ಖಾಸಗಿ ಕಾರ್ಯಕ್ರಮವೊಂದಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ನಟ ನವರಸನಾಯಕ ಜಗ್ಗೇಶ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮುಜುಗರದ ಘಟನೆ ನಡೆದಿದೆ. ಈ ಬಗ್ಗೆ ಸ್ವತಹ ಜಗ್ಗೇಶ್ ಶಿವಲಿಂಗಪ್ಪ ಅವರೇ ಫೇಸ್ಬುಕ್ನಲ್ಲಿ ನೋವು ತೋಡಿಕೊಂಡಿದ್ದಾರೆ. ನಿನ್ನೆ ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ  ಕಾರ್ಯಕ್ರಮದಲ್ಲಿ ನವರಸನಾಯಕ ಜಗ್ಗೇಶ್ ಅವರು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಕರ್ನಾಟಕದ ಹಲವಾರು ದಿಗ್ಗಜರು ಸೇರಿದಂತೆ ಇತ್ತೀಚೆಗೆ ಕಣ್ಸನ್ನೆ ಮೂಲಕ ಸುದ್ದಿ ಮಾಡಿದ್ದ ಪ್ರಿಯಾ ವಾರಿಯರ್ ಸಹ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಪ್ರಿಯಾ ವಾರಿಯರ್ ಅವರನ್ನು ಅತಿಥಿಯಾಗಿ ಕರೆತಂದಿದ್ದರ ಬಗ್ಗೆ ಜಗ್ಗೇಶ್ ಅವರು ಈ ರೀತಿಯಾಗಿ ಅಸಮಾಧಾನ ಹೊರಹಾಕಿದ್ದಾರೆ.

“ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ .!
ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲಾ.!
ಬರಹಗಾರ್ತಿಯಲ್ಲಾ.! ಸ್ವಂತಂತ್ರ ಹೋರಾಟಗಾರ್ತಿಯಂತು ಅಲ್ಲವೆ ಅಲ್ಲಾ.!
ಹೋಗಲಿ ನೂರು ಸಿನಿಮಾ ನಟಿಯಂತು ಅಲ್ಲಾ.!
ಸಾಹಿತಿ ಅಲ್ಲಾ.!ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲಾ.!ಆಧುನಿಕ ಮದರ್ ತೆರೆಸಾ ಅಲ್ಲಾ.!
ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲಾ.!
ಕಾದಂಬರಿ ಬರೆದ ತ್ರಿವೇಣಿ ಅಲ್ಲಾ.!ಜಾನ್ಸಿ ಅಲ್ಲಾ.!ಅಬ್ಬಕ್ಕನಲ್ಲಾ.!ಕಿತ್ತೂರು ಚನ್ನಮ್ಮನಲ್ಲಾ.!
ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲಾ.!ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ
ಜಗ ಮೆಚ್ಚಿದ ಸಾಮಾನ್ಯ ಹೆಣ್ಣು ಮಗು.!
ಆಕೆ ಹೆಸರು ವಾರಿಯರ್ ಕೇರಳದ ಮಗು.! ಕರೆದು ತಂದದ್ದು
ಕನ್ನಡ ನಿರ್ಮಾಪಕ ಸ್ನೇಹಿತ ಮಂಜು..!ಅದು ಒಕ್ಕಲಿಗರಿಗೆ ವಿಧ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ..
ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್
ವಿಧ್ಯಾಧಾನಿ ಶ್ರೀ ನಿರ್ಮಲಾನಂದ ಶ್ರೀಗಳು ..
ಅನೇಕ ಸಾಧಕರಿಗಿಂತ ಕಣ್ಣು ಹೊಡೆವ ವೀಡಿಯೋ ನಟಿ

ಇಂದು ದೇವರಂತೆ ಕಂಡಳು ಯುವಸಮಾಜಕ್ಕೆ..!
ಎಂಥ ಶಿಕ್ಷೆ..!ಹೋದರೆ ಸಹಿಸಲಾಗದ ಹಿಂಸೆ.!
ಹೋಗದಿದ್ದರೆ ದುರಾಹಂಕಾರ ಪಟ್ಟ..!
ಎಂಥ ಶಿಕ್ಷೆ ..!
ಬದುಕು ಜೀವನ ದೇಶ ಸಂಸ್ಕೃತಿ ತಾಯಿತಂದೆ
ಶಿಕ್ಷಣ ಶಿಕ್ಷಕರು ಸಮಾಜ ಕಲಿಸುವ ಸಾಧಕರಿಗಿಂತ ಇಂದು ಇಂಥ ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶ ಸಂಸ್ಕೃತಿ ತಂದೆತಾಯಿ ಭಾವನೆ ಉಳಿಸುವ ಯುವ ಸಮುಧಾಯವೇ?ಪ್ರಶ್ನೆ ನನ್ನ ಕಾಡಿ ಹುಚ್ಚನಂತೆ ಚಿಂತಿಸಿ ಮರಳಿದೆ..!
ದೇಶದ ಬೆನ್ನೆಲುಬು ಯುವಸಮಾಜ?
ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ…!
ಶುಭರಾತ್ರಿ..

ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ .!ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆ…

ಜಗ್ಗೇಶ್ ಶಿವಲಿಂಗಪ್ಪ यांनी वर पोस्ट केले शनिवार, ९ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here