ಬಿಗ್ ಬಾಸ್ ಸೀಸನ್ 7 ರ ಮತ್ತೊಂದು ಯಶಸ್ವಿ ವಾರ ಮುಗಿಯುತ್ತಾ ಬಂದಿದೆ. ಈ ವಾರ ಚಂದನ ಅವರು ಮನೆಯ ಕ್ಯಾಪ್ಟನ್ ಆದ್ದರಿಂದ ಅವರು ನಾಮಿನೇಷನ್ ನಿಂದ ಸೇವ್ ಆಗಿದ್ದರು. ಇನ್ನುಳಿದಂತೆ ನಾಮಿನೇಟ್ ಆದವರು ರಾಜು ತಾಳಿಕೋಟೆ,ವಾಸುಕಿ ವೈಭವ್,ಶೈನ್ ಶೆಟ್ಟಿ,ಚೈತ್ರಾ ಕೋಟೂರು,ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಕಿಶನ್. ಅದರಲ್ಲೂ ಕಿಶನ್ ಅವರ ಹೆಸರನ್ನು ಮನೆಯ ಕ್ಯಾಪ್ಟನ್ ಚಂದನ ಅವರು ಹೇಳಿದ್ದರಿಂದ ಕಿಶನ್ ನೇರವಾಗಿ ನಾಮಿನೇಟ್ ಆಗಿದ್ದರು. ಇನ್ನು ಈ ವಾರ ಭೂಮಿ ಅವರಿಗೆ ಒಂದು ವಿಶೇಷವಾಗಿತ್ತು. ಏಕೆಂದರೆ ಅವರಿಗೆ ನಾಲ್ಕು ವರ್ಷದಿಂದ ಮನಸ್ಸಿನಲ್ಲಿದ್ದ ಒಂದು ನೋವಿಗೆ ಸಂತಸದ ಉತ್ತರ ಸಿಗುವಂತೆ ಮಾಡಿದ್ದಾರೆ ಬಿಗ್ ಬಾಸ್.

4 ವರ್ಷಗಳಿಂದ ಮಾತನಾಡದ ಅವರ ಮಾವ ಬಿಗ್ ಬಾಸ್ ಮನೆಯೊಳಗೆ ಬಂದು ಅವರೊಡನೆ ಮಾತನಾಡಿ, ಭೂಮಿಗೆ ಸಂತಸವನ್ನು ತಂದಿದ್ದಾರೆ. ಇದಲ್ಲದೆ ಈ ವಾರ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ನಲ್ಲಿ ಸ್ಪರ್ಧಿಗಳು ಸಾಕಷ್ಟು ವೈಲೆಂಟ್ ಆಗಿದ್ದರು. ಸಾಕಷ್ಟು ಅರಚಾಟಗಳು ಹಾಗೂ ಕೂಗಾಟಗಳು ನಡೆದಿತ್ತು. ಅದರ ಬಗ್ಗೆ ಕೂಡಾ ಇಂದಿನ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಕೂಡಾ ಸಾಕಷ್ಟು ಚರ್ಚೆ ನಡೆಯಿತು. ಇದೆಲ್ಲದರ ಹೊರತಾಗಿ ಮುಖ್ಯವಾದ ಘಟ್ಟ ಎಂದರೆ ಎಲಿಮಿನೇಷನ್.

ಹೌದು ಇಂದಿನ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಕಿಚ್ಚ ಸುದೀಪ್ ಅವರು ಈ ವಾರ ಎಲಿಮಿನೇಟ್ ಆದ ಸದಸ್ಯರ ಹೆಸರನ್ನು ಪ್ರಕಟಣೆ ಮಾಡಿದ್ದು, ಅಲ್ಲಿಗೆ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ನಾಮಿನೇಟ್ ಆದ ಸದಸ್ಯರಲ್ಲಿ ಇಂದು ಮನೆಯಿಂದ ಹೊರ ಬರುತ್ತಿದ್ದಾರೆ ರಾಜು ತಾಳಿಕೋಟೆ ಅವರು. ಇಂದಿಗೆ ರಾಜು ತಾಳಿಕೋಟೆ ಅವರ ಬಿಗ್ ಬಾಸ್ ಸೀಸನ್ 7 ರ ಪ್ರಯಾಣ ಮುಗಿದು ಮನೆಯಿಂದ ಹೊರ ಬಂದಿದ್ದಾರೆ.

Photos credit :- colors kannada

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here