ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಪ್ರತಿಭಾವಂತರಾದ ಸರ್ಕಾರಿ ಶಾಲೆಯ ಮಕ್ಕಳನ್ನು ಆಹ್ವಾನಿಸಿ ಅವರಿಗೆ ಆಟ ಆಡಲು ಅವಕಾಶ ಕಲ್ಪಿಸಲಾಗಿತ್ತು. ಹಾಟ್ ಸೀಟ್ ಮೇಲೆ ಕೂರುವ ಅವಕಾಶವನ್ನು ಅರಸಿ ಆರು ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಅದರಲ್ಲಿ ಮೂವರಿಗೆ ಮಾತ್ರ ಹಾಟ್ ಸೀಟ್ ಮೇಲೆ ಕೂರಲು ಅವಕಾಶ ಸಿಕ್ಕಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಕ್ಕಳೆಲ್ಲಾ ಗೆದ್ದ ಹಣವನ್ನು ಒಂದು ಸದುದ್ದೇಶಕ್ಕಾಗಿ ಬಳಸುವ ಕನಸನ್ನು ಇಟ್ಟುಕೊಂಡು ಬಂದಿದ್ದರು ಎಂಬುದು ಕೂಡಾ ನಿಜ.

ಮಂಡ್ಯದಿಂದ ಬಂದಿದ್ದ ವರಲಕ್ಷ್ಮಿ ಎಂಬ ಹುಡುಗಿ ಯಾವುದೇ ಲೈಫ್ ಲೈನ್ ಸಹಾಯವಿಲ್ಲದೆ, 1 ಲಕ್ಷ 60 ಸಾವಿರ ರೂಗಳನ್ನು ಗೆದ್ದಳು‌. ಅದಾದ ನಂತರ ಆಕೆ ಫೋನ್ ಎ ಫ್ರೆಂಡ್ ಸಹಾಯ ಪಡೆದಾಗ, ತನ್ನ ಶಿಕ್ಷಕರು ನೀಡಿದ ತಪ್ಪು ಉತ್ತರದಿಂದಾಗಿ ಕೇವಲ ಹತ್ತು ಸಾವಿರ ರೂಪಾಯಿಗಳಿಗೆ ತೃಪ್ತಿ ಪಡಬೇಕಾಯಿತು. ಅನಂತರ ಹಾಟ್ ಸೀಟಲ್ಲಿ ಕುಳಿತವನು ಹಾಸನದ ಹತ್ತಿರದ ಬ್ಯಾಡ್ರಳ್ಳಿಯ ತೇಜಸ್. ತಂದೆ ತಾಯಿ ಕಡು ಬಡವರಾದ ಕಾರಣ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ತೇಜಸ್ ರಜಾ ದಿನಗಳಲ್ಲಿ ಹೊಗೆ ಸೊಪ್ಪು ಬಿಡಿಸುವ ಕೂಲಿ ಕೆಲಸಕ್ಕೆ ಹೋಗಿ, ಬಂದ ಹಣವನ್ನು ತನ್ನನ್ನು ಓದಿಸುತ್ತಿರುವ ತನ್ನ ಅಣ್ಣನಿಗೆ ನೀಡುವನಂತೆ.

ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ವಿದ್ಯಾಭ್ಯಾಸ ಹಾಗೂ ಶಾಲೆಯ ಕಾಂಪೌಂಡ್ ದುರಸ್ತಿ ಮಾಡಿಸುವಾಸೆ ಇದ್ದ ತೇಜಸ್ ಗೆದ್ದಿದ್ದು 6,40,000 ರೂಪಾಯಿಗಳು. ನಂತರ ಹಾಟ್ ಸೀಟ್ ಗೆ ಬಂದವನು ಮನೋಜ್. ಮನೋಜ್ ಕೂಡಾ ಮನೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಣ ಬಯಸಿದ್ದ‌. ಆತ ಕೂಡಾ 6,40,000 ಕ್ಕೆ ತೃಪ್ತಿ ಪಡಬೇಕಾಯಿತು. ಎಲ್ಲಕ್ಕಿಂತ ಭಾವನಾತ್ಮಕ ವಾಗಿದ್ದು ತಾನು ಹಣ ಗೆದ್ದರೆ ಅಕ್ಕನ ಮದುವೆಗೆ ಹಣ ಬಳಸುವೆ ಎಂದ ರಾಯಚೂರಿನ ರಮೇಶನಿಗೆ ಹಾಟ್ ಸೀಟ್ ಗೆ ಬರಲು ಅವಕಾಶ ದೊರೆಯದೇ ಹೋದುದು. ಒಟ್ಟಾರೆ ಈ ಬಾರಿ ಕೋಟ್ಯಾಧಿಪತಿ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿ ಬಂದಿತು.

ಕನ್ನಡದ ಕೋಟ್ಯಧಿಪತಿ

'ಕನ್ನಡದ ಕೋಟ್ಯಧಿಪತಿ' Thirty Seventh Episode ಫೇಸ್ಬುಕ್ನಲ್ಲಿ | ಮುಂದುವರೆದ ಭಾಗ ವೀಕ್ಷಿಸಲು ಕಲರ್ಸ್ ಕನ್ನಡ tune in ಮಾಡಿ.ಕನ್ನಡದ ಕೋಟ್ಯಧಿಪತಿ | ಇಂದು ರಾತ್ರಿ 7:30ಕ್ಕೆ#KKP #ColorsKannada Puneeth Rajkumar

Colors Kannada यांनी वर पोस्ट केले रविवार, ३ नोव्हेंबर, २०१९

 

ಇದನ್ನೂ ಓದಿ…… 

8 ನೇ ತರಗತಿ ಓದುವ ಮನೋಜ್ ಕೋಟ್ಯಾಧಿಪತಿಯಲ್ಲಿ ಗೆದ್ದಿದ್ದು ಎಷ್ಟು ? ಗೆದ್ದ ಹಣದಲ್ಲಿ ಮಾಡಿದ್ದೇನು ?

8 ನೇ ತರಗತಿ ಓದುವ ಮನೋಜ್ ಕೋಟ್ಯಾಧಿಪತಿಯಲ್ಲಿ ಗೆದ್ದಿದ್ದು ಎಷ್ಟು ? ಗೆದ್ದ ಹಣದಲ್ಲಿ ಮಾಡಿದ್ದೇನು ?

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here