ಬಾಲಿವುಡ್ ಸಿಂಗರ್, ಬೇಬಿ ಡಾಲ್ ಖ್ಯಾತಿಯ ಕನಿಕಾ ಕಪೂರ್ ಗೆ ಕೊರೊನಾ ಪಾಸಿಟಿವ್ ಎಂಬುದು ವರದಿಯಾಗಿದೆ. ಆದರೆ ಈಗ ಅದರ ಬೆನ್ನಲ್ಲೇ ಈ ಸೆಲೆಬ್ರಿಟಿ ಸಿಂಗರ್ ಮೇಲೆ ಎಫ್.ಐ.ಆರ್. ದಾಖಲಾಗಿದೆ. ಕನಿಕಾ‌ ಲಂಡನ್ ನಿಂದ ಭಾರತಕ್ಕೆ ಬಂದ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ,‌ ಆಕೆ ನೂರಾರು ಜನರನ್ನು ಭೇಟಿಯಾಗಿದ್ದಾರೆ, ಕೊರೊನಾ ಪಾಸಿಟಿವ್ ಪರೀಕ್ಷೆಯ ಮೊದಲೇ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಆಕೆಯ ಈ ನಡೆಗೆ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದ್ದು, ಕನಿಕಾ ಅವರ ಈ ನಿರ್ಲಕ್ಷ್ಯವನ್ನು ಖಂಡಿಸಿ ಲಕ್ನೋ ದ ವೈದ್ಯಕೀಯ ಅಧಿಕಾರಿಯೊಬ್ಬರು ಆಕೆಯ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಛೇರಿ ಅನ್ವಯ ಕೂಡಾ ದೂರು ದಾಖಲಾಗಿದೆ.

ಕನಿಕಾ ಅವರು ಉತ್ತರ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಸೂಕ್ತವಾಗಿ ತಮ್ನ ಸಹಕಾರವನ್ನು ನೀಡಿಲ್ಲ ಎಂಬ ವಿಷಯ ಕೂಡಾ ಕೇಳಿ ಬಂದಿದೆ. ಸರೋಜಿನಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188, 269 ಮತ್ತು 270 ರ ಅನ್ವಯ ಎಫ್.ಐ.ಆರ್. ದಾಖಲಾಗಿದೆ. ಲಂಡನ್ ನಿಂದ ಬಂದ ಮೇಲೆ ಆಕೆ ನಿರ್ಲಕ್ಷ್ಯ ತೋರುತ್ತಾ ಹಲವು ಕಡೆಗಳಲ್ಲಿ ಸುತ್ತಾಡಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೋಂಕು ಹರಡಲು ಅವಕಾಶವನ್ನು ಕಲ್ಪಿಸಿದ್ದಾರೆ. ಈಕೆ ಸುತ್ತಾಡಿದ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ
ಪ್ರದೇಶಗಳ ಠಾಣೆಗಳಲ್ಲಿ ಕೂಡಾ ಈಕೆಯ ವಿರುದ್ಧ ದೂರು ದಾಖಲಾಗಲಿವೆ ಎಂದು ಹೇಳಲಾಗಿದೆ. ಕನಿಕಾ ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಉನ್ನತಮಟ್ಟದ ರಾಜಕಾರಣಿಗಳು, ವಿಐಪಿಗಳು ಕೂಡಾ ಭಾಗವಹಿಸಿದ್ದರು.

ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯಂತ್ ಸಿಂಗ್ ಈ ಸಂದರ್ಭದಲ್ಲಿ ಕನಿಕಾರನ್ನು ಭೇಟಿಯಾಗಿದ್ದರು.‌ ಪ್ರಸ್ತುತ ಆಕೆ ಮಗನ ಜೊತೆ ಹೌಸ್ ಕ್ವಾರಂಟೈನ್ ನಲ್ಲಿ ಇದ್ದಾರೆ. ಇತರರ ಸಂಪರ್ಕದಿಂದ ದೂರವಾಗಿದ್ದಾರೆ. ಇನ್ನು ಕನಿಕಾ ಯಾವ ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೋ ಅಲ್ಲಿ ಉಪಸ್ಥಿತರಿದ್ದ‌ ಇತರೆ ವಿಐಪಿ ಗಳು ಹಾಗೂ ರಾಜಕಾರಣಿಗಳ ಮೇಲೂ ಕೂಡಾ ಆರೋಗ್ಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here