ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೊತೆಜೊತೆಯಲಿ ಧಾರಾವಾಹಿ. ಈ ಧಾರಾವಾಹಿ ಆರಂಭವಾದ ಕೆಲವೇ ದಿನಗಳಲ್ಲಿ ಜೊತೆಜೊತೆಯಲಿ ಧಾರಾವಾಹಿಯು ಒಂದೇ ವಾರದಲ್ಲಿ ಜನರ ಮನಗೆದ್ದು ನಂಬರ್ 1 ಸ್ಥಾನಕ್ಕೇರಿತ್ತು.

 

ಇನ್ನು ಈ ಧಾರಾವಾಹಿಯ ಮತ್ತೊಂದು ವಿಶೇಷ ಏನೆಂದರೆ ಇದುವರೆವಿಗೂ ಇಡೀ ಕನ್ನಡ ಕಿರುತೆರೆಯಲ್ಲಿ ಹಿಂದೆಂದೂ ಪಡೆಯದಂತಹ ಟಿ.ಆರ್.ಪಿ ಯನ್ನು ಜೊತೆ ಜೊತೆಯಲಿ ಪಡೆದಿದೆ. 9+ ಟ್ ಆರ್ ಪಿ ಬಂದರೆ ಕಿರುತೆರೆಯಲ್ಲಿ ಅದನ್ನೇ ಬಹಳ ಹೆಚ್ಚುದೊಡ್ಡದು ಎಂದುಕೊಂಡಿದ್ದ ಕಿರುತೆರೆಯಲ್ಲಿ ಮೊದಲ ವಾರದಲ್ಲೇ ಈ ಧಾರಾವಾಹಿ 11.8 ಟ್ ಆರ್ ಪಿ ಪಡೆದು ಒಂದು ಹೊಸ ದಾಖಲೆಯನ್ನು ಬರೆದಿದೆ. ಆ ಮೂಲಕ ಕನ್ನಡ ಚಾನಲ್ ಗಳಲ್ಲೊಂದು ಒಂದು ಹೊಸ ಶಕೆ ಆರಂಭವಾಗಿದೆ. ಹೆಚ್ಚು ಟಿ.ಆರ್.ಟಿ. ಬಂದ ಸಂಭ್ರಮದ ಸಂದರ್ಭದಲ್ಲಿ ಜೊತೆಜೊತೆಯಲಿ ಧಾರಾವಾಹಿಯ ಹೀರೋ ಅನಿರುದ್ದ್ ಅವರು ಮಾತನಾಡಿ ಇದು ನನ್ನೊಬ್ಬನ ಯಶಸ್ಸಲ್ಲ, ಬದಲಿಗೆ ಇಡೀ ತಂಡದ ಯಶಸ್ಸು ಎಂದಿದ್ದರು.

ಇದೀಗ ಧಾರಾವಾಹಿಯ ಎರಡನೇ ವಾರದ ಟಿ ಆರ್ ಪಿ ಹೊರಬಂದಿದ್ದು, ಈಗ ಬಂದಿರುವ ಟಿ.ಆರ್.ಪಿ.ಯು ಮತ್ತೊಮ್ಮೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಅದೇಕೆ ಎನ್ನುವುದಾದರೆ ಮೊದಲ ವಾರದಲ್ಲಿ 11.8 ಟಿ ಆರ್ ಪಿ ಪಡೆದಿದ್ದ ಇದೇ ಧಾರಾವಾಹಿ ಈಗ ಎರಡನೇ ವಾರದಲ್ಲಿ 12.6 ಟಿ ಆರ್ ಪಿ ಪಡೆದಿದ್ದು , ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಜೊತೆ ಜೊತೆಯಲಿ ನಂತರ ಕನ್ನಡ ಕಿರುತೆರೆಯಲ್ಲಿ ಹೊಸ ಹುಮ್ಮಸ್ಸು ಮೂಡಿದೆ‌.
ಈ ಯಶಸ್ಸಿನ ಸಂತಸದಲ್ಲಿ ಧಾರಾವಾಹಿಯ ತಂಡ ಸಂತಸ ವ್ಯಕ್ತ ಪಡಿಸಿದ್ದು, ಅನಿರುದ್ಧ್ ಅವರು ಇಡೀ ಕರ್ನಾಟಕಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here