ಮಾಯಕೊಂಡ ಶಾಸಕ ಶಿವಮೂರ್ತಿ ಅವರ ಪುತ್ರಿ ಲಕ್ಷ್ಮಿ ಜೊತೆ ಕನ್ನಡ ಚಿತ್ರರಂಗದ ನಿರ್ಮಾಪಕರಾದ ಪಿ ಸುಂದರ್ ಗೌಡ ಅವರು ಸದ್ದಿಲ್ಲದೇ ವಿವಾಹವಾಗಿದ್ದಾರೆ. ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಈ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿದೆ.ಮದುವೆ ಮುಗಿದ ಬಳಿಕ ಗೌಪ್ಯ ಸ್ಥಳಕ್ಕೆ ಈ ಜೋಡಿ ತೆರಳಿದ್ದಾರೆ.

ಇನ್ನು ಮದುವೆ ಮುಗಿದ ಬಳಿಕ ಈ ಜೋಡಿ ಮೈಸೂರು ಹುಣಸೂರು ರಸ್ತೆಯಲ್ಲಿರುವ ದಿ ರೂಸ್ಟ್ ರೆಸಾರ್ಟ್ ನಲ್ಲಿ ಇದ್ದಾರೆ ಎಂಬ ಮಾಹಿತಿ ಕೂಡ ಇದ್ದು ಇನ್ನು ಕೆಲವೇ ಕ್ಷಣಗಳಲ್ಲಿ ಪಿ ಸುಂದರ್ ಗೌಡ ಮತ್ತು ಲಕ್ಷ್ಮೀ ಇಬ್ಬರೂ ಬೆಂಗಳೂರಿಗೆ ಬಂದು ಪತ್ರಕರ್ತರಿಗೆ ಮತ್ತು ಮಾಧ್ಯಮದವರಿಗೆ ತಮ್ಮ ವಿವಾಹದ ಗುಟ್ಟನ್ನು ಬಿಚ್ಚಿಡಲಿದ್ದಾರೆ ಎನ್ನುವ ಮಾಹಿತಿ ಇದೆ.

ಈ ಮದುವೆಗೆ ಮಾಯಕೊಂಡ ಶಾಸಕ ಶಿವಮೂರ್ತಿ ಅವರ ಒಪ್ಪಿಗೆ ಇರಲಿಲ್ಲ ಎಂದು ತಿಳಿದು ಬಂದಿದೆ.ಶಾಸಕ ಶಿವಮೂರ್ತಿ ಅವರ ಪುತ್ರಿ ಲಕ್ಷ್ಮಿ ಅವರನ್ನು ಮದುವೆ ಆಗಿರುವ ಸುಂದರ್ ಪಿ ಗೌಡ ಅವರು ಕನ್ನಡಲ್ಲಿ ಮಾಸ್ತಿಗುಡಿ ಚಿತ್ರ ನಿರ್ಮಿಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here