ಕುಟುಂಬದಲ್ಲಿ ಒಬ್ಬರು ರಾಜಕಾರಣಕ್ಕೆ ಇಳಿದು, ಒಂದು ಅಧಿಕಾರ ಪಡೆದು ಬಿಟ್ಟರೆ ಉಳಿದ ಕುಟುಂಬ ಸದಸ್ಯರು, ಅವರ ಸಂಬಂಧಿಕರು ಹೀಗೆ ಎಲ್ಲರ ಜೀವನವೇ ಬದಲಾಗಿಬಿಡುತ್ತದೆ. ಎಂಎಲ್ಎ , ಎಂಪಿಗಳಾದರೆ ಅಲ್ಲಿಗೆ ಅವರ ಜೀವನ ಶೈಲಿಯೇ ಬದಲಾಗಿ ಸೆಲೆಬ್ರಿಟಿಗಳೇ ಆಗಿ ಬಿಡುತ್ತಾರೆ. ಆದರೆ ಇಂತಹವರ ಮಧ್ಯೆದಲ್ಲೂ ಕೆಲವರು ಆಗಾಗ ಮಾದರಿಯಾಗಿ‌‌ ಕಾಣುತ್ತಾರೆ. ಅಧಿಕಾರ ಎಂಬುದು ಅವರ ಜೀವನದಲ್ಲಿ ಯಾವುದೇ ಬದಲಾವಣೆ ತರಲಾರದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದ್ದಾರೆ. ಮಗ ಶಾಸಕನಾಗಿದ್ದರೂ, ತಂದೆ ಮಾತ್ರ ತನ್ನ ಹಳೇ ಸೈಕಲ್ ನಲ್ಲೇ ಜೀವನವನ್ನು ನಡೆಸುತ್ತಿದ್ದಾರೆ.

ಬೆಳ್ತಂಗಡಿಯ ಶಾಸಕರಾದ (ಎಂಎಲ್ಎ) ಹರೀಶ್ ಪೂಂಜಾರಾ ಅವರ ತಂದೆ ಮುತ್ತಣ್ಣ ಅವರು ಮಗ ಶಾಸಕನಾದರೂ ಕೂಡಾ ಇಂದಿಗೂ ಒಂದು ಹಳೇ ಸೈಕಲ್ ತುಳಿಯುತ್ತಾ, ಸಾಧಾರಣ ಶರ್ಟ್ ಹಾಗೂ ಲುಂಗಿ ತೊಟ್ಟು, ಹಾಲಿನ ಕ್ಯಾನನ್ನು ಸೈಕಲ್ ಗೆ ತೂಗು ಹಾಕಿ ಕೃಷಿ ಕಾರ್ಯ, ಹಾಲಿನ ಡೈರಿ ಕೆಲಸಗಳನ್ನು ಮಾಡುವುದು ನೋಡಿದಾಗ ಇವರೊಬ್ಬ ಶಾಸಕರ ತಂದೆ ಎನ್ನುವುದಕ್ಕಿಂತ , ಒಬ್ಬ ಶ್ರಮ ಜೀವಿ, ಶ್ರಮವೇ ಜೀವನ ಅಧಿಕಾರವಲ್ಲ ಎಂಬ ಸಂದೇಶವನ್ನು ಸಾರುತ್ತಿರುವ ವ್ಯಕ್ತಿಯಂತೆ ಕಾಣುತ್ತಾರೆ. 74 ವರ್ಷ ವಯಸ್ಸಿನ ಮುತ್ತಣ್ಣ ಅವರು ತಮ್ಮ ಬದುಕನ್ನು ಎಂದಿನಂತೆ ನಡೆಸುತ್ತಿದ್ದರೆ, ಅವರ ಮಗ ಹರೀಶ್ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ.

ಅವರ ದಿನಚರಿ ಬೆಳಿಗ್ಗೆ ಆರರಿಂದಲೇ ಆರಂಭವಾಗುತ್ತದೆ. ಡೈರಿಗೆ ಹಾಲು ಹಾಕುವುದು, ತೋಟದ ಕೆಲಸ ಮಾಡಿ, ಊರೊಳಗೆ ಸಾಮಾನ್ಯರಂತೆ ಓಡಾಡಿಕೊಂಡಿರುವ ಮುತ್ತಣ್ಣನವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಟುಂಬದವರು ರಾಜಕೀಯದಲ್ಲಿ, ಅಧಿಕಾರದಲ್ಲಿ ಇದ್ದಾರೆ ಎಂದು ಮೆರೆಯುವ, ಅವರ ಹೆಸರಿನಲ್ಲಿ ಗರ್ವದಿಂದ ವರ್ತಿಸುವ ಮಂದಿ ಮುತ್ತಣ್ಣನವರನ್ನು ನೋಡಿ ಒಳ್ಳೆಯದನ್ನು, ಹಾಗೂ ಅಧಿಕಾರ ಶಾಶ್ವತವಲ್ಲ ಎಂಬ ನೀತಿಯನ್ನು ಕಲಿಯಬೇಕಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here