ಕಾಮಸೂತ್ರ ಎಂದೊಡನೆ ನಮ್ಮಲ್ಲಿ ಮೂಗು ಮುರಿಯುವವರೇ ಹೆಚ್ಚು. ಸೆಕ್ಸ್ ಅಥವಾ ಲೈಂಗಿಕ ವಿಚಾರಗಳು ಬಂದಾಗ ಇದೆಲ್ಲಾ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸರಿಯೇ ಹೊರತು, ಪೌರಾತ್ಯ ರಾಷ್ಟ್ರಗಳಲ್ಲಿ ಅಲ್ಲ ಎನ್ನುವ ವಿಚಾರ ಹಲವರದು. ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡಾ ಹಾಗೇ ಭಾವಿಸಿದ್ದವು. ಆದರೆ ಭಾರತದಲ್ಲಿ ರಚಿತವಾದ ಕಾಮಸೂತ್ರ ಎಂಬ ಗ್ರಂಥ ಪಾಶ್ಚಿಮಾತ್ಯ ರನ್ನು ಕೂಡಾ ದಂಗು ಬಡಿಸಿದ್ದು ಸುಳ್ಳಲ್ಲ. ಕಾಮಸೂತ್ರ ಎಂಬುದರ ಅರ್ಥವನ್ನು ತೆಗೆದುಕೊಂಡರೆ ಕಾಮ ಎಂದರೆ ಇಚ್ಛೆ ಅಥವಾ ಬಯಕೆ ಎಂದಾದರೆ ಸೂತ್ರ ಎಂಬುದು ನಿಯಮ ಅಥವಾ ಅದನ್ನು ಇಚ್ಛೆ ಯನ್ನು ಪೂರೈಸಿಕೊಳ್ಳಲು ಇರುವ ನಿಯಮ ಎಂಬ ಒಳ್ಳೆಯ ಅರ್ಥವನ್ನು ಹೊಂದಿದೆ.

ಸೆಕ್ಸ್ ನಂತಹ ವಿಷಯವನ್ನು ಬಹಳ ಸುಂದರವಾಗಿ ಹಾಗೂ ಅದಕ್ಕೆ ಒಂದು ಅರ್ಥವನ್ನು ನೀಡಿದವರು ಋಷಿ ವಾತ್ಸಾಯನ. ಇದರಲ್ಲಿ ಸ್ತ್ರೀ ಪುರುಷ ಸಂಬಂಧಗಳನ್ನು ಸುಂದರವಾಗಿ ಬೆಳೆಸಿಕೊಂಡು, ಆ ಬಂಧವನ್ನು ಮತ್ತಷ್ಟು ದೃಢವಾಗಿಡಲು ಕಾಮವು ಕೂಡಾ ಮುಖ್ಯ ಎಂದು ಹೇಳಲಾಗಿದೆ. ಆದ್ದರಿಂದಲೇ ಲೈಂಗಿಕ ಚಟುವಟಿಕೆಗಳನ್ನು ನಡೆಸುವ ವಿವಿಧ ವಿಧಾನಗಳನ್ನು ಅಥವಾ ಭಂಗಿಗಳನ್ನು ವಿವರಿಸುತ್ತದೆ. ಏಕೆಂದರೆ ಲೈಂಗಿಕತೆ ಎನ್ನುವುದು ಒಂದು ಯಾಂತ್ರಿಕ ಕ್ರಿಯೆಯಾಗದೆ ಅದೂ ಒಂದು ಸುಂದರ ಅನುಭವ ಆಗಿರಬೇಕೆಂಬುದನ್ನು ಕಾಮಸೂತ್ರ ಒತ್ತಿ ಹೇಳಿದೆ.

ವೈದಿಕ ಯುಗದಲ್ಲಿ ರಚನೆಯಾದ ಈ ಗ್ರಂಥವು ಮಾನವನ ಲೈಂಗಿಕತೆಯಲ್ಲಿ ಅವನ ನಡವಳಿಕೆಗಳನ್ನು ತಿಳಿಸುತ್ತದೆ. ಕಾಮಸೂತ್ರ ಎಂಬ ಗ್ರಂಥ ಭಾರತದ ಪ್ರಾಚೀನ ಗ್ರಂಥಗಳಲ್ಲಿ ಒಂದಾಗಿದ್ದು, ಇದನ್ನು ಕಾಮಶಾಸ್ತ್ರ ಗ್ರಂಥ ಎಂದು ಕೂಡಾ ಕರೆಯಲಾಗುತ್ತದೆ. ಕಾಮಸೂತ್ರ ಗ್ರಂಥದಲ್ಲಿ ಕಾಮ ಎಂಬುದು ಎಲ್ಲೆ ಮೀರಿದರೆ ಅದರಿಂದ ತೊಂದರೆಗಳು ಕೂಡಾ ನಿಶ್ಚಿತ ಎಂದು ಹೇಳುತ್ತಾರೆ ಅದನ್ನು ಬರೆದಿರುವ ಮಹರ್ಷಿ ವಾತ್ಸಾಯನ. ಈ ಸಂಸ್ಕೃತ ಗ್ರಂಥವು 1883 ರಲ್ಲಿ ಇಂಗ್ಲೀಷ್ ಭಾಷೆಗೆ ಭಾಷಾಂತರವಾಯಿತು. ಭಾರತೀಯರು ಲೈಂಗಿಕತೆಗೆ ವೈದಿಕ ಯುಗದಲ್ಲೇ ಎಂತಹ ಪವಿತ್ರ ಸ್ಥಾನವನ್ನು ನೀಡಿದ್ದರೆಂಬುದಕ್ಕೆ ಕಾಮಸೂತ್ರ ಗ್ರಂಥ ಒಂದು ಉದಾಹರಣೆಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here