ಜೊತೆ ಜೊತೆಯಲಿ ಈ ಹೆಸರು ಬಹುಶಃ ರಾಜ್ಯದ ಮೂಲೆ ಮೂಲೆಯಲ್ಲೂ ಕೂಡಾ ಜನಪ್ರಿಯ‌. ಧಾರಾವಾಹಿಯೊಂದು ಜನರಾಡುವ ಮಾತಲ್ಲಿ ಮಾತಾಗಿ, ಇಷ್ಟು ಯಶಸ್ಸನ್ನು ಪಡೆದಿರುವುದು ಇದೇ ಮೊದಲು ಎಂಬುದು ಕೂಡಾ ವಾಸ್ತವ. ಕನ್ನಡ ಕಿರುತೆರೆಯಲ್ಲಿ ಆರಂಭವಾದ ಮೊದಲನೇ ವಾರದಿಂದಲೇ ಹೊಸ ಇತಿಹಾಸವನ್ನು ಬರೆದ ಧಾರಾವಾಹಿ. ಒಂದು ಧಾರಾವಾಹಿ ಕೂಡಾ ಸಿನಿಮಾ ಮಟ್ಟದಲ್ಲಿ ಸಿದ್ಧವಾಗಬಲ್ಲುದು ಎಂಬುದನ್ನು ಅಕ್ಷರಶಃ ಕಣ್ಮುಂದೆ ಬರುವಂತೆ ಮಾಡಿದೆ ಜೊತೆ ಜೊತೆಯಲಿ. ಈ ಧಾರಾವಾಹಿಯ ಪ್ರತಿ ಪಾತ್ರವು ವಿಶೇಷ, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇದ್ದು, ಎಲ್ಲಾ ಪಾತ್ರಗಳು ಕೂಡಾ ಜನ ಮೆಚ್ಚುಗೆಯನ್ನು ಪಡೆದು, ಜನರ ಪ್ರೀತಿಯ ಪಾತ್ರಗಳಾಗಿ ಬಿಟ್ಟಿವೆ.

 

ಇಂತಹ ಅಮೋಘ ಪಾತ್ರಗಳಲ್ಲಿ ಒಂದು, ನಾಯಕ ಆರ್ಯವರ್ಧನ್ ಜೊತೆಯಲ್ಲಿ ಆತನ ಆತ್ಮೀಯನಾಗಿ, ಅತನ ನೆರಳಿನಂತೆ, ಆತನಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಜೊತೆ ಜೊತೆಗೆ ಸಾಗುವ ಪಾತ್ರ ಜೆಂಡೆ ಪಾತ್ರ. ಈ ಪಾತ್ರದಲ್ಲಿ ನಟಿಸುತ್ತಿರುವುದು ಬಿ.ಎಮ್. ವೆಂಕಟೇಶ್ ಎಂಬ ಅದ್ಭುತ ಕಲಾವಿದ. ಜೆಂಡೆ ಪಾತ್ರ ನಿಜಕ್ಕೂ ಸಾಕಷ್ಟು ಹೆಸರು ಮಾಡಿದೆ. ವೆಂಕಟೇಶ್ ಅವರು ಕಳೆದ ಮೂವತ್ತು ವರ್ಷಗಳಿಂದ ಕೂಡಾ ನಟನೆಯಲ್ಲಿ ತೊಡಗಿದ್ದು, ಮಧ್ಯೆ ಕೆಲವು ವೈಯಕ್ತಿಕ ಕಾರಣಗಳಿಂದ ಅವರು ನಟನೆಯಿಂದ ದೂರ ಉಳಿದಿದ್ದರು‌. ಅನಂತರ ಮತ್ತೆ ಅವರು ನಟನೆಗೆ ಮರಳಿದ್ದಾರೆ. ಈಗ ಜೆಂಡೆಯಾಗಿ ಅಪಾರ ಯಶಸ್ಸನ್ನು ಅವರು ತನ್ನದಾಗಿಸಿಕೊಂಡಿದ್ದಾರೆ.

ಜೆಂಡೆ ಪಾತ್ರ ಮೊದಲು ಅವರಿಗೆ ಸಿಕ್ಕಾಗ ಅದೊಂದು ಸಾಮಾನ್ಯ ಪಾತ್ರ ಎಂದಷ್ಟೇ ಅವರಿಗೆ ಅನಿಸಿತ್ತಂತೆ. ಆದರೆ ಪಾತ್ರದ ಬಗ್ಗೆ ತಿಳಿದ ಮೇಲೆ, ಧಾರಾವಾಹಿಯಲ್ಲಿ ಅವರ ತೊಡಗಿಕೊಂಡ ಮೇಲೆ ತಿಳಿದಿದ್ದು ಈ ಪಾತ್ರ ಎಷ್ಟು ಮಹತ್ವದ್ದು ಎಂದು. ವೆಂಕಟೇಶ್ ಅವರು ಈ ಹಿಂದೆ ಮಾಡಿದ್ದ ಜನಪ್ರಿಯ ಧಾರಾವಾಹಿಯೊಂದರ ಪಾತ್ರದ ಮೂಲಕ ಜನ ಅವರನ್ನು ಗುರ್ತಿಸುತ್ತಿದ್ದರು. ಆದರೆ ಈಗ ಅದನ್ನು ಮರೆತು ಎಲ್ಲರ ಕಣ್ಣಿಗೆ ಜೆಂಡೆಯಾಗೇ ಕಾಣುತ್ತಿದ್ದಾರೆ ವೆಂಕಟೇಶ್ ಅವರು‌. ರಸ್ತೆಯಲ್ಲಿ ಅಥವಾ ಇನ್ನೆಲ್ಲಾದರೂ ಸರಿ ಜನ ಅವರನ್ನು ಜೆಂಡೆ ಎಂದೇ ಗುರುತಿಸಿದರೆ, ಕಾಲೇಜು ಹುಡುಗರು ಜೆಂಡೆ ಜೆಂಡೆ ಎಂದು ಕರೆದು ರೇಗಿಸುವುದು ಕೂಡಾ ನಡೆಯುತ್ತಿದೆಯಂತೆ.

ಒಟ್ಟಾರೆ ಒಂದು ಪಾತ್ರದ ಮೂಲಕ ಜನರಿಂದ ಈ ಮಟ್ಟಕ್ಕೆ ಗುರುತಿಸಲ್ಪಟ್ಟಿರುವುದು ಆ ಪಾತ್ರಕ್ಕೆ ಸಿಕ್ಕ ಜಯ ಎಂದೇ ಹೇಳಬಹುದು. ಹೀಗೆ ತಮ್ಮ ಕೆಲವು ಅನುಭವಗಳನ್ನು ವೆಂಕಟೇಶ್ ಅವರು ವಾಹಿನಿಯೊಂದರಲ್ಲಿ ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here