‘ಕಾಮಕಸ್ತೂರಿ’ ಹೆಸರು ಕೇಳಿದೊಡನೆ ಇದಾವುದೋ ಲೈಂಗಿಕ ವಸ್ತು ವಿಷಯ ಎನ್ನಬೇಡಿ. ಆಧುನಿಕತೆಯತ್ತ ಮುಖ ಮಾಡಿರುವ ಹಲವರಿಗೆ ಕಾಮ ಕಸ್ತೂರಿ ಬೀಜಗಳು ಅವರ ಆರೋಗ್ಯಕ್ಕೆ ತುಂಬಾ ಲಾಭದಾಯಕವಾದುದು ಎಂಬುದು ತಿಳಿದಿಲ್ಲ. ಪುರಾತನ ಕಾಲದಿಂದ ಮನೆ ಮದ್ದಿನಲ್ಲಿ ಸ್ಥಾನ ಪಡೆದಿರುವ ಈ ಕಾಮ ಕಸ್ತೂರಿಯ ಉಪಯೋಗಗಳ ಬಗ್ಗೆ ಒಂದಿಷ್ಟು ತಿಳಿಯೋಣ ಬನ್ನಿ. ಇದು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ನಾರಿನಾಂಶ ಮತ್ತು ಕಬ್ಬಿಣವನ್ನು ಹೊಂದಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಾಮಕಸ್ತೂರಿ ಬೀಜಗಳು ಬಹಳ ಪರಿಣಾಮಕಾರಿ. ಈ ಬೀಜಗಳಲ್ಲಿ ಅನೇಕ ಔಷಧೀಯ ಗುಣಗಳು ಇರುವುದರಿಂದ, ಇದು ದೇಹದಲ್ಲಿ ಸಂಗ್ರಹವಾಗಿ, ಅನೇಕ ಕಾಯಿಲೆಗಳನ್ನು ತಂದೊಡ್ಡುವ ಅಶುದ್ಧತೆಯನ್ನು ದೇಹದಿಂದ ಹೊರಹಾಕಲು ನೆರವು ನೀಡಿ, ದೇಹವನ್ನು ಶುದ್ಧಿಗೊಳಿಸುವುದರ ಜೊತೆಗೆ, ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಜೀರ್ಣಕ್ರಿಯೆಯನ್ನು ಸುಧಾರಿಸಲು ನೆರವು ನೀಡುತ್ತದೆ. ಕಾಮಕಸ್ತೂರಿ ಬೀಜಗಳಲ್ಲಿ ಅಡಗಿರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೀರ್ಣ ಕ್ರಿಯೆಯಲ್ಲಿ ತೊಂದರೆ ಇರುವವರಿಗೆ ಇದು ಬಹಳ ಉಪಯೋಗವನ್ನು ನೀಡುತ್ತದೆ. ಈ ಬೀಜದ ಸೇವನೆಯಿಂದ ಮಲಬದ್ಧತೆ, ಭೇದಿ ನಿಯಂತ್ರಣ ಕೂಡಾ ಸಮರ್ಪಕವಾಗಿ ನಡೆಯುತ್ತದೆ.

ಬಾಯಿಯಲ್ಲಿ ಕೆಲವರಿಗೆ ಆಗಾಗ ಹುಣ್ಣಾಗಿ,ಏನೂ ತಿನ್ನಲು, ಸರಾಗವಾಗಿ ಮಾತನಾಡಲು ಕಷ್ಟ ಎನಿಸಿ ಬಿಡುತ್ತದೆ. ಹಾಗೆ ಆಗುವ ಬಾಯಿ ಹುಣ್ಣುಗಳಿಗೂ ಕೂಡಾ ಈ ಕಾಮ ಕಸ್ತೂರಿ ಬೀಜಗಳು ಪರಿಣಾಮಕಾರಿ. ಇವುಗಳ ಸೇವನೆಯಿಂದ ಹುಣ್ಣುಗಳ ನಿಯಂತ್ರಣ ಸಾಧ್ಯ. ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿಯಾಗುತ್ತವೆ. ಕಾಮ ಕಸ್ತೂರಿ ಉರಿಯೂತ ಶಮನ ಮಾಡುವ ಗುಣ ಹೊಂದಿದೆ. ದೇಹದಲ್ಲಿ ಕೊಲೆಸ್ಟರಾಲ್‌ ಪ್ರಮಾಣವನ್ನು ನಿಯಂತ್ರಿಸಿ, ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲುದು.

ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಇದು ಪರಿಣಾಮಕಾರಿಯಾದ ಧನಾತ್ಮಕ ಫಲ ನೀಡಲು ನೆರವಾಗುತ್ತದೆ. ಖಿನ್ನತೆಯನ್ನು ದೂರ ಮಾಡಲು ಕೂಡಾ ಈ ಬೀಜಗಳು ಉಪಯುಕ್ತ. ಮನೆ ಮದ್ದಾಗಿ ಬಳಸುವ ಈ ಕಾಮ ಕಸ್ತೂರಿಯನ್ನು ಮನೆಯಲ್ಲಿಟ್ಟುಕೊಂಡರೆ‌ ಎಷ್ಟೆಲ್ಲಾ ಉಪಯೋಗವಿದೆ ಎಂದು ಈಗ ತಿಳಿಯಿತಲ್ಲವೇ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here