ಬಿಯರ್ ಪ್ರೇಮಿಗಳಿಗೆ ಕುಮಾರಸ್ವಾಮಿ ಬಜೆಟ್ ನಲ್ಲಿ ಬೆಲೆ ಏರಿಕೆ ಶಾಕ್

ಬಿಯರ್, ಡ್ರಾಟ್ ಬಿಯರ್, ಲೋ ಆಲ್ಕೋಹಾಲಿಕ್ ಪಾನೀಯ ದರ ಹೆಚ್ಚಳ

ಬಿಯರ್ ಸೇರಿ ಲೋ ಆಲ್ಕೋಹಾಲಿಕೆ ಬಿವರೇಜಸ್ ಸುಂಕ ಹೆಚ್ಚಿಸಿದ ಸರ್ಕಾರ .
ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಗೌರವಧನ 500 ರೂ.ಗೆ ಹೆಚ್ಚಳ

ಅಂಗನವಾಡಿ ಸಹಾಯಕಿಯರ ಗೌರವ ಧನ 250 ರೂ.ಗೆ ಹೆಚ್ಚಳ

ನವೆಂಬರ್ 1ರಿಂದಲೇ ಗೌರವಧನ ಹೆಚ್ಚಳ

ಇದಕ್ಕಾಗಿ ಹೆಚ್ಚುವರಿ 60 ಕೋಟಿ ರೂ.ಅನುದಾನ

ಸಾಲ ಮನ್ನಾ ಯೋಜನೆಗೆ ಹಣ ಬಿಡುಗಡೆ

2019-20ರ ಸಾಲಲ್ಲಿ ಸಾಲ ಮನ್ನಾ ಯೋಜನೆಗೆ 12,650 ಕೋಟಿ ರೂ ಮೀಸಲು

ರೈತರ ಬೆಳೆ ಸಾಲ ಮನ್ನಾಗಾಗಿ ಸಹಕಾರ ಬ್ಯಾಂಕ್ಸ್ ಗೆ ಈ ಬಾರಿ 6,150 ಕೋಟಿ

ರೈತರ ಬೆಳೆ ಸಾಲ ಮನ್ನಾಗಾಗಿ ವಾಣಿಜ್ಯ ಬ್ಯಾಂಕ್ಸ್ ಗೆ ಈ ಬಾರಿ 6,500 ಕೋಟಿ

ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆ 2019ರ ಜೂನ್ ನೊಳಗೆ ಪೂರ್ಣ

ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ 2019-20ರೊಳಗೆ ಪೂರ್ಣಕ್ಕೆ ಯೋಜನೆ

ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ

ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ

ಬಾಲಗಂಗಾನಾಥಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ

ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ

ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ

ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ 10 ಕೋಟಿ ಅನುದಾನ
ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ

ರಾಜ್ಯದ 5 ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ

ದಾವಣಗೆರೆ, ತುಮಕೂರು, ಧಾರವಾಡ, ಗದಗ, ಕಲಬುರಗಿಯಲ್ಲಿ ಮುಸ್ಲಿಂ ಹೆಣ್ಮಕ್ಕಳ ಹಾಸ್ಟೆಲ್

ಮುಸ್ಲಿಂ ಖಬರ್ಸ್ತಾನಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ

ಅಲ್ಪಸಂಖ್ಯಾತರ ಮೂಲ ಸೌಲಭ್ಯ ಅಭಿವೃದ್ಧಿಗೆ 400 ಕೋಟಿ ರೂ.
ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.

ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಮಡಿಕೇರಿಯಲ್ಲಿ ಕ್ರೀಡಾ ಹಾಸ್ಟೆಲ್

10 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ

ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ,

ಕಲಬುರಗಿ, ಕೋಲಾರ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕ್ರೀಡಾ ಹಾಸ್ಟೆಲ್

ರಾಜ್ಯದ 4 ಜಿಲ್ಲಾ ಕ್ರೀಡಾಂಗಣಗಳ ಮೇಲ್ದರ್ಜೆಗೆ, 4 ಕೋಟಿ ರೂ. ಅನುದಾನ

ಮಂಡ್ಯ, ಬೀದರ್, ತುಮಕೂರು, ಹಾಸನ ಕ್ರೀಡಾಂಗಣಗಳ ಅಭಿವೃದ್ಧಿ
ಸುತ್ತೂರು ಮಠದ ವತಿಯಿಂದ ಕರಕುಶಲಕರ್ಮಿಗಳಿಗೆ ಅರ್ಬನ್ ಹಾಟ್ ವ್ಯವಸ್ಥೆಗೆ 5 ಕೋಟಿ ಅನುದಾನ

ಕೆಂಗಲ್ ಹನುಮಂತಯ್ಯ ಹಾಸ್ಟಲ್ ಗ್ರಂಥಾಲಯ ಅಭಿವೃದ್ದಿಗೆ 5 ಕೋಟಿ

ಬೆಂಗಳೂರು ಕರಗ ಉತ್ಸವ ಆಚರಿಸುವ 139 ಸಂಸ್ಥೆಗಳಿಗೆ , ಆದಿಶಕ್ತಿ ಮಾತೆಯರ ವೃದ್ಧಾಶ್ರಮ

ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ

ಮಂಡ್ಯದ ಕರ್ನಾಟಕ ಸಂಘ, ಜಾನಪದ ಪರಿಷತ್, ಮಲೇಬೆನ್ನೂರಿನ ವೀರಭದ್ರೇಶ್ವರ ಟ್ರಸ್ಟ್ಗೆ ತಲಾ 1 ಕೋಟಿ ರೂ.

ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹೆಸರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ ..
ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.

ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ

ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗೆ 134 ಕೋಟಿ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here