ಜಿಲ್ಲಾಧಿಕಾರಿಯಾಗಿದ್ದರು ವಾಯು ಮಾಲಿನ್ಯ ನಿಯಂತ್ರಣ ಹಾಗೂ ಸಾರ್ವಜನಿಕ ಸಾರಿಗೆಗೆ ಪ್ರಾಧಾನ್ಯತೆ ನೀಡಬೇಕೆಂಬ ಮಹತ್ತರವಾದ ಉದ್ದೇಶದಿಂದ ಉಡುಪಿಯ ಜಿಲ್ಲಾಧಿಕಾರಿಯಾಗಿರುವ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ವಾರಕ್ಕೊಮ್ಮೆ ತಾವು ಹಾಗೂ ತಮ್ಮ ಕಛೇರಿಯಲ್ಲಿ ಕೆಲಸ ಮಾಡುವ. ಸಿಬ್ಬಂದಿಗಳು ಸರ್ಕಾರ ನೀಡಿರುವ ಹಾಗೂ ಖಾಸಗಿ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಒಂದು ವಿನೂತನ ಯೋಜನೆಗೆ ಚಾಲನೆಯನ್ನು ನೀಡುವ ಮೂಲಕ ಎಲ್ಲರಿಂದ ಶ್ಲಾಘನೆ ಪಡೆಯುತ್ತಿರುವುದು ಮಾತ್ರವಲ್ಲದೆ, ಅವರ ಈ ನೂತನ ಕಾರ್ಯ ಈಗ ಎಲ್ಲೆಡೆ ಎಲ್ಲರ ಗಮನವನ್ನು ಸೆಳೆಯುತ್ತಾ ಸುದ್ದಿಯಾಗಿದೆ.

ನಿನ್ನೆ ಅಂದರೆ ಗುರುವಾರ ಜಿಲ್ಲಾಧಿಕಾರಿ ಆದ ಹೆಪ್ಸಿಬಾ ಅವರು ತಮಗೆ ನೀಡಿರುವ ಎಸಿ ಕಾರನ್ನು ಮನೆಯಲ್ಲೇ ಬಿಟ್ಟು ವಾಹನ ಚಾಲಕ ಹಾಗೂ ಅಂಗರಕ್ಷಕನ ಜೊತೆಗೆ ಸಾರ್ವಜನಿಕ ವಾಹನದಲ್ಲಿ ಮಂಗಳೂರಿನ ರಜತಾದ್ರಿ ನಗರದಲ್ಲಿರುವ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದ್ದಾರೆ. ಅಲ್ಲದೆ ಅವರೊಂದಿಗೆ ಅಪರ ಜಿಲ್ಲಾಧಿಕಾರಿಯಾದ ವಿದ್ಯಾಕುಮಾರಿ ಅವರು ಕೂಡಾ ಅದೇ ವಾಹನ ಏರಿದ್ದಾರೆ. ಅನಂತರ ಅಜ್ಜರಕಾಡು ವಸತಿಗೃಹದಲ್ಲಿರುವ ವಿವಿಧ ಅಧಿಕಾರಿಗಳು ಕೂಡಾ ಇದೇ ವಾಹನದಲ್ಲಿ ಸಾಗಿದ್ದಾರೆ‌. ಬಸ್ ಬನ್ನಂಜೆಯ ತಾಲೂಕು ಕಛೇರಿ ಮಾರ್ಗವಾಗಿ ಸಾಗುತ್ತಾ, ಸಿಟಿ ಬಸ್ ನಿಲ್ದಾಣ ,ಎಂಜಿಎಂ ಕಾಲೇಜು ಮಾರ್ಗದಲ್ಲಿ ಸಾಗುತ್ತಾ, ಇತರೆ ಸಿಬ್ಬಂದಿಯನ್ನು ಹತ್ತಿಸಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ತಲುಪಿದೆ.

ಸಂಜೆ ಕರ್ತವ್ಯ ಮುಗಿದ ಮೇಲೆ ಕೂಡಾ ಎಲ್ಲಾ ಸಿಬ್ಬಂದಿ ಕಛೇರಿಯಿಂದ ಸಾರ್ವಜನಿಕ ವಾಹನದಲ್ಲೇ ಮನೆಗಳಿಗೆ ತೆರಳಿದ್ದಾರೆ. ಜಿಲ್ಲಾಧಿಕಾರಿಗಳು ಮಾತ್ರವಲ್ಲದೆ ಸಿಬ್ಬಂದಿ ಕೂಡಾ ಹೀಗೆ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ಯೋಜನೆ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ವಾರಕ್ಕೊಮ್ಮೆಯಾದರೂ ಹೀಗೆ ಮಾಡುವುದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಬಹುದು ಎಂಬ ಆಲೋಚನೆ ಜನಮೆಚ್ಚುಗೆ ಪಡೆದಿದೆ. ಇದರಿಂದ ಜನರು ಕೂಡಾ ಪ್ರೇರಣೆ ಪಡೆದುಕೊಂಡರೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಒಂದು ದೊಡ್ಡ ಕೊಡುಗೆ ನೀಡಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here