ಕನ್ನಡದ ಕೋಟ್ಯಾಧಿಪತಿ ಕನ್ನಡಿಗರ ಮನ ಗೆದ್ದಿರುವ ಕಾರ್ಯಕ್ರಮ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿರೂಪಣೆಯಲ್ಲಿ, ಅದ್ಭುತವಾಗಿ ಮೂಡಿ ಬರುತ್ತಿರುವ ಈ ಶೋ ಕಲರ್ಸ್ ಕನ್ನಡದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಜ್ಞಾನದ ಜೊತೆಗೆ ಆರ್ಥಿಕವಾಗಿಯೂ ಸಹಾಯ ನೀಡುವಲ್ಲಿ ಕನ್ನಡದ ಕೋಟ್ಯಾಧಿಪತಿ ಒಂದು ಹೊಸ ಇತಿಹಾಸವನ್ನು ಬರೆಯುತ್ತಿದ್ದು, ಈ ಕಾರ್ಯಕ್ರಮದ ವೇದಿಗೆ ಇದೀಗ ಒಂದು ಮಾನವೀಯ ಹಾಗೂ ಮನ ಮಿಡಿಯುವ ಘಟನೆಗೆ ವೇದಿಕೆಯಾಗಿದೆ. ವಾಹಿನಿ ಅಪ್ಲೋಡ್ ಮಾಡಿರುವ ಪ್ರೋಮೋ ನಿಜಕ್ಕೂ ನೋಡುಗನ ಮನ ಮಿಡಿಯುವಂತೆ ಇದೆ.

ಈ ಹಿಂದೆ ಹಾಟ್ ಸೀಟ್ ನಲ್ಲಿ ಕುಳಿತಿದ್ದ ರಮ್ಯ ಎನ್ನುವವರು 1,60,000 ಗೆದ್ದಿದ್ದರು. ಅದನ್ನು ಹೇಳಿದ ಪುನೀತ್ ಅವರು ರಮ್ಯ ಅವರ ಮನೆಯ ಮೇಲೆ ಮೂರು ಲಕ್ಷ ಸಾಲ ಇದ್ದ ವಿಚಾರವನ್ನು ನೆನಪಿಸಿದರು. ಆದರೆ ರಮ್ಯ ಅವರು ಅಂದು ಆಡುವಾಗ ರಿಸ್ಕ್ ಬೇಡ ಎಂದು ಒಂದು ಲಕ್ಷ ಅರವತ್ತು ಸಾವಿರಕ್ಕೆ ಆಟವನ್ನು ಕ್ವಿಟ್ ಮಾಡಿದ್ದರು. ರಮ್ಯ ಅವರು ತಮ್ಮ ಮನೆಯ ಮೇಲೆ ಮೂರು ಲಕ್ಷ ಸಾಲ ಇರುವ ವಿಚಾರವನ್ನು ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ ಅಲ್ಲಿಗೆ ಕಥೆ ಮುಗಿದಿಲ್ಲ. ರಮ್ಯ ಅವರಿಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಎಲ್ಲಾ ತಂತ್ರಜ್ಞರು ಸೇರಿ ಒಂದು ವಿಶೇಷ ಹಾಗೂ ಸರ್ಪ್ರೈಸ್ ಉಡುಗೊರೆಯನ್ನು ನೀಡಿದ್ದಾರೆ. ಈಗ ಹಾಕಿರುವ ಪ್ರೋಮದಲ್ಲಿ ರಮ್ಯ ಅವರನ್ನು ಮತ್ತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಅಲ್ಲಿಗೆ ಕುಟುಂಬ ಸಮೇತ ಬಂದ ರಮ್ಯ ಅವರು ನನ್ನನ್ನು ಕರೆಸಿದ್ದು ಏತಕ್ಕೆ? ಏನು ಸರ್ಪ್ರೈಸ್ ಎಂದು ಕೇಳಿದಾಗ, ನಿಜಕ್ಕೂ ಒಂದು ಭಾವನಾತ್ಮಕ ಸನ್ನಿವೇಶ ನಡೆಯಿತು.

ಪುನೀತ್ ರಾಜ್‍ಕುಮಾರ್ ಅವರು ರಮ್ಯ ಅವರಿಗೆ ಚೆಕ್ ಒಂದನ್ನು ನೀಡಿ, ನಿಮ್ಮ ಸಾಲ ತೀರಿಸಲು ಬೇಕಾದ ಹಣ ಅಂದು ನಿಮಗೆ ಸಿಗಲಿಲ್ಲ. ಆದರೆ ಕೋಟ್ಯಾಧಿಪತಿ ತಂಡ ನಿಮಗೆ ಏನಾದರೂ ಮಾಡಬೇಕೆಂದು ತೀರ್ಮಾನಿಸಿ ತಮ್ಮ ಎಲ್ಲರ ಸಂಬಳದಿಂದ ಎಷ್ಟಾದರೆ ಅಷ್ಟು ಎಂದು ಸಂಗ್ರಹಿಸಿರುವ ಹಣ ಎಂದು ರಮ್ಯ ಅವರಿಗೆ ಒಂದು ಲಕ್ಷ ಅರವತ್ತು ಸಾವಿರದ ಚೆಕ್ ನೀಡಿದ್ದಾರೆ. ರಮ್ಯ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅವರು ಇಡೀ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕೋಟ್ಯಾಧಿಪತಿ ವೇದಿಕೆ ರಮ್ಯ ಅವರ ಸಾಲ ತೀರಿಸುವ ಕಾರ್ಯಕ್ಕೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

https://m.facebook.com/story.php?story_fbid=1417046821810815&id=102459466602897

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here