ಕನ್ನಡ ನಾಡು,ನುಡಿ ಎಂದ ಕೂಡಲೇ ಅದರ ಇತಿಹಾಸ ಹಾಗೂ ಭವ್ಯತೆಯ‌ನ್ನು ತಿಳಿದ ಪ್ರತಿಯೊಬ್ಬ ಕನ್ನಡಿಗನ ಮೈ ನರನಾಡಿಯಲ್ಲಿ ಮಿಂಚಿನ ಸಂಚಾರವಾಗುವುದು ಈ ನಾಡಿನ , ನುಡಿಯ ಔನತ್ಯ. ಅದು ಮಾತ್ರವೇ ಅಲ್ಲದೆ ಕನ್ನಡ ನಾಡು ದೇಶದ ಎಲ್ಲಾ ಭಾಷೆ ಹಾಗೂ ಸಂಸ್ಕೃತಿಗಳಿಗೆ ನೆಲೆಯನ್ನು ನೀಡಿದೆ. ಆದರೆ ಈ ನಾಡಿನ ನೆಲ, ಜಲವನ್ನು ಬಳಸುತ್ತಾ, ಜೀವನ ರೂಪಿಸಿಕೊಂಡ ಪರಭಾಷಿಕರಿಗೆ ಅದ್ಯಾಕೋ ಕನ್ನಡದ ಮೇಲೆ ಮಮಕಾರ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎನ್ನುವಂತ ಘಟನೆಗಳು ಆಗಾಗ ನಡೆಯುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕೆಂದು ಕನ್ನಡಿಗರು ಬಯಸುವುದೇ ಅಪರಾಧ ಎನ್ನುವ ಮಟ್ಟಕ್ಕೆ ಅದು ಬೆಳೆಯುತ್ತಿದೆ.‌

ನಿನ್ನೆ ಅಂತುಹುದೇ ಒಂದು ಘಟನೆ ನಡೆದಿದೆ. ಮಾರ್ವಾಡಿಗಳು ಹಾಕಿದ್ದ ಹಿಂದಿ ಬೋರ್ಡ್ ನಲ್ಲಿ ಒಂದಕ್ಷರ ಕೂಡಾ ಕನ್ನಡ ಇಲ್ಲ ಎಂಬ ಕಾರಣಕ್ಕೆ ಅದನ್ನು ವಿರೋಧಿಸಿ , ಹೋರಾಟ ಮಾಡಿದ ಕನ್ನಡಿಗರನ್ನು ಬಂಧಿಸಲಾಯಿತು. ಅದರಲ್ಲಿ ಆರು ಜನರ ಮೇಲೆ ನಾನ್ ಬೇಲಬಲ್ ವಾರೆಂಟ್ ದಾಖಲು ಮಾಡಲಾಯಿತು. ಕರ್ನಾಟಕದಲ್ಲಿ ಯಾರೇ ಬರಲಿ, ಯಾರೇ ಹೋಗಲಿ, ಯಾರೇ ನೆಲೆ ನಿಲ್ಲಲಿ ಅದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ತಾವು ನಿಂತ ನೆಲೆದ ಗೌರವವನ್ನು ಕಾಪಾಡುವುದು ವಲಸೆ ಬಂದವರ ಕರ್ತವ್ಯ ಎನ್ನುವುದನ್ನು ಮರೆಯಬಾರದು. ‌

 

ಭಾರತದಲ್ಲಿ ಪ್ರತಿ ರಾಜ್ಯಕ್ಕೂ ಪ್ರಾದೇಶಿಕ ಸಂಸ್ಕೃತಿ ಇದೆ. ಅದನ್ನು ಗೌರವಿಸಬೇಕಾದ ಕರ್ತವ್ಯ ಎಲ್ಲರದ್ದು. ನೆರೆಯ ತಮಿಳುನಾಡಿನಲ್ಲಿ ಅನ್ಯ ಭಾಷೆಗಳಿಗೆ ಸಾರ್ವಕಾಲಿಕ ಸ್ಥಳಗಳಲ್ಲಿ ಆದ್ಯತೆ ಇಲ್ಲ. ಮೊದಲ ಆದ್ಯತೆ ತಮಿಳು. ಅದರಂತೆ ನಮ್ಮಲ್ಲೂ ಮೊದಲ ಆದ್ಯತೆ ಎಲ್ಲರೂ ಕನ್ನಡಕ್ಕೆ ನೀಡಲೇಬೇಕಾಗಿದೆ. ಅನ್ಯ ಭಾಷಿಕರಾದ ಮಾತ್ರಕ್ಕೆ ಕನ್ನಡಿಗರ ಹಕ್ಕನ್ನು ಪ್ರಶ್ನಿಸುವ ಅಧಿಕಾರ ಅವರಿಗೆ ಕೊಟ್ಟವರು ಯಾರು? ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಗೌರವ ಕೊಡಿ ಎಂದು ಕೇಳುವುದರಲ್ಲಿ ತಪ್ಪು ಎನ್ನುವುದಾದರೆ, ಇನ್ಮುಂದೆ ಕನ್ನಡ ಭಾಷೆಯ ಫಲಕಗಳ ಬದಲಾಗಿ ಅನ್ಯ ಭಾಷೆಯ ಫಲಕಗಳೇ ಮುಂದಾಗಿ, ಕನ್ನಡ ಮೂಲೆಗುಂಪಾಗುವ ದಿನಗಳು ದೂರವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here