ಸಂಸದರಾದ ಪ್ರತಾಪ್ ಸಿಂಹ ಅವರು ಮತ್ತೊಂದು ಎಡವಟ್ಟು ಮಾಡಿಕೊಂಡು ಜನರಿಂದ ತೀವ್ರವಾಗಿ ಟೀಕೆಗಳನ್ನು ಎದುರಿಸಬೇಕಾಗಿದೆ. ಬಿಜೆಪಿ ಹೈಕಮಾಂಡನ್ನು ಓಲೈಸುವ ಆತುರದಲ್ಲಿ ಪ್ರತಾಪ್ ಸಿಂಹ ಅವರು ಮಾಡಿರುವ ತಪ್ಪು ಈಗ ಜನರ ನಿಂದನೆಗೆ ಕಾರಣವಾಗಿದೆ‌. ಇದಕ್ಕೆ ಕಾರಣವಾದರೂ ಏನು? ಏಕೆ ಇದ್ದಕ್ಕಿದ್ದಂತೆ ಜನರು ಹೀಗೆ ಪ್ರತಾಪ್ ಸಿಂಹ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಲಿದ್ದಾರೆ ಎನ್ನುವುದಾದರೆ, ರಾಜ್ಯದಲ್ಲಿ ಉಪಚುನಾವಣೆಯ ನಂತರ ಬಿಜೆಪಿಯು ಅಖಂಡ ವಿಜಯವನ್ನು ಪಡೆದಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಂಬಂಧ ಬಿಜೆಪಿ ಗೆಲುವಿನ ಬಗ್ಗೆ ಪ್ರತಾಪ್ ಸಿಂಹ ಅವರು ಒಂದು ಪೋಸ್ಟ್ ಹಾಕಿದ್ದರು.

ಅವರು ತಮ್ಮ ಪೋಸ್ಟ್ ನಲ್ಲಿ ರಾಜ್ಯದ ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಯ ಮಾಡಿರುವ ಸಾಧನೆಯ ಕೀರ್ತಿಯು ಯಡಿಯೂರಪ್ಪ ಅವರಿಗೆ ಸೇರಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಪ್ರಭಾವ ಹೆಚ್ಚಾದುದು ಎಂದು ಬರೆದು ಕೊಂಡಿದ್ದು, ಈ ಪೋಸ್ಟ್ ನೋಡಿದ ಜನರು ಪ್ರತಾಪ್ ಸಿಂಹ ವಿರುದ್ಧ ತೀವ್ರವಾಗಿ ಟೀಕೆಗಳನ್ನು ಮಾಡಲು ಆರಂಭಿಸಿದ್ದಾರೆ. ಅದರಲ್ಲಿ ಕೆಲವರು ಹೈಕಮಾಂಡ್ ಗೆ ಜಾಸ್ತಿ ಬಕೆಟ್ ಹಿಡಿಬೇಡಪ್ಪ. ನಿನ್ನಂತ ಬಕೆಟ್ ಗಳನ್ನ ಅವರು ದೂರನೇ ಇಡೋದು. ರಾಷ್ಟ್ರ ನಾಯಕರ ಜೊತೆ, ರಾಜ್ಯ ನಾಯಕರಿಗೂ ಸಮಾನ ಮರ್ಯಾದೆ ಕೊಡೊದು ಕಲಿ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡೋದು ಮೊದಲು ಕಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ ಕೆಲವರು ನಿಮಗೆ ತಾಕತ್ತಿದ್ದರೆ ರಾಜೀನಾಮೆ ನೀಡಿ ಯಡಿಯೂರಪ್ಪ ಅವರ ಹೆಸರು ಹೇಳದೆ ಗೆದ್ದು ತೋರಿಸಿ ಎಂದೂ, ನಾವು ಯಡಿಯೂರಪ್ಪನವರನ್ನು ನೋಡಿ ವೋಟ್ ಹಾಕಿದ್ದು, ನಿಮ್ಮ ಮಾತನ್ನು ಹಿಡಿತದಲ್ಲಿಟ್ಟುಕೊಳ್ಳಿ ಪ್ರತಾಪ್ ಸಿಂಹ ಅವರೇ, ಮೊದಲು ಆಗಬೇಕಾಗಿರುವ ಕೆಲಸಗಳ ಕಡೆ ನೋಡಿ ಎಂದು, ಆಯುರ್ವೇದ ಅಂಗಡಿಗಳಲ್ಲಿ ಮುಸ್ತಕಾರಿಷ್ಟ ದೊರೆಯುತ್ತದೆ. ದಿನಕ್ಕೆರಡು ಬಾರಿ ಊಟದ ನಂತರ ತೆಗೆದುಕೊಳ್ಳಿ. ಹೊಟ್ಟೆ ಉರಿ ಬಲುಬೇಗ ಶಮನವಾಗುತ್ತದೆ ಎಂದೂ ಹೀಗೆ ನಾನಾ ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿದ್ದಾರೆ ಜನರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here