ಪ್ರಶ್ನೆಗಳಿಗೆ ಉತ್ತರಿಸಿ ಕೋಟಿ ಗೆಲ್ಲುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ, ಸೋನಿ ಟಿವಿ ಯ ಪ್ರತಿಷ್ಠಿತ ಕಾರ್ಯಕ್ರಮ. ಬಾಲಿವುಡ್ ‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಿರೂಪಕರಾಗಿರುವ ಈ ಕಾರ್ಯಕ್ರಮ ಇಡೀ ದೇಶವೇ ಅಲ್ಲದೇ ವಿದೇಶಗಳಲ್ಲಿ ಕೂಡಾ ಜನಮನ್ನಣೆ ಪಡೆದಿದ್ದು, ಅದರಲ್ಲಿನ ಕರಮ್ ವೀರ್ ಎಪಿಸೋಡ್ ಗೆ ಅತಿಥಿಯಾಗಿ ಹಿಂದಿಯ KBC ಯಲ್ಲಿ ಜನರ ಮುಂದೆ ಬರುತ್ತಿದ್ದಾರೆ ಕನ್ನಡ ನಾಡಿನ ಜನರ ಗೌರವ ಮನ್ನಣೆ ಪಡೆದು, ಸಮಾಜ ಸೇವೆಯಲ್ಲಿ ಅಗ್ರಮಾನ್ಯರಾಗಿರುವ ಇನ್ಫೋಸಿಸ್ ಫೌಂಡೇಶನ್ ನ ಸಂಸ್ಥಾಪಕರೂ ಆದ ಸುಧಾ ಮೂರ್ತಿ ಅವರು‌. ಸೋನಿ ಟಿವಿ ಹಂಚಿಕೊಂಡಿರುವ ಅಫಿಶಿಯಲ್ ಪ್ರೋಮೋ ಈಗಾಗಲೇ ಸಾವಿರಾರು ಜನರಿಂದ ವೀಕ್ಷಿಸಲ್ಪಟ್ಟಿದ್ದು, ಸುಧಾ ಮೂರ್ತಿ ಅವರು ತಾವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ, ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸುಧಾ ಮೂರ್ತಿಯವರು ಮಾತನಾಡುತ್ತಾ ತಾನು ಕರಮ್ ವೀರ್ ಎಪಿಸೋಡ್ ನಲ್ಲಿ ಭಾಗವಹಿಸುತ್ತಿರುವುದು ಬಹಳ ಸಂತೋಷ ತಂದಿದೆ. ಕರ್ಮ ಅಂದರೆ ಮಾಡುತ್ತಿರುವ ಕೆಲಸದಿಂದ ಗುರ್ತಿಸಲ್ಪಟ್ಟಿರುವುದು ಸಂತೋಷದ ವಿಷಯ ಅಂದಿರುವ ಅವರು ತಾನು ಹಿರಿಯ ನಟ ಅಮಿತಾಬ್ ಅವರ ಅಭಿಮಾನಿಯೆಂದೂ, ಅವರ ಸಿನಿಮಾ ನೋಡಿದ್ದು, ಇಂದು ಅವರನ್ನು ಭೇಟಿಯಾಗುವ ಅವಕಾಶ ದೊರೆತಿರುವುದು ಖುಷಿಯಾಗಿದೆ ಎಂದಿದ್ದಾರೆ. ಅಲ್ಲದೆ ಅವರು ಸಂದರ್ಶನ ಮಾಡುತ್ತಿರುವವರ ಜೊತೆ ತಮ್ಮ ಇನ್ಫೋಸಿಸ್ ಫೌಂಡೇಶನ್ ನ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದ್ದಾರೆ.

ಸುಧಾ ಮೂರ್ತಿ ಅವರು ತಮ್ಮ ಫೌಂಡೇಶನ್ ಮೂಲಕ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಂತ್ರಸ್ತರಿಗೆ ನೆರವು ನೀಡುವುದು, ಸುಮಾರು ಹದಿನಾರು ಸಾವಿರ ಶೌಚಾಲಯಗಳ ನಿರ್ಮಾಣ, ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕಳೆದ ಐದು ವರ್ಷಗಳಿಂದ ಸ್ಯಾನಿಟರಿ ನ್ಯಾಪ್ಕಿನ್ ನೀಡುತ್ತಿರುವುದು, ಸಾವಿರಾರು ಗ್ರಂಥಾಲಯಗಳ ನಿರ್ಮಾಣ, ಪ್ರತಿದಿನ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ ಒದಗಿಸುತ್ತಿರುವುದು, ಬೆಂಗಳೂರಿನ ಮೆಟ್ರೋ ನಿಲ್ದಾಣದ ಸ್ಥಾಪನೆ ಹೀಗೆ ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿರುವುದರ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Celebrated author and social worker, Sudha Murthy in an EXCLUSIVE LIVE shares her experience of being a part of #KBCKaramveer

Sony Entertainment Television यांनी वर पोस्ट केले सोमवार, ११ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here