ಕರ್ನಾಟಕದಲ್ಲಿ ಶುರುವಾಗಿದೆ ಒಂದು ಸ್ಪರ್ಧೆ. ಕನ್ನಡಿಗರೆಲ್ಲರೂ ಬಹಳ ಸಂತಸ ಪಡುವ ಹಾಗೂ ಎಲ್ಲರೂ ಬಹಳ ಹೆಮ್ಮೆಯಿಂದ ಪಾಲ್ಗೊಳ್ಳಲೇಬೇಕಾದ ಸ್ಪರ್ಧೆ‌. ನವೆಂಬರ್ ಒಂದು ಎಂದರೆ ಅದು ಕನ್ನಡ ರಾಜ್ಯೋತ್ಸವದ ಆರಂಭ. ಇದು ನಾಡಿನ ಎಲ್ಲಾ ಕನ್ನಡಿಗರ ಪಾಲಿಗೆ ಮಹತ್ವದ ಹಾಗೂ ಮಹೋನ್ನತ ದಿನವೂ ಹೌದು. ನವೆಂಬರ್ ತಿಂಗಳಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ರಾಜ್ಯೋತ್ಸವದ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತದೆ. ಅದರ ಭಾಗವಾಗಿ ಸಾಂಸ್ಕ್ರತಿಕ, ಸಾಹಿತ್ಯಿಕ ಕವಿಗೋಷ್ಠಿಗಳು ಕೂಡಾ ನಡೆಯುತ್ತವೆ. ಈ ಬಾರಿ ವಿಶೇಷ ಹಾಗೂ ವಿಭಿನ್ನ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ (ಸೋಶಿಯಲ್ ಮೀಡಿಯಾದಲ್ಲಿ )ಕನ್ನಡ ಕವನ ವಾಚನ ಪಂಥಾಹ್ವಾನ ಹೆಸರಲ್ಲಿ ಹೊಸ ಸವಾಲೊಂದು ಆರಂಭವಾಗಿ ಎಲ್ಲರ ಗಮನ ಸೆಳೆದಿದೆ.

ಈ ಸವಾಲಿನ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಹಿತಿ, ಜೋಗಿಯವರು ನೀಡಿದ್ದ ಕವನ ವಾಚನ ಸವಾಲನ್ನು ಖುಷಿಯಾಗಿ ಸ್ವೀಕರಿಸಿದ್ದಾರೆ. ಅವರು ರಾಷ್ಟ್ರಕವಿ ಕುವೆಂಪುರವರು ಬರೆದಿರುವ ವಿಶ್ವ ಮಾನವ ಸಂದೇಶವನ್ನು ಜಗಕ್ಕೆ ಸಾರುವ ಸುಂದರ ಕವನ ಅನಿಕೇತನದ, ” ಓ ನನ್ನ ಚೇತನ ಆಗು ನೀ ಅನಿಕೇತನ” ಎಂದು ಕವನದ ಸಾಲುಗಳನ್ನು ಹೇಳೋ ಮೂಲಕ ಕನ್ನಡತನವನ್ನು ಉಳಿಸಿ, ಬೆಳೆಸುವಲ್ಲಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಕವನ ವಾಚಿಸಿದ ನಂತರ ಅವರು ಮೊದಲನೆಯದಾಗಿ ತಮ್ಮ ಗುರುಗಳಾದ ಟಿ.ಎಸ್.​ ನಾಗಾಭರಣ ಅವರಿಗೆ ಪಂಥಾಹ್ವಾನ ನೀಡುವುದಾಗಿ ಹೇಳಿದ್ದಾರೆ.

ರಾಜ್ಯೋತ್ಸವದ ಶುಭಾಶಯಗಳು!

ಎಲ್ಲಾರಿಗೂ‌ ನಮಸ್ಕಾರ ರಾಜ್ಯೋತ್ಸವದ ಶುಭಾಶಯಗಳು… Jogi Girish Rao Hatwar ರವರು ನನಗೆ ಪದ್ಯ ಓದುವ ಪಂಥಾಹ್ವಾನ ನೀಡಿದ್ದು ಅದನ್ನು ಸ್ವಾಗತಿಸುತ್ತಾ.. ಈ ಅಭಿಯಾನವನ್ನ ಮುಂದುವರಿಸುತ್ತಾ…ನನ್ನ ಗುರುಗಳಾದ Nagabharana.T.S, ಚಿತ್ರಸಾಹಿತಿಗಳಾದ @nagendra.prasadmattonduid , @Ghouse.Peerಗೆಳೆಯರಾದ Chikkanna , RaviShankar Gowda @ItsAarumugaRavishankar ಅವರಿಗೆ ಪದ್ಯ ಓದುವ ಸವಾಲನ್ನ‌ ನೀಡುತ್ತಿದ್ದೇನೆ.

Yash यांनी वर पोस्ट केले रविवार, १० नोव्हेंबर, २०१९

ಅನಂತರ ಚಿತ್ರ ಸಾಹಿತಿಗಳಾದ ಡಾ. ವಿ. ನಾಗೇಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಗೌಡ, ಗೌಸ್ ಪೀರ್, ಚಿಕ್ಕಣ್ಣ ಮತ್ತು ಆರುಮುಗಂ ರವಿಶಂಕರ್ ರವರಿಗೆ ಈ ಸವಾಲು ಸ್ವೀಕರಿಸಿ ಕನ್ನಡ ಕವನ ವಾಚನ ಮಾಡುವಂತೆ ಪಂಥಾಹ್ವಾನ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಇದೊಂದು ನಿಜಕ್ಕೂ ಒಂದು ಅದ್ಭುತವಾದ ಸವಾಲಾಗಿದ್ದು, ಎಲ್ಲರೂ ಸ್ವೀಕರಿಸಿದರೆ ಅದೆಷ್ಟೋ ಕನ್ನಡ ಕವನಗಳು ಜನರಿಗೆ ಕೇಳುವ ಅದೃಷ್ಟ ಸಿಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here