ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ ಬಾಲಿವುಡ್ ನ ಸೆಲೆಬ್ರಿಟಿ ಒಬ್ಬರು. ಬಾಲಿವುಡ್ ಮಂದಿಯಲ್ಲಿ ಇದೇ ಮೊದಲ‌ ಕೊರೊನಾ ಪ್ರಕರಣ ವಾಗಿದ್ದು, ಕೊರೊನಾ ವೈರಸ್ ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ರಿಪೋರ್ಟ್‌ ಪಡೆದಿರುವ ಈ ಸೆಲೆಬ್ರಿಟಿ ಮತ್ತಾರು ಅಲ್ಲ, ಬೇಬಿ ಡಾಲ್ ಹಾಡಿನ ಖ್ಯಾತಿಯ ಕನ್ನಿಕಾ ಕಪೂರ್. ಈಕೆ ತನಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ತಾನೇ ಒಂದು ದೀರ್ಘವಾದ ಪೋಸ್ಟ್ ಬರೆದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವುದು ಮಾತ್ರವೇ ಅಲ್ಲದೆ ತಾನು ಕುಟುಂಬ ಸಹಿತವಾಗಿ ವೈದ್ಯಕೀಯ ಪರಿವೀಕ್ಷಣೆಯಲ್ಲಿ ಇರುವುದಾಗಿ ಕೂಡಾ ಕನ್ನಿಕಾ ಅವರು ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ. ‌

ಕನ್ನಿಕಾ ಕಳೆದ ಹತ್ತು ದಿನಗಳ ಹಿಂದೆ ಲಂಡನ್ ನಿಂದ ಮರಳಿದ್ದರು. ಆಗ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಪರೀಕ್ಷಿಸಿ ಯಾವುದೇ ಕೊರೊನಾ ಲಕ್ಷಣಗಳು ಇಲ್ಲವೆಂದು ದೃಢಪಟ್ಟಿತ್ತು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಕನ್ನಿಕಾ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ತಡಮಾಡದೆ ಪರೀಕ್ಷೆ ಮಾಡಿಸಿಕೊಂಡಿದ್ದು, ಬಂದಿರುವ ವರದಿಯಲ್ಲಿ ಕೊರೊನಾ ಪಾಸಿಟಿವ್ ಆಗಿದೆ. ಅದಕ್ಕೆ ಈಗ ತಾನು ಕುಟುಂಬ ಸಮೇತ ಹೌಸ್ ಕ್ವಾರಂಟೈನ್ ಇರುವುದಾಗಿ ಕೂಡಾ ಆಕೆ ತಿಳಿಸಿದ್ದಾರೆ. ಹೀಗೆ ಲಂಡನ್ ನಿಂದ ಮರಳಿದ ನಂತರ ಆಕೆಯಲ್ಲಿ ಈಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಆದರೆ ಮಾರ್ಚ್ 13 ರಂದು ಕನ್ನಿಕಾ ತನ್ನ ಪೋಷಕರ ಜೊತೆ ಗೂಡಿ ಒಂದು ಗೆಟ್ ಟು ಗೆದರ್ ಪಾರ್ಟಿ ಕೂಡಾ ಮಾಡಿದ್ದು ಇದರಲ್ಲಿ ಅವರ ಆಪ್ತರು ಭಾಗವಹಿಸಿದ್ದರು ಎನ್ನಲಾಗಿದ್ದು, ಅವರಾರಿಗೂ ಕನ್ನಿಕಾ ಲಂಡನ್ ನಿಂದ ಹಿಂದಿರುಗಿದ್ದ ವಿಷಯ ತಿಳಿದಿರಲಿಲ್ಲ ಎನ್ನಲಾಗಿದೆ. ಕನ್ನಿಕಾ ಲಂಡನ್ ನಿಂದ ಮುಂಬೈಗೆ, ಅಲ್ಲಿಂದ ಲಕ್ನೋಗೆ ತೆರಳಿದ್ದರು. ಒಟ್ಟಾರೆ ಈಗ ಕನ್ನಿಕಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ, ಇನ್ನು ಅವರ ಪಾರ್ಟಿ ಯಲ್ಲಿ ಭಾಗವಹಿಸಿದ್ದವರಿಗೆ ಇದು ಸೋಕಿದೆಯೋ ಇಲ್ಲವೋ ಎಂಬುದು ತಿಳಿಯಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here