ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಕೊರೊನಾ ಸೋಂಕು ದಿನ‌ಕಳೆದಂತೆ ಎಲ್ಲಾ ನಿಯಂತ್ರಣ ಕ್ರಮಗಳನ್ನು ಮೀರಿ ಕಾಡ್ಗಿಚ್ಚು ಹಬ್ಬಿದಂತೆ ಹರಡುತ್ತಾ ಆತಂಕದ ಪರಿಸ್ಥಿತಿಯನ್ನು ಅಲ್ಲಿ ನಿರ್ಮಾಣ ಮಾಡಿದೆ. ಈ ಹಿನ್ನೆಲೆಯಲ್ಲಿ ಕೊವಿಡ್ ರೆಸ್ಪಾನ್ಸ್ ಯೋಜನೆಯಡಿ ಜುಲೈ 6 ರೊಳಗೆ ಪ್ರತಿ ಮನೆಯಲ್ಲೂ ಕೂಡಾ ಕೊವಿಡ್ 19 ಸ್ಕ್ರೀನಿಂಗ್ ನಡೆಸಬೇಕೆಂದು ದೆಹಲಿ ಸರ್ಕಾರ ಸೂಚನೆಯನ್ನು ನೀಡಿದೆ. ದೆಹಲಿಯಲ್ಲಿ ಕೊರೊನಾವೈರಸ್ ನ ಹಾವಳಿ ಭಯ ಹುಟ್ಟಿಸುವ ಹಂತಕ್ಕೆ ತಲುಪಿದೆ. ಆದ್ದರಿಂದಲೇ ಜುಲೈ 6 ರೊಳಗೆ ಎಲ್ಲಾ ಮನೆಯಲ್ಲೂ ಸ್ಕ್ರೀನಿಂಗ್ ಮಾಡುವುದು ಕಡ್ಡಾಯ ಮಾಡಲಾಗಿದೆ.

ದೇಶದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದ್ದು, ಜೂನ್ 23 ರಂದು ಒಂದೇ ದಿನ 3,947 ಪ್ರಕರಣಗಳು ದಾಖಲಾಗಿವೆ. ಆದ ಕಾರಣ ಇದೇ ಜೂನ್ 30 ರೊಳಗೆ ಕಂಟೈನ್ಮೆಂಟ್ ಜೋನ್‌ನಲ್ಲಿರುವ ಪ್ರತಿಯೊಂದು ಮನೆಯಲ್ಲೂ ಕೂಡಾ ತಪಾಸಣೆ ಮಾಡಿ ಮುಗಿಸಬೇಕು ಎಂದು ಅಲ್ಲಿನ ಸರ್ಕಾರ ಸೂಚನೆಯನ್ನು ನೀಡಿದೆ. ದೆಹಲಿಯಲ್ಲಿ ಒಟ್ಟು ಸುಮಾರು 66,000 ಕೊರೊನಾ ಪ್ರಕರಣಗಳಿವೆ ಎನ್ನಲಾಗಿದ್ದು, 261 ಕಂಟೈನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ‌.

ದೆಹಲಿಯಲ್ಲಿ ಸಮುದಾಯ ಸೋಂಕು ಹರಡದಂತೆ ನಿಯಂತ್ರಣ ಮಾಡುವ ಸಲುವಾಗಿ ಈ ಕಂಟೈನ್ಮೆಂಟ್ ಜೋನ್‌ಗಳ ನಿರ್ಮಾಣ ಮಾಡಲಾಗಿದ್ದು, ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡರೆ ಅದರಿಂದ ಮತ್ತೊಬ್ಬರಿಗೂ ಹರಡುವ ಸಾಧ್ಯತೆ ಇರುವುದರಿಂದ ಸೀಲ್ ಡೌನ್ ಮಾಡಲಾಗುತ್ತಿದೆ. ದಿನವೊಂದಕ್ಕೆ ಇಲ್ಲಿ
ಎರಡೂವರೆ ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು, ಸುಮಾರು 75 ಸಾವು ಸಂಭವಿಸುತ್ತಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here