ಸಿನಿಮಾಗಳಲ್ಲಿನ ಸ್ಟಾರ್ ನಟರ ವಿಷಯ ಬಂದಾಗ, ಅವರು ಎಲ್ಲಿಗಾದರೂ ಹೋಗಬೇಕೆಂದರೆ ತಮ್ಮ ಪ್ರಯಾಣಕ್ಕೆ ದುಬಾರಿ ಬೆಲೆಯ ಕಾರುಗಳನ್ನು ಬಳಸುತ್ತಾರೆ ಎಂಬುದು ತಿಳಿದೇ ಇದೆ. ಅಲ್ಲದೆ ಅವರು ಸಾರ್ವಜನಿಕವಾಗಿ ಸಾಮಾನ್ಯರಂತೆ ಸೈಕಲ್ ಅಥವಾ ಬೈಕಿನಲ್ಲಿ ಹೋದರೆ, ಅವರನ್ನು ಜನರು ನೋಡಿದರೆ ಅದರಿಂದಲೂ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ‌. ಆದರೆ ಈಗ ಇದೆಲ್ಲವನ್ನೂ ಬದಿಗಿಟ್ಟು ಸಾಮಾನ್ಯನಂತೆ ಸೈಕಲ್ ಏರಿ, ಜನರ ಕಣ್ಣಿಗೆ ಬೀಳದೆ ಶೂಟಿಂಗ್ ಸ್ಥಳಕ್ಕೆ ತಲುಪಿದ್ದಾರೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು. ಹೌದು ಸುದೀಪ್ ಅವರು ಕಾರನ್ನು ಬಳಸದೆ ಸೈಕ್ಲಿಂಗ್ ಮೂಲಕ ಶೂಟಿಂಗ್ ಸ್ಥಳಕ್ಕೆ ತಲುಪಿದ್ದಾರೆ.

ದೈಹಿಕ ಆರೋಗ್ಯ ಮತ್ತು ವ್ಯಾಯಾಮಕ್ಕೆ ಪ್ರಾಧಾನ್ಯತೆ ನೀಡುವ ಕಿಚ್ಚ ಸುದೀಪ್ ಅವರು ರಾಜ್‍ಕುಮಾರ್ ರಸ್ತೆಯಲ್ಲಿರುವ ಶೆರಟಾನ್ ಹೊಟೇಲ್ ಬಳಿಯಿಂದ ಕಂಠೀರವ ಸ್ಟುಡಿಯೋ ವರೆಗೆ ಸೈಕಲ್ ನಲ್ಲಿ ಹೋಗಿದ್ದಾರೆ. ಸೈಕ್ಲಿಂಗ್ ದೇಹಕ್ಕೆ ವ್ಯಾಯಾಮ ಕೂಡಾ ಹೌದು. ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಅದಕ್ಕಾಗಿ ಅವರು ಬೆಳಗಿನ ಚಳಿಯಲ್ಲಿ ಸೈಕಲ್ ತುಳಿದುಕೊಂಡು ಕಂಠೀರವ ಸ್ಟುಡಿಯೋ ತಲುಪಿದ್ದಾರೆ. ವಿಶೇಷ ಎಂದರೆ ಅವರು ರಸ್ತೆಯಲ್ಲಿ ಹೋಗುವಾಗ ಬೆಳಗಿನ ಸಮಯವಾದ್ದರಿಂದ ಹೆಚ್ಚೇನೂ ಜನರಿರಲಿಲ್ಲ.

ಅಲ್ಲದೆ ವಿರಳವಾದ ಜನ ದಟ್ಟಣೆಯಲ್ಲಿ ಅವರು ರಸ್ತೆಯಲ್ಲಿ ಸೈಕಲ್ ನಲ್ಲಿ ಹೋಗುವಾಗಲೂ ಅವರು ಜನರ ಕಣ್ಣಿಗೆ ಬಿದ್ದಿಲ್ಲ. ಕಿಚ್ಚ ಸುದೀಪ್ ಅವರು ತಮ್ಮ ಸೈಕ್ಲಿಂಗ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಪ್ರಸ್ತುತ ಶಿವ ಕಾರ್ತಿಕ್ ಅವರ ನಿರ್ದೇಶನದಲ್ಲಿ ಮೆಡೊನಾ‌ ಮತ್ತು ಶ್ರದ್ಧಾ ದಾಸ್ ನಾಯಕಿರಾಗಿರುವ ಕೋಟಿಗೊಬ್ಬ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here