ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಗಲೇ ಎರಡು ಶತಕಗಳನ್ನು ಬಾರಿಸಿರುವ ರಾಹುಲ್ ಇದೀಗ ವಿಶ್ವದ ಶ್ರೀಮಂತ ಕ್ರಕೆಟ್ ಲೀಗ್ ಐಪಿಎಲ್‌ನಲ್ಲೂ ಅಮೋಘ ಶತಕ ಸಾಧನೆ ಮಾಡಿದ್ದಾರೆ.ಕನ್ನಡಿಗ ಕೆ.ಎಲ್ ರಾಹುಲ್​ ಭರ್ಜರಿ ಸೆಂಚುರಿ (ಅಜೇಯ 100) ಬಾರಿಸಿ ಮಿಂಚಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಅತಿಥೇಯ ಮುಂಬೈ ಇಂಡಿಯನ್ಸ್​​ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಅತಿಥೇಯರಿಂದ ಬ್ಯಾಟಿಂಗ್​​ಗೆ ಆಹ್ವಾನಿಸಲ್ಪಟ್ಟ ಕಿಂಗ್ಸ್​ ಇಲೆವೆನ್​ ಪಂಜಾಬ್​​ ಓಪನಿಂಗ್ ಬ್ಯಾಟ್ಸ್​ಮನ್ ಗಳಾದ ಕೆ.ಎಲ್​ ರಾಹುಲ್ (ಅಜೇಯ 100) ಮತ್ತು ಕ್ರಿಸ್​ಗೇಲ್ (63) ಉತ್ತಮ ಆಟದ ನೆರವಿನಿಂದ 197ರನ್​ಗಳಿಸಿ, ಮುಂಬೈಗೆ 198ರನ್​ಗಳ ಗುರಿ ನೀಡಿದೆ.

ಕೆ.ಎಲ್ ರಾಹುಲ್ 64 ಎಸೆತಗಳಲ್ಲಿ ತಲಾ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಸಿ ವರ್ಲ್ಡ್​​​ಕಪ್​ಗೆ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.ಅತ್ತ ಕ್ರಿಸ್ ಗೇಲ್ ಸಹ ಕೇವಲ 36 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಡಿಲಬ್ಬರದ ಸಿಕ್ಸರ್‌ಗಳ ನೆರವಿನಿಂದ 63 ರನ್ ಗಳಿಸಿದ್ದರು.

ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡರು. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಮುಂಬೈ ಪರ ಎರಡನೇ ಅತಿ ದುಬಾರಿ ಬೌಲರ್ ಎಂಬ ಅಪಖ್ಯಾತಿಗೆ ಒಳಗಾದರು.ಪಾಂಡ್ಯ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಎರಡು ವಿಕೆಟುಗಳನ್ನು ಕಬಳಿಸಿದರೂ 57 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ನಿರಾಸೆಗೊಳಗಾದರು.

ಈ ಪೈಕಿ ಪಂದ್ಯ ಒಂಬತ್ತನೇ ಓವರ್‌ನಲ್ಲಿ ಕ್ರಿಸ್ ಗೇಲ್ 17 ಹಾಗೂ 19ನೇ ಓವರ್‌ನಲ್ಲಿ ರಾಹುಲ್ 25 ರನ್ ಸಿಡಿಸುವ ಮೂಲಕ ಸೊಕ್ಕಡಗಿಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here