ವಿಶ್ವದೆಲ್ಲೆಡೆ ಕೊರೋನ ಸೋಂಕಿನಿಂದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ನಿಯಮ ಅನುಸರಿಸುತ್ತಿದ್ದು ಈ ನಿಯಮಗಳು ದೇಶದ ಜನರ ಅರೋಗ್ಯದ ದೃಷ್ಟಿಯಿಂದ ತೆಗೆದುಕೊಂಡ ಕಠಿಣ ನಿರ್ಧಾರವಾಗಿವೆ. ನಮ್ಮ ಭಾರತ ದೇಶವು ಸಹ ಲಾಕ್ ಡೌನ್ ನಿಯಮಕ್ಕೆ ಹೊರತಾಗಿಲ್ಲ. ದೀರ್ಘ ಲಾಕ್ ಡೌನ್ಲೋಡ್ ಪ್ರಧಾನಿ ಮೋದಿಯವರು ಘೋಷಿಸಿದ ಕ್ಷಣದಿಂದ ಭಾರತದಲ್ಲಿ ಹಲವಾರು ಜನರ ಪರಿಸ್ಥಿತಿ ಕೊಂಚ ಮಟ್ಟಿಗೆ ಹದಗೆಟ್ಟಿದೆ ಎಂದು ಹೇಳಬಹುದು. ಇದು ಮಧ್ಯಮ ವರ್ಗ ಮತ್ತು ಕೆಳವರ್ಗದ ಜನತೆಗೆ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಆದರೆ ಜನರ ಆರೋಗ್ಯದ ದೃಷ್ಟಿಯಲ್ಲಿ ಲಾಕ್ ಡೌನ್  ಅನಿವಾರ್ಯ ಎಂಬುದು ಸಹ ಸತ್ಯ.

ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಹಲವಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೊರೋನ ಪರಿಹಾರ ನಿಧಿ ಆರಂಭಿಸಿದ್ದರು. ರಾಜ್ಯದ ಜನತೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪರಿಹಾರ ನಿಧಿ ಬಹಳ ಉಪಯುಕ್ತವಾದುದು. ಇನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕನ್ನಡ ಚಿತ್ರರಂಗದ ಹಲವಾರು ನಾಯಕರು ನಟಿಯರು  ಹಾಗೂ ತಂತ್ರಜ್ಞರು  ತಮ್ಮ ಕೈಯಿಂದ ಆಗುವ ಸಹಾಯ ಸಹ ಮಾಡುತ್ತಿದ್ದಾರೆ.

ಇಂದು ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ವಸಿಷ್ಟ ಸಿಂಹ ಅಭಿನಯದ ಕಾಲಚಕ್ರ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಾದ ಸುಮಂತ್ ಕ್ರಾಂತಿ ಅವರು ಐವತ್ತು ಸಾವಿರ ರೂಪಾಯಿ ದೇಣಿಗೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಕಾಲಚಕ್ರ ಚಿತ್ರವು ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿದ್ದು ಚಿತ್ರದ ಬಿಡುಗಡೆಗೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು.  ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಲಚಕ್ರ ಚಿತ್ರ ಬಿಡುಗಡೆ ಮುಂದೆ ಹೋಗಿದೆ. ಆದರೂ ಸಹ ನಿರ್ದೇಶಕರಾದ ಸುಮಂತ್  ಕ್ರಾಂತಿ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 50,000 ದೇಣಿಗೆ ನೀಡುವ ಮೂಲಕ ಉದಾರತೆ ತೋರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here