ಸ್ಯಾಂಡಲ್ ವುಡ್ ನ ಹಾಸ್ಯನಟರಲ್ಲಿ ಒಬ್ಬರಾದ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ ಎನ್ನಲಾಗಿದೆ. ಅವರು ಪ್ರಸ್ತುತ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬುಲೆಟ್ ಪ್ರಕಾಶ್ ಅವರು ಈ ಹಿಂದೆ ಬೇರಿಯಾಟಿಕ್ ಸರ್ಜರಿ ಮಾಡಿಸಿಕೊಂಡು ತಮ್ಮ ದೇಹದ ಗಾತ್ರವನ್ನು ಕಡಿಮೆ ಮಾಡಿಸಿಕೊಂಡಿದರು. ಅದಾದ ನಂತರ ಅವರ ಆರೋಗ್ಯದಲ್ಲಿ ಆಗಾಗ ಏರು ಪೇರು ಆಗುತ್ತಿದೆ. ಒಂದು ವರ್ಷ ಮೊದಲು ಅವರಿಗೆ ಜಾಂಡೀಸ್ ಆದಾಗ ಅವರಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಅದಾದ ನಂತರ ಅವರ ಕಾಲಿನ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆ ಕೂಡಾ ಮಾಡಲಾಗಿತ್ತು.

ಅವರು ಇತ್ತೀಚಿಗೆ ಗಾಳಿಪಟ-2 ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಬಂದ ಮೇಲೆ ಅವರ ಹಿಮ್ಮಡಿಯಲ್ಲಿ ಅಲರ್ಜಿಯಾಗಿದ್ದು ಅವರನ್ನು ಕೂಡಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅನಂತರ ಆರೋಗ್ಯದಲ್ಲಿ ಉಂಟಾದ ವ್ಯತ್ಯಾಸಗಳಿಂದ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅಲ್ಲಿ ಐಸಿಯು ಸೌಲಭ್ಯ ಇಲ್ಲದ ಕಾರಣ ಫೋರ್ಟಿಸ್‌ಗೆ ಅವರನ್ನು ದಾಖಲು ಮಾಡಲಾಗಿದೆ. ಈ ಕುರಿತಾಗಿ ಅವರ ಮಗ ರಕ್ಷಕ್ ತಮ್ಮ ತಂದೆಗೆ ಮೊನ್ನೆಯಷ್ಟೇ ಗ್ಯಾಸ್ಟ್ರಿಕ್ ಸಮಸ್ಯೆಯಾಗಿದ್ದರಿಂದ ಆಸ್ಪತ್ರೆಗೆ ಕರೆತಂದೆವು ಎಂದು ತಿಳಿಸಿದ್ದಾರೆ.

ಅವರು ಕೂಡಾ ತಮ್ಮ ತಂದೆ ಗಾಳಿಪಟ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು, ಅದಕ್ಕೆ ಆಸ್ಪತ್ರೆಗೆ ಸೇರಿಸಲಾಗಿದ್ದು, ಈಗ ಆರಾಮವಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಬುಲೆಟ್ ಪ್ರಕಾಶ್ ಅವರು ಆಸ್ಪತ್ರೆಯಲ್ಲಿ ಆರಾಮವಾಗಿ ಇದ್ದಾರೆ ಎಂದು ಅವರ ಮಗ ಹೇಳಿರುವ ಮಾತು ಸಮಾಧಾನವನ್ನು ನೀಡಿದೆ. ಬುಲೆಟ್ ಪ್ರಕಾಶ್ ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು, ಅವರು ಚಟುವಟಿಕೆಯಿಂದ ಜನರನ್ನು ರಂಜಿಸಲೆಂದು ಆಶಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here