ಬಿಗ್ ಬಾಸ್ ಸೀಸನ್ 7 ನಾಲ್ಕನೇ ವಾರಕ್ಕೆ ಕಾಲಿಟ್ಟ ಮೇಲೆ ಬಹಳಷ್ಟು ವಿಶೇಷಗಳು ನಡೆಯುತ್ತಿವೆ. ಅನಿರೀಕ್ಷಿತಗಳು ಅನೇಕ ಬಿಗ್ ಹೌಸ್ ನಲ್ಲಿ ಕಾಣ ಸಿಗುತ್ತವೆ.‌ ಟಾಸ್ಕ್ ನಲ್ಲಿ ಉಗ್ರರಾದ ಸ್ಪರ್ಧಿಗಳು, ಅವರ ಕಿತ್ತಾಟ , ಚೀರಾಟ ಟಾಸ್ಕ್ ಮುಗಿದ ಮೇಲೂ ಮುಂದುವರೆದ ಅಸಮಾಧಾನ ಹಾಗೂ ಮನಸ್ಸಿನಲ್ಲಿ ಒಬ್ಬರ ಬಗ್ಗೆ‌ ಮತ್ತೊಬ್ಬರಿಗೆ ಕೋಪ ಇದ್ದೇ ಇದೆ. ಇದೆಲ್ಲದರ ನಡುವೆ ಈಗ ಮತ್ತೊಂದು ಅನಿರೀಕ್ಷಿತ ನಡೆದಿದೆ. ಮಾಡು ಇಲ್ಲವೇ ಮಡಿ ಟಾಸ್ಕ್ ನಲ್ಲಿ ನಡೆದ ಬೆಳವಣಿಗೆಗಳಲ್ಲಿ ಬಿಗ್ ಬಾಸ್ ನ ಯಾವ ಸೀಸನ್ ನಲ್ಲೂ ನಡೆಯದ ಒಂದು ಘಟನೆ ನಡೆದಿದೆ‌. ಅದೇನೆಂದರೆ ಬಿಗ್ ಹೌಸ್ ನ ಒಂದು ಕ್ಯಾಮೆರಾ ಸಂಪೂರ್ಣ ಕೆಟ್ಟಿದೆ.

ಟಾಸ್ಕ್ ಗೆಲ್ಲುವ ಉತ್ಸಾಹದಲ್ಲಿ ಉದ್ರೇಕರಾಗಿದ್ದ ಸ್ಪರ್ಧಿಗಳು, ಮಾಡು ಇಲ್ಲವೇ ಮಡಿ ಎನ್ನುವ ಟಾಸ್ಕ್ ನಲ್ಲಿ ಪಿರಮಿಡ್ ಮೇಲೆ ನಿಂತಿದ್ದವರನ್ನು ನೀರುವ ಎರಚಬೇಕಿತ್ತು. ಆದರೆ ನೀರು ಎರಚುವ ಭರದಲ್ಲಿ ಸ್ಪರ್ಧಿಗಳು ಎರಚಿದ ನೀರಿನಿಂದ, ಸ್ವಿಮ್ಮಿಂಗ್ ಪೂಲ್ ಬಳಿಯಿದ್ದ ಕ್ಯಾಮೆರಾ ಮೇಲೆ ನೀರು ಬಿದ್ದು ಅದು ಸಂಪೂರ್ಣವಾಗಿ ಹಾಳಾಗಿದೆ. ಆದರೆ ಕ್ಯಾಮೆರಾ ಹಾಳಾಗಲು ಮುಖ್ಯ ಕಾರಣ ಎಂದು ಇಬ್ಬರ ಮೇಲೆ ದೋಷ ಹೊರಿಸಲಾಗಿದೆ‌. ಅದು ಜೈಜಗದೀಶ್ ಹಾಗೂ ರಾಜು ತಾಳಿಕೋಟೆ ಅವರ ಮೇಲೆ ಆಪಾದನೆ ಮಾಡಲಾಗಿದೆ. ಆದ ಕಾರಣ ಹಾಳಾದ ಕ್ಯಾಮೆರಾ ದ ಫೋಟೋ ಫ್ರೇಮನ್ನು ಹಿಡಿದು ರಾಜು ತಾಳಿಕೋಟೆ ಮತ್ತು ಜೈ ಜಗದೀಶ್‌ ಇಬ್ಬರೂ ಮನೆಯ ಎಲ್ಲಾ ಕ್ಯಾಮರ ರಸಗಳ ಮುಂದೆ ಕ್ಷಮೆ ಕೇಳಿದ್ದು , ಈ ವಿಷಯವಾಗಿ ಜೈ ಜಗದೀಶ್ ಅವರು ಸಿಟ್ಟಾಗಿದ್ದಾರೆ.

ಜೈ ಜಗದೀಶ್ ಅವರು ಸಿಟ್ಟಿನಿಂದ ಕಚಡಾಗಳು ನಾವು ಮಾತ್ರಾನಾ ಕ್ಯಾಮೆರಾ ಹಾಳು ಮಾಡಿದ್ದು, ಶೈನ್ ಇತರರು ಕೂಡಾ ಎರಚಿದ್ದರು, ಆದ್ರೆ ಕ್ಷಮೆ ಕೇಳ್ತಾ ಇರೋದು ಮಾತ್ರ ನಾವು‌. ನನಗೆ ತಿಂಡಿನೂ ಬೇಡ, ಈ ಮನೇನೂ ಬೇಡ, ನನ್ನ ಇಲ್ಲಿಂದ ಕಳುಹಿಸಿಬಿಡಿ ಎಂದು ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಸದ್ಯಕ್ಕೆ ಈ ವಿಷಯ ಮನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜೈ ಜಗದೀಶ್ ಅವರಿಗೆ ಈ ವಿಷಯ ಅಸಮಾಧಾನವನ್ನು ಉಂಟು ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here