ಕನ್ನಡ ಕಿರುತೆರೆ ಲೋಕದಲ್ಲಿ‌ ಹಲವಾರು ರಿಯಾಲಿಟಿ ಷೋಗಳು ಜನರನ್ನು ರಂಜಿಸುತ್ತಲೇ ಇವೆ. ಅವುಗಳ ಪೈಕಿ‌ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅದ್ಭುತ ನಿರೂಪಣೆಯಿಂದಲೇ ಕನ್ನಡದ ನಂಬರ್ ಒನ್ ರಿಯಾಲಿಟಿ ಷೋ ಆಗಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ’ಕನ್ನಡದ ಕೋಟ್ಯಧಿಪತಿ’ ವೇದಿಕೆಯ ಖದರ್ ಹೆಚ್ಚಾಗುತ್ತಿದೆ. ಕರ್ನಾಟಕದ ವಿವಿಧ ಭಾಗ ಹಾಗೂ ವಿವಿಧ ಭಾಷಾ ಜನ ಬಂದು ಭಾಗಿಯಾಗುತ್ತಾರೆ. ಕೆಲವರು ಲಕ್ಷ ಗೆದ್ದರೆ ಕೆಲವರು ಸಾವಿರ ಗೆದ್ದು ಸಂತೋಷದಿಂದ ಹೋಗುತ್ತಾರೆ.

ಕನ್ನಡ ಕೋಟ್ಯಧಿಪತಿಯ ಈ ವಾರದ ಹಾಟ್‌ ಸೀಟ್ ಐಎಎಸ್ ಆಕಾಂಕ್ಷಿ ಶ್ವೇತಾ ಕುಳಿತಿದ್ದರು. ಅವರ ಟೈಂ ಸರಿ ಇಲ್ವೋ ಏನೋ. ಫಿಫ್ಟಿ ಫಿಫ್ಟಿ ಆಯ್ಕೆ ಮಾಡಿಕೊಂಡಿದ್ದರೂ ಅದೃಷ್ಟ ಕೈ ಕೊಟ್ಟಿತ್ತು.80 ಸಾವಿರ ಪಡೆದು ಸುಗಮವಾಗಿ ಸಾಗುತ್ತಿದ್ದ ಗೇಮ್‌ನಲ್ಲಿ ಅಡ್ಡ ಬಂದದ್ದು ಈ ಪ್ರಶ್ನೆ ‘ಭಾರತೀಯರೊಬ್ಬರು ಇಲ್ಲಿನ ಯಾವ ಸ್ಥಳಕ್ಕೆ ಇಲ್ಲಿಯವರೆಗೂ ಭೇಟಿಕೊಟ್ಟಿಲ್ಲ?’ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಇದ್ದ ಆಯ್ಕೆಗಳು ನಾಲ್ಕು – ಚಂದ್ರ, ಮೌಂಟ್ ಎವರೆಸ್ಟ್‌, ದಕ್ಷಿಣ ಧ್ರುವ ಹಾಗೂ ಉತ್ತರ ಧ್ರುವ.

ಫುಲ್ ಕನ್ಫ್ಯೂಸ್ ಆದ ಶ್ವೇತಾ ತೆಗೆದುಕೊಂಡಿದ್ದು ಫಿಫ್ಟಿ ಫಿಫ್ಟಿ ಲೈಫ್‌ ಲೈನ್. ಆ ವೇಳೆ ಉಳಿದ ಎರಡು ಆಯ್ಕೆಗಳು ಚಂದ್ರ ಹಾಗೂ ಮೌಂಟ್ ಎವರೆಸ್ಟ್‌. ದುರಾದೃಷ್ಟವಶಾತ್ ಇದಕ್ಕೆ ಮೌಂಟ್ ಎವರೆಸ್ಟ್‌ ಎಂದು ಉತ್ತರ ನೀಡಿ ಪಡೆದ 80 ಸಾವಿರ ಕಳೆದುಕೊಂಡು 10 ಸಾವಿರವನ್ನು ಮಾತ್ರ ತನ್ನದಾಗಿಸಿಕೊಂಡರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here