ಕಾನೂರಾಯಣ ಸಿನಿಮಾದ ಐದು ಹಾಡುಗಳ ಧ್ವನಿ ಸುರುಳಿ ಬಿಡುಗಡೆ .. ದಿನಾಂಕ 09.02.2018 ರಂದು ಖ್ಯಾತ ಸಿನಿ ನಿರ್ದೇಶಕ ಶ್ರೀ ನಾಗಾಭರಣ ಇವರು ನಿರ್ದೇಶಿಸಿದ ಶ್ರೀ ಕ್ಷೇತ್ರ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜಯ ಸಮಾಜಮುಖಿ ಸಾಧನೆಯನ್ನು ಬಿಂಬಿಸುವ “ಕಾನೂರಾಯಣ” ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಗ್ರಾಮೀಣಾಭಿವ್ರದ್ಧಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿರುವ ಡಾ| ಎಲ್ ಎಚ್ ಮಂಜುನಾಥ್ ಅವರು ತಮ್ಮ ಅನುಭವದ ಜೊತೆಗೆ ಜನಸಾಮಾನ್ಯರ ಆಶಯಗಳಿಗೆ ಧ್ವನಿಯಾಗುವ ರೀತಿಯಲ್ಲಿ ಚಿತ್ರಕಥೆಯನ್ನು ರಚಿಸಿ ಒದಗಿಸಿರುತ್ತಾರೆ.

 

ಪೂಜ್ಯ ಡಿ.ವೀರೆಂದ್ರ ಹೆಗ್ಗಡೆಯವರ 50ನೆಯ ಪಟ್ಟಾಭಿಷೇಕ ಸಂಭ್ರಮಾಚರಣೆಯ ಸುಸಂದರ್ಭದ ಪ್ರೀತಿಯ ಕೊಡುಗೆಯಾಗಿ ಧರ್ಮಸ್ಧಳ ಗ್ರಾಮಾಭಿವ್ರದ್ಧಿ ಯೋಜನೆಯ ಸ್ವಸಹಾಯ ಸಂಘಗಳ 40 ಲಕ್ಷ ಗೌರವಾನ್ವಿತ ಸದಸ್ಯರು ಪೂಜ್ಯರಿಗೆ ಈ ಚಿತ್ರ(ಸಿನಿಮಾ)ವನ್ನು ಅರ್ಪಿಸಲಿದ್ದಾರೆ. ಇದೀಗ ಪೂರ್ವಭಾವಿಯಾಗಿ ದಿನಾಂಕ 09.02.2018 ರ ಶುಕ್ರವಾರ ಸಂಜೆ ಗಂಟೆ 5.30 ಕ್ಕೆ ಸರಿಯಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಪೇಡಿಯಂ ಕ್ಲಬ್ ಆವರಣದಲ್ಲಿ ಕಾನೂರಾಯಣ ಚಿತ್ರದ 5 ಸುಶ್ರಾವ್ಯ ಹಾಡುಗಳ ಧ್ವನಿಸುರುಳಿಯನ್ನು ಧರ್ಮಸ್ಧಳ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಣ್ಯರ ಉಪಸ್ಧಿತಿಯಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕದ ಸಮಸ್ತ ಜನರ ಮುಖ್ಯವಾಗಿ ರೈತರ ಹಾಗೂ ಮಹಿಳೆಯರ ಆಶಯದ ಧ್ವನಿಯಾಗಿ ” ಕಾನೂರಾಯಣ” ಮೂಡಿಬರಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here