ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಗೆ ರೈತರ ಸಾಲಾ ಮನ್ನಾ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಕಾಂಗ್ರೆಸ್ ನ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ರವರ ನಿದ್ರೆಗೆಡಿಸಿದ್ದಾರೆ.ತಾನು ಮುಖ್ಯಮಂತ್ರಿ ಆದರೆ 24 ತಾಸುಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿ ಅಧಿಕಾರ ವಹಿಸಿಕೊಂಡ ನಂತರ ಅವರ ಅರಿವಿಗೆ ಬಂದಿದೆ ಅದು ಅಸಾಧ್ಯ ಎಂದು. ರೈತರ ಕೆಂಗಣ್ಣಿಗೆ ಎಲ್ಲಿ ಗುರಿಯಾಗಬೇಕಾಗುವುದೋ ಎನ್ನುವ ಆತಂಕದಲ್ಲಿ ಕುಮಾರಸ್ವಾಮಿಯವರು 15 ದಿನಗಳ ಗಡುವು ಕೋರಿದ್ದರು.

ಆ ಗಡುವು ಮೀರಿದರೂ ಸಹ ಅದರ ಬಗ್ಗೆ ಮಾತನಾಡದಿದ್ದಾಗ ಮಾಧ್ಯಮಗಳು ವರದಿ ಮಾಡುವ ಮೂಲಕ ಅವರ ಗಮನ ಸೆಳೆಯುವಂತೆ ಮಾಡಿತು. ಆಗ ಮುಖ್ಯಮಂತ್ರಿಯವರು ಈ ಬಗ್ಗೆ ಬಜೆಟ್ ನಲ್ಲಿ ಹೇಳಲಾಗುವುದು ಎಂದು ತಿಳಿಸಿ ರೈತರನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿದ್ದರು.ಯಾವುದೇ ಸರ್ಕಾರ ರಚನೆಯಾದಾಗ ಬಜೆಟ್ ಮಂಡಿದುವುದು ವಾಡಿಕೆ. ಈ ವಾಡಿಕೆಗೆ ಬ್ರೇಕ್ ಹಾಕಲು ಹೊರಟಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು. ನಾನೇ ಬಜೆಟ್ ಮಂಡಿಸಿದ್ದೀನಿ. ಅದನ್ನೇ ಮುಂದುವರೆಸಿನಕೊಳ್ಳಲಿ ಅದಕ್ಕಿಂತಲೂ ಮುಂಗಡ ಆಯ-ವ್ಯಯ ಬೇಕಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಬಜೆಟ್ ಆಸೆಗೆ ಕಲ್ಲು ಹಾಕಿದ್ದಾರೆ. ಸಿದ್ದರಾಮಯ್ಯ ಅವರ ರ ಈ ವರ್ತನೆಯ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಅಸನಾಧಾನ ಎದ್ದಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದರವರು ಇಂದು ಕರೆದಿದ್ದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆಯ ಅವರವರವ ರಾಜ್ಯದ ಸಮಸ್ಯೆ ಇತರೇ ಸಮಸ್ಯೆ ಸಮಾಲೋಚನೆಗಳನ್ನು ಚರ್ಚಿಸಲು ಕರೆದಿದ್ದ ಆಯೋಗದಲ್ಲಿ ಭಾಗವಹಿಸಿದ್ದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ರೈತರ ಸಾಲ ಮನ್ನಾಕ್ಕೆ ಕೇಂದ್ರದಿಂದ ಶೇಕಡ 50 ಭಾಗ ನೀಡಬೇಕೆಂದು ಮನವಿಯನ್ನು ಮಾಡಿಕೊಂಡು ಬಂದಿದ್ದಾರೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿರವರು ಜೂನ್ 21 ರಿಂದ ಜೂನ್ 30 ರ ಒಳಗೆ ಬಜೆಟ್ ಮಂಡಿಸಲು ಬೇಕಾದ ಎಲ್ಲಾ ತಯಾರಿಯನ್ನು ನಡೆಸಿ ಕೊಳ್ಳ ಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಜುಲೈ ಮೊದಲ ವಾರದಲ್ಲಿ ತಾವು ಬಜೆಟ್ ಅನ್ನು ಮಂಡಿಸುವುದಾಗಿ ಘೋಷಣೆಯನ್ನು ಸಹ ಮಾಡಿದ್ದಾರೆ. ಅಲ್ಲದೇ ರೈತರ ಸಾಲ ಮನ್ನಾ ಮಾಡಲು ನಾನು ಬದ್ಧನಾಗಿದ್ದೇನೆ ಯಾರಿಗೂ ಇದರ ಬಗ್ಗೆ ಅನುಮಾನವೇ ಬೇಡ ಎಂದೂ ಹೇಳಿದ್ದಾರೆ.ಮುಖ್ಯಮಂತ್ರಿಗಳು ಸಾಲ ಮನ್ನಾ ಇಕ್ಕಟ್ಟಿನಿಂದ ಹೊರಬರುತ್ತಾರಾ? ಜುಲೈ ಮೊದಲ ವಾರದವರೆಗೂ ರಾಜ್ಯದ ಜನತೆ ಕಾದುನೋಡಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here