ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನ ಇಂದು ಬಹಳಷ್ಟು ಗಮನಿಸಬೇಕಾದ ಘಟನೆಗಳಿಗೆ ಸಾಕ್ಷಿಯಾಗಿದೆ.
ಯಾದಗಿರಿ ಶಹಾಪುರ ವಿಧಾನಸಭಾ ಕ್ಷೇತ್ರದ ನಗನೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ.

ಇಲ್ಲಿನ ಸ್ಥಳೀಯ ‌ನಿವಾಸಿ ಒಬ್ಬರ ಮನೆಯಲ್ಲಿ ತಮ್ಮ ತಾಯಿ ತೀರಿಕೊಂಡಿದ್ದರು ಆದರೂ ಸಹ ತಾಯಿಯ ನೋವಿನಲ್ಲಿ ಮೊದಲು ಮತಗಟ್ಟೆಗೆ ತೆರಳಿ ಮತನೀಡಿ ನಂತರ ತಾಯಿಯ ಅಂತಿಮ ಕಾರ್ಯದಲ್ಲಿ ಕುಟುಂಬದ ಸದಸ್ಯರು ತೊಡಗಿದ್ದಾರೆ.ಈ ಕುಟುಂಬದ ನೋವಿನಲ್ಲಿ ಊರಿನ ಗ್ರಾಮಸ್ಥರು ಪಾಲ್ಗೊಂಡರು.

ಇದರಿಂದ ಮತದಾನದ ಬಗ್ಗೆ ಇರುವ ಜಾಗೃತಿ ಪ್ರಪಂಚಕ್ಕೆ ತೋರಿದ ಈ ಕುಟುಂಬ ನಿಜಕ್ಕೂ ಮತನೀಡದೇ ಆರಾಮವಾಗಿ ಇರುವವರಿಗೆ ಮಾದರಿಯಾಗಿದೆ.

ಸೂತಕದ ಮನೆಯಲ್ಲಿ ಮತ ನೀಡಿ ತಮ್ಮ ಕರ್ತವ್ಯ ಜಗತ್ತಿಗೇ ಸಾರಿದ ಈ ಕುಟುಂಬದ ಸದಸ್ಯರಿಗೆ ಊರಿನ ಗ್ರಾಮಸ್ಥರು ಭಾವುಕವಾಗಿಯೇ ಅಭಿನಂದನೆ ಸಲ್ಲಿಸಿದರು ನಂತರ ತಾಯಿಯ ಅಂತ್ಯಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿದರು.

ಕೃಪೆ :- ಟಿರ್ವಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here