ಕನ್ನಡ ಕಿರುತರೆ ಜಗತ್ತಿನಲ್ಲಿ ಈಗಾಗಲೇ ಜನ‌ಮನ ಗೆದ್ದು ಜನಪ್ರಿಯವಾಗಿ ಮುನ್ನುಗ್ಗುತ್ತಿರುವ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪೊಲೀಸ್ ಸಿಬ್ಬಂದಿಯೊಬ್ಬರು 12.5 ಲಕ್ಷ ರೂಗಳನ್ನು ಗೆದ್ದಿದ್ದು, ಅವರ ಈ ಸಾಧನೆಗೆ ಪೊಲೀಸ್ ಅಧೀಕ್ಷಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.‌ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಮುಖ್ಯಪೇದೆ ಟಿ.ಗೋವರ್ಧನ್ ಅವರೇ ಹನ್ನೆರಡು ಲಕ್ಷ ರೂಪಾಯಿಗಳನ್ನು ಗೆದ್ದಿರುವ ಪೋಲಿಸ್ ಪೇದೆಯಾಗಿದ್ದಾರೆ. ಕೋಟ್ಯಧಿಪತಿ ಕಾರ್ಯಕ್ರಮದ 19 ಮತ್ತು 20 ನೇ ಸಂಚಿಕೆಯಲ್ಲಿ ಭಾಗವಹಿಸಿದ್ದ ಗೋವರ್ಧನ್ ಅವರು ಕಾರ್ಯಕ್ರಮದಲ್ಲಿ 12.5 ಲಕ್ಷ ರೂಗಳನ್ನು ಗೆದ್ದಿದ್ದಾರೆ.

ಗೋವರ್ಧನ್ ಅವರು ತಮ್ಮ ಜೀವನದ ಒಂದು ಗುರಿಯನ್ನು ಸಾಕಾರಗೊಳಿಸಿಕೊಳ್ಳಲು ಇದರಿಂದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಆಸೆಯಿಂದ ಪ್ರಯತ್ನವನ್ನು ಮಾಡುತ್ತಿದ್ದರಂತೆ. ಈ ಹಿಂದೆ 2011, ರಲ್ಲಿ ದಾವಣಗೆರೆಯಲ್ಲಿ ನಡೆದ ಅಡಿಷನ್ ನಲ್ಲಿ ಭಾಗವಹಿಸಿದ್ದರು. ಆದರೆ ಆಗ ಅವರಿಗೆ ಮುಂದಿನ ಹಂತಕ್ಕೆ ಹೋಗುವ ಅವಕಾಶ ಸಿಕ್ಕಿರಲಿಲ್ಲವೆಂದು ಅವರು ಹೇಳಿದ್ದಾರೆ. ಆದರೆ ತಮ್ಮ ಪ್ರಯತ್ನವನ್ನು ಬಿಡದ ಅವರು ಅದನ್ನು ಮುಂದುವರೆಸಿದ್ದರು. ಅವರು ಪಟ್ಟ ಪ್ರಯತ್ನಕ್ಕೆ ಈಗ ಫಲ ದೊರೆತಿದೆ.‌

ಟಿ. ಗೋವರ್ಧನ್ ಸಾಧನೆಯಲ್ಲಿ ತಮ್ಮ ಹಿರಿಯ ಅಧಿಕಾರಿಗಳು ನೀಡಿದ ಪ್ರೋತ್ಸಾಹವನ್ನು ಅವರು ಸ್ಮರಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ಪೊಲೀಸರ ವತಿಯಿಂದ ಗೋವರ್ಧನ್ ಅವರ ಸಾಧನೆಯನ್ನು ಮೆಚ್ಚಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಅನೇಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿರೂಪಣೆ ಸಾರಥ್ಯದಲ್ಲಿ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here