ಏಷ್ಯನ್ ಕ್ರೀಡಾಕೂಡದಲ್ಲಿ ಹಿಂದಿನ ಹಲವು ವರ್ಷಗಳಿಗಿಂತ ಈ ಬಾರಿ ಭಾರತೀಯ ಕ್ರೀಡಾಪಟುಗಳು ಒಳ್ಳೆಯ ಸಾಧನೆ ಪ್ರದರ್ಶಿಸಿ, ಭಾರತಕ್ಕೆ ಹಲವು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ದೇಶಕ್ಕೆ ಹಾಗೂ ತಾವು ಪ್ರತಿನಿಧಿಸುವ ರಾಜ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದಾರೆ. ಆದರೆ ಇಷ್ಟೆಲ್ಲಾ ಹೆಸರು ಗಳಿಸಿದ ಪ್ರತಿಯೊಬ್ಬ ಕ್ರೀಡಾಪಟುವಿನ ಸಾಧನೆ , ಪರಿಶ್ರಮದ ಹಿಂದೆ ಸಮಸ್ಯೆಗಳನ್ನು ಮೀರಿ ಬಂದ ಕಥೆಗಳಿವೆ. ಅವರು ತಮ್ಮ ಹಾದಿಯಲ್ಲಿ ಇದ್ದ ತೊಡಕುಗಳನ್ನು ದಾಟಿ ಇಂದು ಈ ಹಂತಕ್ಕೆ ತಲುಪಿದ್ದಾರೆ ಎಂಬುದು ವಾಸ್ತವ.

ರಿಲೇಯಲ್ಲಿ ಈ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಕೊಡಗಿನ‌ ಪೂವಮ್ಮ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಆದರೆ ಈ ಸಂತೋಷದ ನಡುವೆಯೂ ಆಕೆಯ ಮನಸ್ಸಿನಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ಹಾಗೂ ಬೇಸರ ವ್ಯಕ್ತವಾಗಿದೆ. ಕಾರಣ ರಾಜ್ಯ ಸರ್ಕಾರ ಕ್ರೀಡಾಪಟುಗಳ ಸಾಧನೆ ಹಾಗೂ ಪ್ರತಿಭೆಯನ್ನು ಸರಿಯಾಗಿ ಗುರ್ತಿಸಿಲ್ಲ ಎಂಬುದು. ಈ ಹಿಂದೆ ಪೂವಮ್ಮ ಪದಕ ಗೆದ್ದಾಗ ರಾಜ್ಯ ಸರ್ಕಾರ ಆಕೆಗೆ 15 ಲಕ್ಷ ಪ್ರೋತ್ಸಾಹ ಧನ ನೀಡಿತ್ತು. ಆದರೆ ಅದು ಮಾದ್ಯಮಗಳಲ್ಲಿ ಪ್ರಚಾರ ಪಡೆದಾಗ ಸರ್ಕಾರ ಮೊತ್ತವನ್ನು 25 ಲಕ್ಷ ರೂ. ಗಳಿಗೆ ಏರಿಸಿತ್ತು. ಈ ಬಾರಿ ಮತ್ತೊಮ್ಮೆ ಚಿನ್ನ ಗೆದ್ದು ಬಂದಿರುವ ಪೂವಮ್ಮ ಅವರಿಗೆ ಸರ್ಕಾರ 25 ಲಕ್ಷ ನಗದು ಹಣ ನೀಡಿ ಆಕೆಯನ್ನು ನಿರಾಸೆಗೊಳಿಸಿದೆ. ಅವರ ಧ್ವನಿ ಒಂದೇ, ನಾನು ಇಷ್ಟು ಹಣ ಕೊಡಿ ಎಂದು ಯಾವತ್ತೂ ಕೇಳಿಲ್ಲ, ಆದರೆ ಸರ್ಕಾರ ಸೂಕ್ತವಾಗಿ ಪ್ರತಿಭೆ ಗುರ್ತಿಸಿ ಪ್ರೋತ್ಸಾಹ ದನ ನೀಡಬೇಕು ಎಂಬುದು.

ಈಕೆಯೊಂದಿಗೆ ರಿಲೇ ಯಲ್ಲಿ ಪದಕ ಗೆದ್ದ ಒಡಿಶಾ ಕ್ರೀಡಾಪಟುವಿಗೆ ಅಲ್ಲಿನ ರಾಜ್ಯ ಸರ್ಕಾರ 1.5 ಕೋಟಿ, ತಮಿಳುನಾಡು ಸರ್ಕಾರ ತಮ್ಮ ರಾಜ್ಯದ ಕ್ರೀಡಾಪಟುವಿಗೆ 50 ಲಕ್ಷ ರೂ ಪ್ರೋತ್ಸಾಹ ಧನ‌ ನೀಡಿ ಅವರಿಗೆ ಗೌರವ ಹಾಗೂ ಉತ್ತೇಜನ ನೀಡುತ್ತಿದೆ. ಆದೃ ಕರ್ನಾಟಕದಲ್ಲಿ ಮಾತ್ರ ಏಕಿಂತ ಪರಿಸ್ಥಿತಿ ಎಂಬುದು ಪೂವಮ್ಮ ಅವರ ಅಳಲಾಗಿದೆ. 2014 ರಲ್ಲಿ ಆಕೆ ಕರ್ನಾಟಕ ಬಿಟ್ಟು ಬೇರೆ ರಾಜ್ಯವನ್ನು ಪ್ರತಿನಿಧಿಸುತ್ತೇನೆ ಎಂದಾಗ ಸರ್ಕಾರ ಆಕೆಗೆ ನೀಡಿದ್ದ ಪ್ರೋತ್ಸಾಹ ಧನದ ಮೊತ್ತ ಏರಿಸಿತ್ತು. ಆದರೆ ಈ ಬಾರಿ ಮತ್ತೊಮ್ಮೆ ಅದೇ ಮೊತ್ತ ನೀಡಿದ್ದು ಆಕೆಗೆ ಬೇಸರ ತಂದಿದೆ. ತಾನು ಆಗಲೇ ಬೇರೆ ರಾಜ್ಯ ಪ್ರತಿನಿಧಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂಬ ಆಲೋಚನೆ ಅವರಿಗೆ ಬಂದಿದ್ದು , ಅದನ್ನು ಕೂಡಾ ಹೇಳಿದ್ದಾರೆ.

ಒಟ್ಟಾರೆ ಕ್ರೀಡಾಳು ಒಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಸಾಧನೆಗೆ , ಅವರು ಪಟ್ಟ ಶ್ರಮ ಹಾಗೂ ಎದುರಿಸಿದ ಸವಾಲುಗಳಿಗೆ ತಕ್ಕಂತ ಪ್ರೋತ್ಸಾಹ ಅವರಿಗೆ ದಕ್ಕುತ್ತಿಲ್ಲ ಎಂಬುದು ಪೂವಮ್ಮನ‌ ಮಾತುಗಳಿಂದ ಸ್ಪಷ್ಟವಾಗಿದೆ. ಇನ್ನಾದರೂ ಹೊಸ ಸರ್ಕಾರ ಎಚ್ಚೆತ್ತುಕೊಂಡು, ಪೂವಮ್ಮನಂತಹ ಸಾಧಕರಿಗೆ, ಅವರ ಸಾಮರ್ಥ್ಯ ಹಾಗೂ ಪ್ರತಿಭೆಗೆ ಅನುಸಾರವಾಗಿ ಪ್ರೋತ್ಸಾಹ ಧನ‌‌ ನೀಡಿದರೆ ಅವರಿಗೂ ಸಮಾಧಾನ ಹಾಗೂ ಮುಂದೆ ತಮ್ಮ ರಾಜ್ಯವನ್ನು ಪ್ರತಿನಿಧಿಸಬೇಕೆಂಬ ಉತ್ಸಾಹ ಮೂಡುತ್ತದೆ. ಇತರೆ ರಾಜ್ಯಗಳಲ್ಲಿ ನೀಡುವಂತಹ ಪ್ರೋತ್ಸಾಹ ಇಲ್ಲಿ ಕೂಡಾ‌ ದಕ್ಕುವಂತಾಗಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here