ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜುಲೈ ಐದರಂದು ಬಜೆಟ್ ಮಂಡಿಸಲು ಸಿದ್ದತೆ ನಡೆಸುತ್ತಿದ್ದ ಬೆನ್ನಲ್ಲೇ ಕೋರ್ಟ್ ಆದೇಶವೊಂದು ಕುಮಾರಸ್ವಾಮಿ ಅವರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕುಮಾರಸ್ವಾಮಿ ಅವರು ಇದೇ ಜುಲೈ ಐದರಂದೇ 82 ನೇ ಹೆಚ್ಚುವರಿ ಸಿವಿಲ್ಸ್ ಮತ್ತು ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.2006 ರಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಅಂದಿನ ಅರಣ್ಯ ಸಚಿವ ಚೆನ್ನಿಗಪ್ಪ ಅವರ ಒತ್ತಾಯದ ಮೇರೆಗೆ ಶ್ರೀರಾಮ್ ಮತ್ತು ರವಿಪ್ರಕಾಶ್ ಎನ್ನುವವರರಿಗೆ ಬಿಡಿಎ ಗೆ ಸೇರಿದ್ದ ಜಮೀನನ್ನು ಹಂಚಿಕೆ ಮಾಡಿದ್ದರು. ಸುಮಾರು 3 ಎಕರೆ 24 ಕುಂಟೆ ಜಮೀನನ್ನು ಡಿ ನೋಟಿಫೈ ಮಾಡಿದ್ದರು.ನಂತರ ಡಿ ನೋಟಿಫೈ ಮಾಡಿದ್ದ ಹಣದಲ್ಲಿ ಕುಮಾರಸ್ವಾಮಿ ಮತ್ತು ಚೆನ್ನಿಗಪ್ಪ ಪಾಲು ಪಡೆದಿದ್ದರು ಎಂದು ಚಾಮರಾಜನಗರದ ಮಹದೇವ ಸ್ವಾಮಿ ಎನ್ನುವ ವ್ಯಕ್ತಿ ಲೋಕಾಯುಕ್ತ ಕೋರ್ಟ್ ಮೆಟ್ಟಿಲು ಹತ್ತಿದ್ದರು.ಅದರ ವಿಚಾರಣೆ ಈ ಹಿಂದೆಯೂ ನಡೆದಿತ್ತು.ಇದೀಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಕುಮಾರಸ್ವಾಮಿ ಅವರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.ಇದೇ ಜುಲೈ ಐದರಂದು ಕುಮಾರಸ್ವಾಮಿ ಅವರು ಕೋರ್ಟ್ ವಿಚಾರಣೆಗೆ ಹಾಜರಾಗಬೇಕಿದೆ.ಜುಲೈ ಐದರಂದು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆ ಇರುವುದರಿಂದ ಕುಮಾರಸ್ವಾಮಿ ಅವರು ಕೋರ್ಟ್ ಗೆ ಹಾಜರಾಗುತ್ತಾರ ಅಥವಾ ಮತ್ತೊಂದು ದಿನ ವಿಚಾರಣೆ ಇರುತ್ತದಾ ಕಾದುನೋಡಬೇಕಿದೆ‌.

Photo credit :- Facebook HDK Fans Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here