ಜೈನ ಧರ್ಮೀಯರು ಕನ್ನಡ ನಿರ್ಲಕ್ಷ್ಯ ಮಾಡಿದ್ದಾರೆಂದು ಅದನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರರು ಜೈನ ಮಂದಿರದ ಪ್ರವೇಶ ದ್ವಾರದ ಬಳಿ ಹಾಕಿದ್ದ ಹಿಂದಿ ಬ್ಯಾನರ್ ಅನ್ನು ತೆಗೆದು ಹಾಕಿದ್ದರು. ಇನ್ನು ಈ ಘಟನೆ ನಡೆದ ಮೇಲೆ ಜೈನರು ಇಂತಹ ಕೆಲಸ ಮಾಡಿದವರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಬೇಕು, ಅವರಿಗೆ ಶಿಕ್ಷೆಯಾಗಬೇಕು ಎಂದೆಲ್ಲಾ ಹೇಳಿದ್ದಾಯ್ತು. ಅಲ್ಲದೆ ಆರು ಜನರ ವಿರುದ್ಧ ನಾನ್ ಬೇಲಬಲ್ ವಾರೆಂಟ್ ಕೂಡಾ ಜಾರಿಯಾಯ್ತು. ಈ ಘಟನೆ ನಡೆದ ಮೇಲೆ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಒಂದನ್ನು ಮಾಡಿದರು.

ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಜೈನರ ಮೇಲೆ ಧಾಳಿ ಮಾಡಿದವರನ್ನು ರೌಡಿಗಳು ಎಂದು ಬಿಂಬಿಸುವಂತೆ ಒಂದು ಟ್ವೀಟ್ ಮಾಡಿದರು. ಆದರೆ ಅದನ್ನು ವಿರೋಧಿಸಿ ಅನೇಕರು ಟ್ವೀಟ್ ಗಳ ಮೂಲಕ ಪ್ರತಿಕ್ರಿಯೆ ನೀಡಿದಾಗ, ಪರಿಸ್ಥಿತಿಯನ್ನು ಅರಿತುಕೊಂಡ ಅವರು ಮತ್ತೊಂದು ಟ್ವೀಟ್ ಮೂಲಕ ಜೈನ ಧರ್ಮಕ್ಕೆ ರತ್ನತ್ರಯರ ಕೊಡುಗೆಯನ್ನು ತಿಳಿದು, ಇತಿಹಾಸ ತಿಳಿದು ಯುವ ಜೈನರು ಕನ್ನಡ ಕಲಿತು, ಕನ್ನಡದಲ್ಲೇ ಸಂವಹನವನ್ನು ಮಾಡಬೇಕು ಎಂದು ಹೇಳಿದ್ದರು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನವರಸ ನಾಯಕ ಜಗ್ಗೇಶ್ ಅವರು ಒಂದು ಟ್ವೀಟ್ ಮಾಡಿ ಕನ್ನಡದ ಹಿರಿಮೆಯನ್ನು ಸಾರಿದ್ದಾರೆ.

ಜಗ್ಗೇಶ್ ಅವರು ಟ್ವೀಟ್ ನಲ್ಲಿ
ಕರ್ನಾಟಕದಲ್ಲಿ ಕನ್ನಡವೆ ಧರ್ಮ! ಅಂದಮೇಲೆ ಯಾರೆಆದರು ಇಲ್ಲಿ ಬಂದಮೇಲೆ ಕನ್ನಡಧರ್ಮಗೌರವಿಸಿ! ಕನ್ನಡನೆಲಕ್ಕೆ ಬಂದ ಎಲ್ಲಾಜಾತಿಧರ್ಮ ನನ್ನವರು ಎಂದು ಅಪ್ಪುತ್ತದೆ ಕನ್ನಡನಾಡು! ಅಂದಮೇಲೆ ಅನ್ಯರು ಯಾರೆಬಂದರು ಕನ್ನಡವನ್ನ ಅಪ್ಪಬೇಕು ಅದೆನಿಜಧರ್ಮ! ಅನ್ನನೀರು ನೀಡುವನೆಲ ತಾಯಿಮಡಿಲಂತೆ! ಇಲ್ಲಿಇರಲು ಬಂದವರು ಇಲ್ಲಿಯವರಾಗಿ! ಸಿರಿಗನ್ನಡಂಗೆಲ್ಗೆ
ಎಂದು ಬರೆದು ಎಲ್ಲರಿಗೂ ಉತ್ತರವನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here